KPSC: ಕರ್ನಾಟಕ ಲೋಕ ಸೇವಾ ಆಯೋಗ ಯಾವೆಲ್ಲ ಹುದ್ದೆಗೆ ನೇಮಕಾತಿ ಮಾಡುತ್ತದೆ ತಿಳಿದಿದೆಯೇ?

Karnataka Public Service Commission: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರ್ನಾಟಕ ಲೋಕ ಸೇವಾ ಆಯೋಗ ಕೆಲ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುವುದು ಗೊತ್ತಿರುವ ಸಂಗತಿ. ಆದರೆ, ಕರ್ನಾಟಕ ಲೋಕ ಸೇವಾ ಆಯೋಗ (Karnataka Public Service Commission) ಯಾವುದೆಲ್ಲ ಹುದ್ದೆಗಳಿಗೆ ನೇಮಕಾತಿ ಮಾಡುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?

 

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್‌ (KPSC) ರಾಜ್ಯ ಸರ್ಕಾರ ಅಧೀನದ ನೇಮಕಾತಿ ಪ್ರಾಧಿಕಾರವಾಗಿದ್ದು, ರಾಜ್ಯದ ನಾಗರಿಕ ಸೇವೆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ. ರಾಜ್ಯದ ಯಾವುದೇ ಇಲಾಖೆಗಳಲ್ಲಿ, ನಿಗಮ, ಮಂಡಳಿಗಳು, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಈ ಪ್ರಾಧಿಕಾರದ ಮೂಲಕ ನೇಮಕಾತಿ ಮಾಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ.

ಕೆಪಿಎಸ್‌ಸಿ ಗ್ರೂಪ್‌ ಎ (Group A), ಗ್ರೂಪ್‌ ಬಿ, ಗ್ರೂಪ್‌ ಸಿ, ಗ್ರೂಪ್‌ ಡಿ ಹುದ್ದೆಗಳಿಗೆ (ತಾಂತ್ರಿಕ ಮತ್ತು ತಾಂತ್ರಿಕೇತರ) ಭರ್ತಿ ಮಾಡುತ್ತದೆ. ಕೆಪಿಎಸ್‌ಸಿ (KPSC)ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಕರೆದು, ಪರೀಕ್ಷೆಗಳನ್ನ ನಡೆಸಿ, ದಾಖಲೆ ಪರಿಶೀಲನೆ ಮಾಡಿದ ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ನಂತರ ಆದೇಶ ಪತ್ರವನ್ನು ನೀಡುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ.

ಕರ್ನಾಟಕ ಆಡಳಿತ ಸೇವೆಗೆ ಭರ್ತಿ ಮಾಡುವ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳಿಗೆ ಮೂರು ಹಂತದ ಪರೀಕ್ಷೆ ನಡೆಸುತ್ತದೆ. ಪೂರ್ವಭಾವಿ ಪರೀಕ್ಷೆ , ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಪರೀಕ್ಷೆಗಳ ಮಾದರಿ, ಪರೀಕ್ಷೆಯ ಅಂಕಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿ 2020 ರ ತಿದ್ದುಪಡಿಯ ಅನುಸಾರ, ನಿಯಮಗಳನ್ನು ಹೊರ ತರಲಾಗಿದೆ. ಈ ಕುರಿತು ಅಧಿಕೃತ ಗೆಜೆಟ್‌ ಕೂಡ ಹೊರ ತರಲಾಗಿದೆ. ಕೆಪಿಎಸ್‌ಸಿ ಮುಂದಿನ ದಿನಗಳಲ್ಲಿ ತನ್ನ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸುವ ತೀರ್ಮಾನ ಮಾಡಿದ್ದು, ಇದಕ್ಕೆ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಹುದ್ದೆ ರಾಜ್ಯ ಸರ್ಕಾರದ ಒಂದು ಗ್ರೂಪ್‌ ಎ ಹುದ್ದೆ ಆಗಿದ್ದು, ಅರಣ್ಯ ಇಲಾಖೆಯಲ್ಲಿ ಈ ಸೇವೆ ಸಲ್ಲಿಸಬಹುದು. ಕೆಪಿಎಸ್‌ಸಿ ಪ್ರಮುಖವಾಗಿ ಯಾವೆಲ್ಲ ಹುದ್ದೆಗಳಿಗೆ ಪರೀಕ್ಷೆ / ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ ಎಂದು ಗಮನಿಸಿದರೆ, ಸರ್ಕಾರದ ಇಲಾಖೆ, ನಿಗಮ, ಸಂಸ್ಥೆ, ಮಂಡಳಿಗಳ ಈ ಕೆಳಗಿನ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದೆ. ಪ್ರಥಮ ದರ್ಜೆ ಸಹಾಯಕರು (FDA), ದ್ವಿತೀಯ ದರ್ಜೆ ಸಹಾಯಕರು (SDA), ಸಬ್‌ ಇನ್ಸ್‌ಪೆಕ್ಟರ್ (ಅಬಕಾರಿ),ಜೂನಿಯರ್ ಟ್ರೈನಿಂಗ್ ಆಫೀಸರ್, ಹೆಡ್‌ ಮಾಸ್ಟರ್ ಮತ್ತು ಶಿಕ್ಷಕ ಹುದ್ದೆಗಳು (ಆರ್‌ಪಿಸಿ), ಅಸಿಸ್ಟಂಟ್ ಸೆಕ್ರೇಟರಿ, ಅಸಿಸ್ಟಂಟ್ ಲೈಬ್ರರಿಯನ್, ಪಂಚಾಯತ್ ಡೆವಲಪ್ಮೆಂಟ್ ಆಫೀಸರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಡ್ರಗ್ ಇನ್ಸ್‌ಪೆಕ್ಟರ್, ಗೆಜೆಟೆಡ್‌ ಪ್ರೊಬೇಷನರಿ ಆಫೀಸರ್‌ಗಳು (ಗ್ರೂಪ್‌ ಎ, ಗ್ರೂಪ್‌ ಬಿ) ಮತ್ತು ಇತರೆ ಕೆಲವು ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.

ಇದನ್ನೂ ಓದಿ: Ration Card ಹೊಂದಿರುವವರೇ ನಿಮಗಿದೋ ಗುಡ್‌ನ್ಯೂಸ್‌! ಫ್ರೀಯಾಗಿ ಸಿಗಲಿದೆ 150 ಕೆಜಿ ಅಕ್ಕಿ !!!

Leave A Reply

Your email address will not be published.