Tiger Prabhakar Birthday : 17 ನೇ ವಯಸ್ಸಿಗೆ 3 ನೇ ಮದುವೆ, ನನ್ನ ಜೀವನದ ಅತೀ ಕೆಟ್ಟ ನಿರ್ಧಾರವದು- ಅಂಜು

Tiger prabhakar Birthday: ಸಿನಿ ಲೋಕದಲ್ಲಿ ಗುರುತಿಸಿಕೊಂಡು ದೊಡ್ದ ಮಟ್ಟದ ಪಬ್ಲಿಸಿಟಿ ಗಳಿಸಿ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು ಕೂಡ ಸ್ಟಾರ್ ನಟರೆಂಬ ನೇಮ್ ಫ್ರೇಮ್ ಗಳಿಸಿ ವೈಯಕ್ತಿಕ ಬದುಕಿನಲ್ಲಿ ಖಳ ನಾಯಕರಗುವುದುಂಟು. ಇಂದು ಸ್ಯಾಂಡಲ್‌ವುಡ್‌ನ ಟೈಗರ್‌ ಎಂದೇ ಪ್ರಖ್ಯಾತಿ ಪಡೆದ ನಟ ಟೈಗರ್‌ ಪ್ರಭಾಕರ್‌ ಅವರ ಹುಟ್ಟಿದ ದಿನ(Tiger prabhakar Birthday) ಬಣ್ಣದ ಲೋಕದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರ ರಂಗದಲ್ಲಿ ಖಳನಾಯಕನಾಗಿ ತೆರೆಮೇಲೆ ರಂಜಿಸಿದ ನಟನ ಸಿನಿ ಜರ್ನಿ ಯ ಜೊತೆಗೆ ತಮ್ಮ ವೈಯಕ್ತಿಕ ಬದುಕಿನ ವಿಚಾರಕ್ಕೂ ಆಗಾಗ ಸುದ್ದಿಯಾಗಿದ್ದರು. ಇದೀಗ ಟೈಗರ್ ಪ್ರಭಾಕರ್‌(Tiger Prabhakar)ಅವರ ಮೂರನೇ ಪತ್ನಿ ಅಂಜು ಪ್ರಭಾಕರ್‌, ತನ್ನ ಹರೆಯದ ದುಡುಕಿನ ನಿರ್ಧಾರದ ಬಗ್ಗೆ ಮದುವೆಯ ಬಗ್ಗೆ ತೆಲುಗು ಯೂಟ್ಯೂಬ್ ಚಾನೆಲ್ (YouTube Channel) ಒಂದರಲ್ಲಿ ತಮ್ಮ ಮನದಾಳದ ಮಾತುಗಳನ್ನೂ ಆಡಿದ್ದಾರೆ.

ನಟಿ ಅಂಜು ತಮ್ಮ 17ನೇ ವಯಸ್ಸಿನಲ್ಲಿಯೇ ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಕನ್ನಡ ಚಿತ್ರರಂಗದಲ್ಲಿ (Kannada Film Industry)ಅವಕಾಶ ದೊರೆತು, ಟೈಗರ್‌ ಪ್ರಭಾಕರ್‌ ಅವರ ಪರಿಚಯವಾಗಿ,ಆ ಪರಿಚಯ ಮುಂದೆ ಮದುವೆಯ(Marriage) ಹಂತಕ್ಕೆ ತಲುಪುತ್ತದೆ. ತೆಲುಗಿನಲ್ಲಿ (Teulgu) ಶೋಭನ್ ಬಾಬು, ಚಿರಂಜೀವಿ, ಮೋಹನ್ ಬಾಬು(Mohan Babu)ಮೊದಲಾದ ಸ್ಟಾರ್ ನಟರ ಜೊತೆಗೆ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಅಂಜು ಕಾಣಿಸಿಕೊಂಡು ಜನ ಮನದಲ್ಲಿ ಗುರುತಿಸಿಕೊಂಡಿದ್ದರು.

ರಾಜಶೇಖರ್ ಅಭಿನಯದ ಶೇಶು ಚಿತ್ರದ ಮೂಲಕ ಬಾಲನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡ ನಟಿ ಅಂಜು ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಆದರೆ 17ನೇ ವಯಸ್ಸಿನಲ್ಲಿ ಅವರ ತೀರ್ಮಾನ ವೊಂದು ಅವರ ಜೀವನದ ಪಥವನ್ನೇ ಬದಲಿಸುತ್ತದೆ ಎಂದು ಅವರು ಕನಸಿನಲ್ಲಿಯೂ ಊಹಿಸಿರಲಿಲ್ಲ. ಅಂಜು ಅವರಿಗೆ ಆಗ 17ರ ಹರೆಯ, ಆಗ ಪ್ರಭಾಕರ್ ಅವರು ತಮ್ಮ ಅಸಿಸ್ಟೆಂಟ್ ಗಳ ಮೂಲಕ ಅಂಜು ಅವರಿಗೆ ಮದುವೆಯ ಆಫರ್ ನೀಡುತ್ತಾರೆ. ಇದರಿಂದ ಅಂಜು ಆಶ್ಚರ್ಯಚಕಿತರಾಗುತ್ತಾರೆ. ಆ ಕ್ಷಣಕ್ಕೆ ಅಂಜು ಅವರಿಗೆ ಪ್ರಭಾಕರ್ ಅವರಿಗೆ ಮದುವೆಯಾಗಿ(Marriage) ಮಕ್ಕಳಿದ್ದಾರೆ (Childrens)ಅನ್ನೋ ವಿಚಾರ ಕೂಡ ಗೊತ್ತಿರಲಿಲ್ಲವಂತೆ. ಇದಕ್ಕಿಂತ ಮಿಗಿಲಾಗಿ ಕನ್ನಡ ಚಿತ್ರರಂಗದಲ್ಲಿ ಆಗಷ್ಟೇ ದಾಪುಗಾಲು ಇಟ್ಟಿದ್ದರಿಂದ ಕನ್ನಡ ಕೂಡ ಗೊತ್ತಿರಲಿಲ್ಲ.

ಈ ನಡುವೆ ಪ್ರಭಾಕರ್ ಅವರು ಆಗಾಗ ಮದುವೆ ಪ್ರಸ್ತಾಪ ಮಾಡುತ್ತಿದ್ದರಂತೆ. ಹೀಗೆ ನಿರಂತವಾಗಿ ಕೇಳುತ್ತಿದ್ದ ಹಿನ್ನೆಲೆ ಅಮ್ಮನ ಬಳಿ ಈ ವಿಚಾರ ಪ್ರಸ್ತಾಪ ಮಾಡುವ ಭರವಸೆ ನೀಡಿದ ಅಂಜು ತಾಯಿಯ ಬಳಿ ಈ ವಿಷಯ ತಿಳಿಸಿದಾಗ ಅಂಜು ಅವರ ತಾಯಿ ಗಾಬರಿಯಾಗಿ ಬಿಟ್ಟಿದ್ದಾರೆ. ಯಾಕಂದ್ರೆ, ಅಂಜು ಅವರ ತಂದೆಗಿಂತ ಪ್ರಭಾಕರ್ ಅವರು ವಯಸ್ಸಿನಲ್ಲಿ (Age difference) ಹಿರಿಯರಾಗಿದ್ದರಂತೆ. ಹೀಗಾಗಿ, ಸಹಜವಾಗಿ ಅಷ್ಟು ವಯಸ್ಸು ಅಂತರವಿರುವ ವ್ಯಕ್ತಿ ಜೊತೆಗೆ ಮದುವೆ ಬೇಡ ಎಂದು ಅಂಜು ತಾಯಿ ನಿರಾಕರಿಸಿ ಬಿಟ್ಟಿದ್ದಾರೆ. ಮನೆಯವರ ಒಪ್ಪಿಗೆ ಸಿಗದಿದ್ದಾಗ ಅಂಜು ನೇರವಾಗಿ ಪ್ರಭಾಕರ್ ಅವರೊಂದಿಗೆ ಇರಲು ಸಿದ್ದಳಾಗಿ ಹೊರಟೆ ಬಿಟ್ಟರಂತೆ. ಹಾಗೆಂದು ಅಂಜು ಅವರೇನು ಮದುವೆಯಾಗಲೂ ಮಾನಸಿಕವಾಗಿ ರೆಡಿಯಿರಲಿಲ್ಲ. ಸಿನಿಮಾ ಮಾಡಬೇಕು. ಅದರಲ್ಲಿಯೇ ಮುಂದುವರಿಯಬೇಕು ಎಂಬ ಉದ್ದೇಶ ಮಾತ್ರ ಮನಸ್ಸಲ್ಲಿ ಗಟ್ಟಿಯಾಗಿ ನೆಲೆಸಿತ್ತು.

ಮನೆಯವರ ಸಮ್ಮತಿ ಇಲ್ಲದೆ ಪ್ರಭಾಕರ್ ಅವರ ಮನೆಯಲ್ಲಿಯೇ ನೆಲೆಸಿದ್ದ ಅಂಜು ಅವರು ಪ್ರಭಾಕರ್‌ ಅವರ ಮದುವೆ ಆಗಿರಲಿಲ್ಲ. ದಿನ ಕಳೆಯುತ್ತಾ ಹೋದಂತೆ ಅಂದರೆ ಆರೇಳು ತಿಂಗಳ ಬಳಿಕ, ಆಕೆಯೇ ಬಯಸಿಕೊಂಡು ಹೋದ ಜೀವನಕ್ಕೆ ಬೆಲೆಯೇ ಇಲ್ಲ ಎಂಬ ಅನಿಸಿಕೆ ಅಂಜು ಅವರಿಗೆ ಬರಲು ಆರಂಭವಾಗಿ ತಾನಾಗೇ ಪ್ರಭಾಕರ್ ಅವರು ಬೇಕು ಎಂದು ಹೋಗಿ ತಪ್ಪು ಮಾಡಿಬಿಟ್ಟೆ ಎಂದು ಅರಿವಾದಾಗ ಕಾಲ ಮಿಂಚಿ ಹೋಗಿತ್ತು. ಇದು ತನಗೆ ಸರಿ ಹೊಂದುವ ಜೀವನವಲ್ಲ. ಎಂದು ನಿರ್ಧಾರ ತೆಗೆದುಕೊಂಡಾಗ ಅಂಜು ಅವರು ಗರ್ಭಿಣಿ. ಆ ಬಳಿಕ ಅಂಜು ಮಗುವಿನ ಸಮೇತ ಮನೆಯಿಂದ ಆಚೆ ಬಂದು ಅಪ್ಪ ಅಮ್ಮನ ಮನೆಯಲ್ಲಿ ತಂಗುವ ತೀರ್ಮಾನ ಮಾಡುತ್ತಾರೆ. ಮನೆಗೆ ಬಂದು ಏಳೆಂಟು ತಿಂಗಳ ನಂತರ ಮತ್ತೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬಗ್ಗೆ ತಮ್ಮ ಜೀವನದ ಕಹಿ ನೆನಪುಗಳ ಬಗ್ಗೆ ಅಂಜು ಪ್ರಭಾಕರ್ ಚಾನೆಲ್ ಒಂದರಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ghost Town Dhanushkoti : ಧನುಷ್ಕೋಟಿ ಎಂಬ ಈ ನಗರ ಘೋಸ್ಟ್ ಟೌನ್ ಗೆ ಪ್ರಖ್ಯಾತಿ! ಯಾಕೆ? ಇಲ್ಲಿದೆ ಕಾರಣ!

Leave A Reply

Your email address will not be published.