EPFO : EPFO ಚಂದಾದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಸರಕಾರ!
EPFO subscribers : ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಯು (employees’ provident fund – EPF) ಸದಸ್ಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. EPFO ಚಂದಾದಾರರಿಗಾಗಿ ಸರ್ಕಾರ ಹೊಸ ಸೌಲಭ್ಯವನ್ನು ಕಲ್ಪಿಸಿದೆ. ಇದರಿಂದ ಚಂದಾದಾರರು (EPFO subscribers) ತಮ್ಮ ಮನೆಯಲ್ಲಿ ಕುಳಿತು ಹಲವು ಪ್ರಯೋಜನಗಳನ್ನು ಪಡೆಯಬಹುದು.
CBT ಯ 233 ನೇ ಸಭೆಯಲ್ಲಿ, 2022-23 ರ EPFO ನ ಪರಿಷ್ಕೃತ ಬಜೆಟ್ ಮತ್ತು 2023-24 ರ ಬಜೆಟ್ ಅಂದಾಜುಗಳನ್ನು ಸಹ ಅನುಮೋದಿಸಲಾಗಿದ್ದು, ಮಂಡಳಿಯು ಭೌತಿಕ ಮೂಲಸೌಕರ್ಯವನ್ನು ಹೆಚ್ಚಿಸಲು 5 ವರ್ಷಗಳ ಯೋಜನೆಯನ್ನು ಅನುಮೋದಿಸಿದೆ. ಇದರಲ್ಲಿ ಭೂಮಿ ಖರೀದಿ, ಕಟ್ಟಡ ನಿರ್ಮಾಣ ಹಾಗೂ ವಿಶೇಷ ದುರಸ್ತಿಗೆ 2,200 ಕೋಟಿ ರೂ.ಮೀಸಲಿರಿಸಲಾಗಿದೆ.
ಅದಲ್ಲದೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು ಇಪಿಎಫ್‌ಒ ಖಾತೆದಾರರಿಗೆ ಇ-ಪಾಸ್‌ಬುಕ್ ಸೌಲಭ್ಯವನ್ನು ಆರಂಭಿಸಿದ್ದಾರೆ. ಈ ಸೇವೆಯ ಪರಿಚಯದಿಂದ, ಇದೀಗ EPFO ಸದಸ್ಯರು ತಮ್ಮ ಖಾತೆಯ ವಿವರಗಳನ್ನು ವಿವರವಾಗಿ ನೋಡಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 2023 ರಲ್ಲಿ EPFO 14.38 ಲಕ್ಷ ಹೊಸ ಚಂದಾದಾರರನ್ನು ಒಳಗೊಂಡಿದ್ದು, ಭೂಪೇಂದ್ರ ಯಾದವ್ ಅವರು ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಅಧ್ಯಕ್ಷರಾಗಿದ್ದಾರೆ.
ಅದಲ್ಲದೆ ಭೂಪೇಂದ್ರ ಯಾದವ್ ಅವರು EPFO ನ 63 ಪ್ರಾದೇಶಿಕ ಕಚೇರಿಗಳಲ್ಲಿ ಶಿಶುವಿಹಾರಗಳನ್ನು ಉದ್ಘಾಟಿಸಿದ್ದಾರೆ. ಇನ್ನು 100ಕ್ಕೂ ಹೆಚ್ಚು ಉದ್ಯೋಗಿಗಳಿರುವ ಪ್ರಾದೇಶಿಕ ಕಚೇರಿಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಇದಲ್ಲದೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಾದೇಶಿಕ ಕಚೇರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಸದ್ಯ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ಬಡ್ಡಿದರ ಶೇ.8.10ರಿಂದ 2022-23ರ ಹಣಕಾಸು ವರ್ಷಕ್ಕೆ 8.15% ಬಡ್ಡಿ ದರಗಳನ್ನು ನಿಗದಿಪಡಿಸಿದೆ.