Rakshit Shetty-Srinidhi Shetty: ಶ್ರೀನಿಧಿ ಶೆಟ್ಟಿ ಫೋಟೋಗೆ ರಕ್ಷಿತ್ ಶೆಟ್ಟಿ ಕಮೆಂಟ್! ‘ಏನ್ ಶೆಟ್ರೆ, ಲವ್ವಾ?’ ಎಂದ ಫ್ಯಾನ್ಸ್!

Rakshit Shetty-Srinidhi Shetty : ಸ್ಯಾಂಡಲ್ ವುಡ್‌ನ(Sandalwood) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Simple Star Rakshith Shetty)ಬ್ಯಾಚುಲರ್ ಆಗಿದ್ದುಕೊಂಡೇ ಕನ್ನಡಿಗರಿಗೆ ಸೂಪರ್ ಹಿಟ್ ಸಿನಿಮಾ ಗಳನ್ನು ಕೊಡುತ್ತಿರುತ್ತಾರೆ. ಮೊದಲಿಂದಲೂ ಪ್ರೀತಿ, ಪ್ರೇಮ, ಮದುವೆ ಹಾಗೂ ಎಂಗೇಜ್‌ಮೆಂಟ್ ವಿಷಯಗಳ ಕುರಿತಾಗಿ ನಮ್ಮ ಶೆಟ್ರು ಸಾಕಷ್ಟು ಸುದ್ಧಿಯಾಗಿದ್ದರೂ ಅದ್ಯಾವುದರ ಬಗ್ಗೆಯೂ ಚಿಂತಿಸದೆ ತಮ್ಮ ಸಿನಿ ಜರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಆದರೀಗ ನಮ್ಮ ಈ ಸಿಂಪಲ್ ಸ್ಟಾರ್
ಮತ್ತು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ(Srinidhi Shetty) ಇಬ್ಬರೂ (Rakshit Shetty-Srinidhi Shetty) ಟ್ವಿಟರ್ ನಲ್ಲಿ ಭಾರೀ ಸದ್ಧು ಮಾಡುತ್ತಿದ್ದಾರೆ. ಇವರ ಟ್ವೀಟ್ ನೋಡಿ ಅಭಿಮಾನಿಗಳೂ ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ಏನು ಈ ಟ್ವೀಟ್ ಮಾತುಕತೆ?

 

ಹೌದು, ರಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಶೆಟ್ಟಿ ಈ ಇಬ್ಬರ ಟ್ವಿಟ್ಟರ್ ಮಾತುಕತೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಶ್ರೀನಿಧಿ ಶೆಟ್ಟಿ ಹೆಸರು ಸದ್ಯ ರಕ್ಷಿತ್ ಶೆಟ್ಟಿ ಹೆಸರಿನ ಜತೆ ತಳುಕಿ ಹಾಕಿಕೊಂಡಿದೆ. ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಅವರ ‘ಹಾಗೆ ಸುಮ್ಮನೆ’ ಪೋಸ್ಟ್‌ಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿರುವುದು ಈಗ ವೈರಲ್ ಆಗಿದೆ. ಇಬ್ಬರ ಕ್ಯೂಟ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟೆಯಲ್ಲ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನಿದು ಇಬ್ಬರೂ ಶೆಟ್ರ ಮಾತುಕತೆ ಅಂತಿರಾ?

ಅಂದಹಾಗೆ ಪರ್ಪಲ್ ಬಣ್ಣದ ಡ್ರೆಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಸಿಂಪಲ್ ಲುಕ್‌ನ ಸುಂದರ ಪೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ತನ್ನ ಈ ಹೊಸ ಫೋಟೊಗಳನ್ನು ಹಂಚಿಕೊಂಡು ‘ಹಾಗೆ ಸುಮ್ಮನೆ’ ಎಂದು ಬರೆದುಕೊಂಡಿದ್ದರು. ಈ ಟ್ವೀಟ್‌ಗೆ ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿದ್ದು, ‘ಓಹ್ ಗೊತ್ತಾಯಿತು ಶೆಟ್ರೇ’ ಎಂದು ತುಳುವಿನಲ್ಲಿ ಕಾಮೆಂಟ್ ಮಾಡಿದ್ದರು. ಆದರೀಗ ರಕ್ಷಿತ್ ಕಾಮೆಂಟ್‌ಗೆ ಶ್ರೀನಿಧಿ ಮತ್ತೆ ಪ್ರತಿಕ್ರಿಯೆ ನೀಡಿ ‘ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು’ ಹೇಳಿದ್ದಾರೆ.

ಈ ಇಬ್ಬರು ಶೆಟ್ರ ಮಾತುಕತೆ ನೋಡಿ ಫ್ಯಾನ್ಸ್ ‘ಅನಿಸುತ್ತಿದೆ ಯಾಕೋ ಇಂದು…’ ಎಂದು ಹೇಳುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ಅವರ ಕಡೆಯಿಂದ ಈ ರಿಪ್ಲೈ ಬಂದ ಮೇಲಂತೂ ನೆಟ್ಟಿಗರು ಇಬ್ಬರ ಕಾಲನ್ನು ಮತ್ತಷ್ಟು ಎಳೆದಿದ್ದಾರೆ. ಓಹೋ ಇಬ್ಬರ ನಡುವೆ ಏನಿದು ಸುದ್ದಿ, ಅಣ್ಣಂಗೆ ಲವ್ ಆಗಿದೆ, ಯಾವಾಗ ಘೋಷಣೆ ಮಾಡ್ತೀರ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ‘ಏನ್ ನಡೀತಿದೆ ಶೆಟ್ರೆ..’ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ‘ಏನೋ ಬೇರೆ ವಾಸನೆ ಬರ್ತಿದೆ ಶೆಟ್ರೆ’ ಎಂದು ಹೇಳಿದ್ದಾರೆ. ಮತ್ತೋರ್ವರು, ‘ತಲೆಗೆ ಹುಳ ಬಿಟ್ರಲ್ಲಾ ಶೆಟ್ರೆ’ ಎಂದು ಹೇಳಿದ್ದಾರೆ. ಹೀಗೆ ‘ಏನಾದ್ರು ಹೊಸ ಸುದ್ದಿ ಇದಿಯಾ’, ‘ಜೋಡಿ ಚೆನ್ನಾಗಿದೆ’ ಎಂದು ಕಾಮೆಂಟ್ ಮಾಡಿ ಶೆಟ್ರ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರ ಈ ಟ್ವೀಟ್‌ಗಳು ನೆಟ್ಟಿಗರಲ್ಲಿ ಪ್ರಶ್ನೆ, ಕುತೂಹಲ ಹಾಗೂ ಗೊಂದಲವನ್ನು ಮೂಡಿಸಿವೆ.

ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಕ್ಷಿತ್ ಜೊತೆ ಶ್ರೀನಿಧಿ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ, ಚೆನ್ನಾಗಿರುತ್ತೆ ಎಂದು ಅನೇಕರು ಹೇಳುತ್ತಿದ್ದಾರೆ. ರಕ್ಷಿತ್ ಮುಂದಿನ ಸಿನಿಮಾದಲ್ಲಿ ಶ್ರೀನಿಧಿ ನಟಿಸಿದ್ರೂ ಅಚ್ಚರಿ ಇಲ್ಲ. ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ಕನ್ನಡದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿರುವ ಶ್ರೀನಿಧಿ ಸಿಂಪಲ್ ಸ್ಟಾರ್ ಜೊತೆ ನಟಿಸಿದ್ರೂ ನಟಿಸ್ಬೋದು.

ಅಂದಹಾಗೆ ಕನ್ನಡ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿರುವ ರಕ್ಷಿತ್ ಶೆಟ್ಟಿ ಈ ಹಿಂದಿನಿಂದಲೂ ಪ್ರೀತಿ, ಪ್ರೇಮ, ಮದುವೆ ಹಾಗೂ ಎಂಗೇಜ್‌ಮೆಂಟ್ ವಿಷಯಗಳ ಕುರಿತಾಗಿ ಸಾಕಷ್ಟು ಸುದ್ದಿಯಾಗಿದ್ರು. ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಅದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ(Rashmika Mandanna) ಜತೆ ರಕ್ಷಿತ್, ಪ್ರೀತಿಯಲ್ಲಿ ಬಿದ್ದದ್ದು, ಇಬ್ಬರೂ ಪರಸ್ಪರ ಒಪ್ಪಿಕೊಂಡು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಆದರೆ ನಂತರದಲ್ಲೇನಾಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ.

ಹೀಗೆ ರಶ್ಮಿಕಾ ಮಂದಣ್ಣ ಜತೆ ಮದುವೆ ಮುರಿದು ಬಿದ್ದ ಬಳಿಕ ಮತ್ತೆ ಸಿಂಗಲ್ ಆದ ರಕ್ಷಿತ್ ಶೆಟ್ಟಿ ಜತೆ ಕೆಲವೊಂದಷ್ಟು ನಟಿಯರ ಹೆಸರೂ ಸಹ ಸೇರಿ ಗಾಸಿಪ್ ಆಗಿ ಸುದ್ದಿಗಳು ಹರಿದಾಡಿದ್ದವು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ನಟಿಸಿದ್ದ ಸಾನ್ವಿ ಶ್ರೀವಾಸ್ತವ(Sanvi Shrivastava) ಹೆಸರೂ ಸಹ ರಕ್ಷಿತ್ ಶೆಟ್ಟಿ ಜತೆ ತಳುಕಿ ಹಾಕಿಕೊಂಡಿತ್ತು. ಇಬ್ಬರೂ ಒಟ್ಟಿಗೆ ಹಂಚಿಕೊಂಡಿದ್ದ ಸೆಲ್ಫೀ ಫೊಟೊ ಕಂಡು ಪ್ರತಿಕ್ರಿಯಿಸಿದ್ದ ನೆಟ್ಟಿಗರು ಒಳ್ಳೆ ಜೋಡಿ ಮದುವೆಯಾಗಿಬಿಡಿ ಶೆಟ್ರೇ ಎಂದಿದ್ದರು ಹಾಗೂ ಇನ್ನೂ ಕೆಲವರು ಇಬ್ಬರ ನಡುವೆ ಲವ್ ಇದೆ ಎಂದೂ ಸಹ ಕಾಮೆಂಟ್ ಮಾಡಿದ್ದರು. ಆ ಬಳಿಕ ಇದೆಲ್ಲಾ ಕೇವಲ ವದಂತಿ ಎಂಬುದೂ ಸಹ ಬಹಿರಂಗವಾಯಿತು.

https://twitter.com/SrinidhiShetty7/status/1640348549459378176?t=bbfqjIicrh1rmREIO5lZfw&s=08

ಇದನ್ನೂ ಓದಿ: Nayanathara: 16 ವರ್ಷಗಳ ರೂಲ್ಸ್ ಬ್ರೇಕ್ ಮಾಡಿ ‘ಬಿಕನಿ’ ತೊಟ್ಟ ನಯನಾತಾರ, ಯಾರಿಗಾಗಿ ಗೊತ್ತಾ?

Leave A Reply

Your email address will not be published.