Amazing Fact: ಅವಳಿಗಳೇ ಇರುವ ಗ್ರಾಮ, ತೇಲುವ ಅಂಚೆ, ಶಾಂಪು ಕಂಡು ಹಿಡಿದ ದೇಶ! ಇವೆಲ್ಲದರ ಮಾಹಿತಿ ಇಲ್ಲಿದೆ

Amazing Fact: ನಮ್ಮ ಸುತ್ತಮುತ್ತಲೂ ನಡೆಯುವ ಅದೆಷ್ಟೋ ವಿಚಾರಗಳ ಬಗ್ಗೆ ನಾವು ಹೆಚ್ಚೇನು ತಲೆಕೆಡಿಸಿ ಕೊಳ್ಳಲು ಹೋಗುವುದಿಲ್ಲ. ಅಷ್ಟೇ ಏಕೆ!! ಅದರ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ, ಅನೇಕ ವಿಚಾರಗಳು ಕೇವಲ ಪ್ರಶ್ನೆಗಳಾಗಿ ಉಳಿದು ಬಿಡುತ್ತದೆ. ಹಾಗಿದ್ದರೆ, ನಿಮಗೆ ಗೊತ್ತಿರದ ಕೆಲ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ನಿಮಗಿದ್ದರೆ ಕೆಲವೊಂದು ಕುತೂಹಲ ಭರಿತ(Amazing Fact)ಮಾಹಿತಿ ನಿಮಗಾಗಿ.

 

ಒಂದಾನೊಂದು ಕಾಲದಲ್ಲಿ ಸಂದೇಶಗಳನ್ನು ರವಾನೆ ಮಾಡಲು ಪಕ್ಷಿಗಳನ್ನ ಬಳಕೆ ಮಾಡುತ್ತಿದ್ದದ್ದು ಗೊತ್ತಿರುವ ಸಂಗತಿ. ಆ ಬಳಿಕ ಅನೇಕ ಮಾರ್ಪಾಡುಗಳಾಗಿ ಇಂದು ಪತ್ರಗಳು, ಯಾವುದೇ ಮಾಹಿತಿ ರವಾನೆಗೆ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದು ಗೊತ್ತೇ ಇದೆ. ಆದರೂ ಕೂಡ ಮೊಬೈಲ್(Mobile) ಎಂಬ ಸಾಧನದ ಅನ್ವೇಷಣೆಯ ಬಳಿಕ ಪತ್ರ ಬರೆಯುವ ಸಂಖ್ಯೆ ಕಡಿಮೆ ಆಗಿರುವುದಂತು ಸುಳ್ಳಲ್ಲ. ಆದರೆ, ತೇಲುವ ಅಂಚೆ ಕಛೇರಿ(Post Office) ನಮ್ಮ ದೇಶದಲ್ಲಿ ಇದೆ ಅನ್ನೋ ವಿಚಾರ ನಿಮಗೆ ತಿಳಿದಿದೆಯೇ? ಭಾರತ ವಿಶ್ವದಲ್ಲೇ ಅತಿ ಹೆಚ್ಚು ಅಂಚೆ ಕಛೇರಿಗಳನ್ನು ಹೊಂದಿರುವ ದೇಶ ಎಂಬ ಗರಿಮೆಯನ್ನು ಹೊಂದಿದೆ. ಅದರಲ್ಲಿಯೂ ಅಚ್ಚರಿ ಎಂಬಂತೆ ತೇಲುವ ಅಂಚೆ ಕಛೇರಿ(FloatingPost Office) ಕೂಡ ಇದ್ದು, ಈ ದೋಣಿಯಲ್ಲಿ ತೇಲುವ ಅಂಚೆ ಕಛೇರಿ ಎಲ್ಲಿದೆ ಗೊತ್ತಾ?

ಈ ದೋಣಿಯಲ್ಲಿ ತೇಲುವ ಅಂಚೆ ಕಛೇರಿ ಇರೋದು ಭಾರತದ ಕಾಶ್ಮೀರದಲ್ಲಿ. ಕಾಶ್ಮೀರದ(Kashmir) ಸುಂದರ ನಗರವಾದ ಶ್ರೀನಗರದಲ್ಲಿದೆ(Srinagar) ದಾಲ್ ಸರೋವರದ ಬೃಹತ್ ಹೌಸ್‌ಬೋಟ್‌ನಲ್ಲಿ ಸುಂದರವಾದ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಇದ್ದು, ವಾಸ್ತವವಾಗಿ, ಇಲ್ಲಿ ಆಶ್ಚರ್ಯಕರ ಅಂಶವೆಂದರೆ ಇದು ಭಾರತದ ಏಕೈಕ ತೇಲುವ ಅಂಚೆ ಕಚೇರಿ ಮಾತ್ರವಲ್ಲ ಪ್ರಪಂಚದಲ್ಲೇ ಇದು ವಿಶಿಷ್ಟವಾದ ವಾಸ್ತುಶಿಲ್ಪದ ಭಾಗವಾಗಿದೆ. ಕಾಶ್ಮೀರ ಪ್ರವಾಸೋದ್ಯಮದ ಮುಖ್ಯ ಸ್ಥಳವಾದ ದಾಲ್ ಸರೋವರದಲ್ಲಿ ಈ ತೇಲುವ ಅಂಚೆಕಛೇರಿಯನ್ನು ಸ್ಥಾಪಿಸಲಾಗಿದ್ದು, ಇದು ಈ ನದಿಯನ್ನು ಮತ್ತಷ್ಟು ಮೆರುಗುತಂದುಕೊಟ್ಟಿದೆ.

ಕೇಶರಾಶಿಯ ಬಗ್ಗೆ ಹೆಚ್ಚು ಒಲವು ತೋರುವುದು ಮಹಿಳೆಯರು ಎಂದರೇ ತಪ್ಪಾಗದು. ಕೇಶರಾಶಿಯ ಕಾಳಜಿಗೆ ವಿಭಿನ್ನ ಎಣ್ಣೆಗಳನ್ನು, ಶಾಂಪೂ ಬಳಕೆ ಮಾಡುವುದು ಸಹಜ.ಇಂದು ನಾವು ಮಾರುಕಟ್ಟೆಯಲ್ಲಿ ತರಹೇವಾರಿ ಬ್ರ್ಯಾಂಡ್ ಗಳ (Brand) ಶಾಂಪೂಗಳನ್ನ(Shampoo) ನೋಡುತ್ತೇವೆ.ಈ ಶಾಂಫೂ ಎಂಬ ಪದವು ಹಿಂದಿ ಪದವಾದ ಚಂಪೋದಿಂದ ಬಂದಿದೆ. ಆದ್ರೆ, ಈ ಶಾಂಪೂ ಮೊದಲು ಬಳಕೆ ಮಾಡಿದ್ದೆಲ್ಲಿ? ಎಂಬ ವಿಚಾರ ನಿಮಗೆ ತಿಳಿದಿದೆಯೇ? ಅದು ಮತ್ತೆಲ್ಲೂ ಅಲ್ಲಾ.. ಭಾರತದಲ್ಲಿ!! ಭಾರತೀಯ ಸ್ಥಳೀಯರು ಮೊಟ್ಟ ಮೊದಲಿಗೆ ಶಾಂಪೂವನ್ನು ಬಳಕೆ ಮಾಡಿದರಂತೆ. ಒಣ ನೆಲ್ಲಿಕಾಯಿಯನ್ನು ಅನೇಕ ಗಿಡಮೂಲಿಕೆಗಳೊಂದಿಗೆ ಬೆರೆಸಿ ಕೂದಲನ್ನು ತೊಳೆಯುವ ಕ್ರಮ ಮೊದಲು ರೂಡಿಯಲ್ಲಿತ್ತು. ಇಂದು ಜಗತ್ತಿನೆಲ್ಲೆಡೆ ಶಾಂಪೂವನ್ನು ಬಳಕೆ ಮಾಡಲಾಗುತ್ತಿದೆ.

ಭಾರತದ ಈ ರಾಜ್ಯದಲ್ಲಿ ಅವಳಿಗಳ (Twinns)ಗ್ರಾಮವಿದೆಯಂತೆ. ಅರೇ ಇದೆಲ್ಲಿ ಎಂಬ ಕುತೂಹಲ ನಿಮಗೆ ಕಾಡುತ್ತಿದೆಯೇ? ಅವಳಿಗಳು ಎಂದಾಗ ಒಂದು ಜೋಡಿ ಇಲ್ಲವೇ ಮೂರು ಜೋಡಿ ಇರಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ, ಊರಿಗೆ ಊರೇ ಹೆಚ್ಚಿನ ಮಂದಿ ಅವಳಿ ಮಕ್ಕಳು ಇದ್ದಾರೆ ಎಂದರೆ ಅಚ್ಚರಿಯಾಗೋದು ಪಕ್ಕಾ!! ಆದರೆ, ‘ಅವಳಿ ಗ್ರಾಮ’ ಎಂದು ಖ್ಯಾತಿ ಪಡೆದ ಗ್ರಾಮ ಇರುವುದು ಕೇರಳದಲ್ಲಿ. ಕೇರಳದ ಮಲಪ್ಪುರ(Malappuram) ಎಂಬ ಗ್ರಾಮದಲ್ಲಿ ಅತೀ ಹೆಚ್ಚು ಸಂಖ್ಯೆಯ ಅವಳಿಗಳಿದ್ದು, ಈ ಗ್ರಾಮವು ಪ್ರಸ್ತುತ 220 ಜೋಡಿ ಅವಳಿಗಳನ್ನು ಒಳಗೊಂಡಿದೆಯಂತೆ. ಅಷ್ಟಕ್ಕೂ ಅತೀ ಹೆಚ್ಚು ಅವಳಿ ಮಕ್ಕಳು ಜನಿಸಲು ಕಾರಣವೇನು ಎಂದು ತಿಳಿಯಹೊರಟರೆ, ಈ ಪ್ರದೇಶದಲ್ಲಿನ ನೀರಿನಲ್ಲಿ ಇರುವ ರಾಸಾಯನಿಕಗಳಿಂದ ಅವಳಿ ಮಕ್ಕಳು ಹುಟ್ಟುತ್ತಿದ್ದಾರೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ರೈಲು ಪ್ರಯಾಣ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!!ಆದರೆ, ವಿಶ್ವದ ಅತಿ ಎತ್ತರದ ರೈಲು ಸೇತುವೆ ಎಲ್ಲಿದೆ ಗೊತ್ತಾ? ಐಫೆಲ್ ಟವರ್‌ಗಿಂತಲೂ (Eiffel Tower)ಸುಮಾರು 35 ಮೀಟರ್ ಎತ್ತರದಲ್ಲಿ ಜಮ್ಮುವಿನಲ್ಲಿ (Jammu) ವಿಶ್ವದ ಅತಿ ಎತ್ತರದ ರೈಲು ಸೇತುವೆ ಇದ್ದು,ಚೆನಾಬ್ ನದಿಯ ಮೇಲೆ 1,178 ಅಡಿ ಎತ್ತರದಲ್ಲಿದೆ. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಮಾನಿನ ಆಕಾರದ ಚೆನಾಬ್ ಸೇತುವೆ ವಿಶ್ವದ ಅತೀ ಎತ್ತರದ ರೈಲು ಸೇತುವೆಯಾಗಿದೆ.

ಕ್ರಿಕೆಟ್( Criket)ಎಂದರೆ ಸಾಕು!! ಹೆಚ್ಚಿನವರ ಅಚ್ಚು ಮೆಚ್ಚಿನ ಕ್ರೀಡೆಯಾಗಿದೆ. ಭಾರತವು ವಿಶ್ವದ ಅತಿ ಎತ್ತರದ ಕ್ರಿಕೆಟ್ ಮೈದಾನದ ನೆಲೆಯಾಗಿದ್ದು, ಈ ವಿಶ್ವದ ಅತೀ ಎತ್ತರದ ಕ್ರಿಕೆಟ್ ಮೈದಾನ ಎಲ್ಲಿದೆ ಅಂತೀರಾ? ಸುಮಾರು 2,144 ಮೀ ಎತ್ತರದಲ್ಲಿರುವ ಚೈಲ್ ಕ್ರಿಕೆಟ್ ಮೈದಾನವು (Chail Cricket Ground)ಸಮುದ್ರ ಮಟ್ಟದಿಂದ 7500 ಅಡಿಗಳಷ್ಟು ಎತ್ತರದಲ್ಲಿದ್ದು, ಹಿಮಾಚಲ ಪ್ರದೇಶದ (Stadium in Chail, Himachal Pradesh)ಚೈಲ್‌ನಲ್ಲಿದೆ. ಇದನ್ನು 1893ರಲ್ಲಿ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: Plant : ಈ ‘ಗಿಡ’ಗಳನ್ನು ಮನೆಯಲ್ಲಿ ಬೆಳೆಸಿ ಧೂಳು ರಹಿತ ‘ಶುದ್ಧ’ ಗಾಳಿ ಪಡೆದು ಆರೋಗ್ಯವಂತರಾಗಿ!!

Leave A Reply

Your email address will not be published.