Skoda kushaq Onyx: ದೇಶೀಯ ಮಾರುಕಟ್ಟೆಗೆ ಸ್ಕೋಡಾ ಕುಶಕ್‌ ಒನೆಕ್ಸ್‌ ಎಂಟ್ರಿ !!

Skoda kushaq Onyx: ಸದ್ಯ ಮಾರುಕಟ್ಟೆಗೆ ನೂತನ ಕಾರುಗಳು (cars) ಎಂಟ್ರಿ ಕೊಡುತ್ತಿವೆ. ವಿಭಿನ್ನ ವಿನ್ಯಾಸ, ಉತ್ತಮ ವೈಶಿಷ್ಟ್ಯತೆ ಯೊಂದಿಗೆ ಲಗ್ಗೆ ಇಡುತ್ತಿದೆ. ಜನರು ನೂತನ ಕಾರು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ (electric vehicle) ಬೇಡಿಕೆ ಹೆಚ್ಚಿದ್ದರೂ ಪೆಟ್ರೋಲ್ ವಾಹನ ಕೊಳ್ಳುವವರ ಸಂಖ್ಯೆ ತಗ್ಗಿಲ್ಲ. ಅದಕ್ಕೆ ತಕ್ಕಂತೆ ಕಂಪನಿಗಳು ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ.

 

ಇದೀಗ ಚೆಕ್‌ ಗಣರಾಜ್ಯದ ಕಾರು ತಯಾರಿಕಾ ಸಂಸ್ಥೆ ಸ್ಕೋಡಾ ಕುಶಾಕ್‌ ಒನೆಕ್ಸ್‌ನ (Skoda kushaq Onyx) ಹೊಸ ಆವೃತ್ತಿಯನ್ನು ಭಾರತದ (India) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಕಾರು ಉಳಿದ ಕಂಪನಿಯ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಹಾಗಾದ್ರೆ, ಇದರ ಬೆಲೆ ಎಷ್ಟು? ಹೆಚ್ಚಿನ ಮಾಹಿತಿ ತಿಳಿಯೋಣ.

ಸ್ಕೋಡಾ ಕುಶಕ್‌ ಒನೆಕ್ಸ್‌ ಲಿಮಿಟೆಡ್‌ ಎಡಿಷನ್‌ನ ಕಾರಾಗಿದೆ.
ನೋಡಲು ಆಕರ್ಷಣೀಯವಾಗಿದ್ದು, ಫೀಚರ್ (feature) ಕೂಡ ಉತ್ತಮವಾಗಿದೆ. ಕಾರಿನ ಡೋರ್‌ಗಳಲ್ಲಿ ಆಕರ್ಷಕ ಗ್ರಾಫಿಕ್ಸ್‌ಗಳನ್ನು ಅಳವಡಿಸಲಾಗಿದೆ. ಒಂದು ಲೀಟರ್‌ನ ಟಿಎಸ್‌ಐ ಟಬೋì ಪೆಟ್ರೋಲ್‌ ಎಂಜಿನ್‌ನಲ್ಲಿ (petrol engine) ಮಾತ್ರ ಕಾರು ಲಭ್ಯವಿದೆ. ಇದರಲ್ಲಿ ಸಿಕ್ಸ್‌ ಸ್ಪೀಡ್‌ ಮಾನ್ಯುವಲ್‌ ಗಿಯರ್‌ ಬಾಕ್ಸ್‌ ಇದೆ.

ಐಷಾರಾಮಿ ವಿನ್ಯಾಸ, ಉತ್ತಮ ಸುರಕ್ಷತೆ ಇರುವ ಈ ಕಾರಿನ ಆರಂಭಿಕ ಬೆಲೆ 12.39 ಲಕ್ಷ ರೂ. ಆಗಿದೆ. ಆರಂಭಿಕ ಮಾಡೆಲ್‌ಗ‌ಳಿಗಿಂತ ಕಾರಿನ ಆವೃತ್ತಿಯ ದರ 80 ಸಾವಿರ ರೂ.ಗಳಷ್ಟು ಹೆಚ್ಚಾಗಿದೆ ಎನ್ನಲಾಗಿದೆ.

Leave A Reply

Your email address will not be published.