Best Selling Hatchback : ಗ್ರಾಹಕರಿಗೆ ಖುಷಿ ಕೊಡುವ ಕಾರು ಇದೊಂದೇ! ಮುಗಿಬಿದ್ದು ಖರೀದಿಗೆ ಕಾರಣ ಇದೊಂದೇ?

Maruti suzuki car : ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ (Maruti suzuki car) ಕೂಡ ಒಂದು ಎಂಬುದನ್ನು ಇದೀಗ ಮತ್ತೇ ಸಾಬೀತು ಪಡಿಸಿದೆ. ಹೌದು, ಫೆಬ್ರವರಿ 2023 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳು ಮಾರುತಿ ಸುಜುಕಿಯದ್ದೇ ಆಗಿದೆ. ಇವೆಲ್ಲವೂ ಹ್ಯಾಚ್ ಬ್ಯಾಕ್ ಕಾರುಗಳು ಆಗಿವೆ.

 

ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಆಲ್ಟೊ, ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿ ಮಾರುತಿ ಸುಜುಕಿ ಬಲೆನೊ ಮುಂದಿನ ಸ್ಥಾನ ಪಡೆದಿದ್ದು , ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ಮಾರುತಿ ಬಲೆನೊ :
ಮಾರುತಿ ಸುಜುಕಿ ಬಲೆನೊ ಫೆಬ್ರವರಿ 2022 ರಲ್ಲಿ 12,570 ಯೂನಿಟ್ ಗಳು ಮಾರಾಟವಾಗಿತ್ತು, ಆದರೆ ಫೆಬ್ರವರಿ 2023 ರಲ್ಲಿ 18,592 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅಂದರೆ 2022ಕ್ಕೆ ಹೋಲಿಸಿದರೆ ಈ ಬಾರಿ ಕಾರಿನ ಮಾರಾಟದಲ್ಲಿ 47.91 ಶೇಕಡಾದಷ್ಟು ಹೆಚ್ಚಳವಾಗಿದೆ.

ಸದ್ಯ ಮಾರುತಿ ಬಲೆನೊದ ಬೆಲೆ 6.56 ಲಕ್ಷದಿಂದ 9.83 ಲಕ್ಷದ (ಎಕ್ಸ್ ಶೋರೂಂ) ನಡುವೆ ಇದೆ. ಇದು ಪೆಟ್ರೋಲ್ ಎಂಜಿನ್ ಜೊತೆಗೆ CNG ಕಿಟ್ ಆಯ್ಕೆಯೊಂದಿಗೆ ಲಭ್ಯವಿದೆ.

ಮಾರುತಿ ಸ್ವಿಫ್ಟ್ :
ಫೆಬ್ರವರಿ 2023 ರಲ್ಲಿ, ಅತಿ ಹೆಚ್ಚು ಮಾರಾಟವಾಗುವ ಎರಡನೇ ಮಾರುತಿ ಸ್ವಿಫ್ಟ್ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿ 2023 ರಲ್ಲಿ ಮಾರುತಿ ಸ್ವಿಫ್ಟ್ ನ 18,412 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಫೆಬ್ರವರಿ 2022 ರರಲ್ಲಿ 19,202 ಯೂನಿಟ್ ಗಳಷ್ಟೇ ಮಾರಾಟವಾಗಿದೆ. ಅಂದರೆ ಮಾರುತಿ ಸ್ವಿಫ್ಟ್ ಮಾರಾಟದಲ್ಲಿ 4.11% ರಷ್ಟು ಇಳಿಕೆಯಾಗಿದೆ.

ಮಾರುತಿ ಆಲ್ಟೊ:
ಫೆಬ್ರವರಿ 2023 ರಲ್ಲಿ, ಮಾರುತಿ ಸುಜುಕಿ ಆಲ್ಟೊ ಮೂರನೇ ಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಈ ಕಾರಿನ 18,114 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಫೆಬ್ರವರಿ 2022 ರಲ್ಲಿ ಈ ಕಾರಿನ 11,551ಯೂನಿಟ್ ಗಳನ್ನೂ ಮಾರಾಟ ಮಾಡಲಾಗಿತ್ತು. ಅಂದರೆ ಈ ಕಾರಿನ ಮಾರಾಟದಲ್ಲಿ 56.82 ರಷ್ಟು ಹೆಚ್ಚಳವಾಗಿದೆ.

ಮಾರುತಿ ವ್ಯಾಗನ್ ಆರ್:
ಮಾರುತಿ ವ್ಯಾಗನ್ ಆರ್ ಫೆಬ್ರವರಿ 2023 ರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಮಾರುತಿ ವ್ಯಾಗನ್ ಆರ್ 16,889 ಯುನಿಟ್‌ಗಳು ಮಾರಾಟವಾಗಿದ್ದು, ಫೆಬ್ರವರಿ 2022 ರಲ್ಲಿ 14,669 ಯುನಿಟ್‌ಗಳು ಮಾರಾಟವಾಗಿವೆ. ವಾರ್ಷಿಕ ಆಧಾರದಲ್ಲಿ ನೋಡುವುದಾದರೆ ಇದರ ಮಾರಾಟದಲ್ಲಿ 15.13% ದಷ್ಟು ಏರಿಕೆ ಕಂಡು ಬಂದಿದೆ.

ಒಟ್ಟಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಹವಾ ಜೋರಾಗಿಯೇ ಇದ್ದು, ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಿಟ್ಟು ಕೊಡದೆ ಜನರ ನಂಬಿಕೆಯನ್ನು ಗಳಿಸಿದೆ ಎನ್ನುವುದು ಗಮನಾರ್ಹ ಆಗಿದೆ.

Leave A Reply

Your email address will not be published.