Kolar killings: 5 ವರ್ಷದ ಹಿಂದೆ ಹೆಂಡತಿಯನ್ನು ಕೊಂದ, ಈಗ ಜೈಲಿಂದ ಬಂದವನೇ ತನ್ನ 8 ವರ್ಷದ ಮಗನನ್ನೇ ಮುಗಿಸಿದ !

Kolar killings: ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನನ್ನು ಚಾಕುವಿನಿಂದ ಬರ್ಬರವಾಗಿ ಗೀರಿ ಹತ್ಯೆಗೈದ ಘಟನೆ ಕೋಲಾರ (Kolar killings) ಜಿಲ್ಲೆಯಲ್ಲಿ ನಡೆದಿದೆ.

 

8 ವರ್ಷದ ಭುವನ್‌ ಕೊಲೆಯಾದ ಬಾಲಕ ಹಾಗೂ ಸುಬ್ರಹ್ಮಣ್ಯಂ ಎಂಬಾತ ಕೊಲೆಗೈದ ಆರೋಪಿ. ಸುಬ್ರಹ್ಮಣ್ಯಂ 5 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಸೋಮವಾರ ಬೆಂಗಳೂರಿನಿಂದ (Bengaluru) ಬಂದ ಸುಬ್ರಹ್ಮಣ್ಯಂ ಮಧ್ಯಾಹ್ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗ ಭುವನ್‌ ಅನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟರಲ್ಲೇ ಕೊಲೆ ಸಂಭವಿಸಿದೆ.

ಕೋಲಾರ (Kolar) ತಾಲೂಕಿನ ಮುಳಬಾಗಿಲು (Mulabagilu) ತಾಲೂಕಿನ ನಂಗಲಿ ಗ್ರಾಮದ ಶಾಲೆಯಿಂದ ತನ್ನ ಮಗನನ್ನು ಅಪ್ಪ ಸುಬ್ರಮಣ್ಯ ಕರೆತಂದಿದ್ದಾನೆ. ಸುಬ್ರಹ್ಮಣ್ಯಂ ಕೋಲಾರದ ಗದ್ದೆಕಣ್ಣೂರು ಬಳಿ ಕರೆದುಕೊಂಡು ಬಂದು ಭಿಕ್ಷೆ ಬೇಡಲು ಬಿಟ್ಟಿದ್ದ. ಆದರೆ ಮಗುವನ್ನು ಶಾಲೆಯ ಸಮವಸ್ತ್ರದಲ್ಲಿ ನೋಡಿದ ಸಾರ್ವಜನಿಕರು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಭುವನ್‌ ಅನ್ನು ವಿಚಾರಿಸಿದಾಗ ನಂಗಲಿ ಗ್ರಾಮದಲ್ಲಿ ಅಜ್ಜಿ ಮನೆಯಲ್ಲಿದ್ದು ತಂದೆ ಇಲ್ಲಿಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಆಗ ಅಜ್ಜಿಯನ್ನು ಕೂಡಾ ಕರೆಸಿ ವಿಚಾರಣೆ ನಡೆಸಿದ ಪೊಲೀಸರು ಮಗುವಿನ ಒಪ್ಪಿಗೆಯಂತೆ ಅಜ್ಜಿಯ ಜೊತೆಗೆ ಕಳಿಸಿ, ತಂದೆ ಸುಬ್ರಹ್ಮಣ್ಯಂನನ್ನು ಬೆಂಗಳೂರಿಗೆ ಹೋಗಲು ತಿಳಿಸಿದ್ದಾರೆ. ಪೊಲೀಸರು ತಮ್ಮ ತಮ್ಮ ಕೆಲಸಗಳಿಗೆ ಮರಳಿದ್ದಾರೆ.

ಆದರೆ ಬಸ್ ಹತ್ತಿ ಬೆಂಗಳೂರಿಗೆ ಹೋಗದ ಸುಬ್ರಮಣ್ಯಂ ಮಗನನ್ನು ಮನೆಗೆ ಬಿಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಹೊರಗಡೆ ಹೋಗಿದ್ದ ಅಜ್ಜಿ ಮನೆ ತಲುಪುವ ಮೊದಲೇ ತನ್ನ ಏನೂ ಅರಿಯದ ಮಗುವನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ದುರಂತ ನಡೆದು ಹೋಗಿದೆ.

ಶ್ರೀನಿವಾಸಪುರ ತಾಲೂಕಿನ ಕತ್ತಿಬಿಸೇನಹಳ್ಳಿ ಗ್ರಾಮದ ಸುಮಾ ಎನ್ನುವವರ ಜತೆ ಮುಳಬಾಗಲು ತಾಲೂಕಿನ ಪಟ್ರಹಳ್ಳಿ ಗ್ರಾಮದ ಸುಬ್ರಹ್ಮಣ್ಯಂಗೆ ಮದುವೆ ಆಗಿತ್ತು. ಟೈಲ್ಸ್ ಮತ್ತು ಗಾರೆ ಕೆಲಸ ಮಾಡುತ್ತಿದ್ದ ಸುಬ್ರಮಣ್ಯಂ ಅನೇಕಲ್‌ನಲ್ಲಿ ವಾಸವಾಗಿದ್ದ. 5 ವರ್ಷಗಳ ಕಾಲ ಕುಟುಂಬ ಚೆನ್ನಾಗಿಯೇ ಇತ್ತು. ಆನಂತರ ಸುಬ್ರಮಣ್ಯಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಆಗ ಆತ ಮನೆಯಲ್ಲಿ ಆಗಾಗ ವಿಚಿತ್ರವಾಗಿ ವರ್ತನೆ ಮಾಡಲು ಶುರು ಮಾಡಿದ್ದ. ಕಳೆದ 5 ವರ್ಷದ ಹಿಂದೆ ಆನೇಕಲ್ ಮನೆಯಲ್ಲಿ ಹೆಂಡತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಳು. ಇದರ ಬಗ್ಗೆ ಪತ್ನಿಯ ಸಂಬಂಧಿಕರು.ನೀಡಿದ ದೂರಿನನ್ವಯ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಆಗ ಭುವನ್ ಕೇವಲ ಒಂದೂವರೆ ವರ್ಷದ ಮಗು. ಅವತ್ತು ಸುಮಾನ ಸಂಬಂಧಿಕರು ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಸಾಕುತ್ತಿದ್ದರು. ಪಾಪ, ತಬ್ಬಲಿ ತರ ಇದ್ದ ಮಗು ತನ್ನ ಪಾಡಿಗೆ ತಾನಿದ್ದ. ಕಳೆದ ಒಂದು ವರ್ಷದ ಹಿಂದೆ ಸುಬ್ರಹ್ಮಣ್ಯಂ ಜೈಲಿನಿಂದ ಹೊರಬಂದ. ಆತನ ಮಾನಸಿಕ ಸ್ಥಿತಿ ಹಾಗೆಯೇ ಇತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು.

ನಂತರ ಸುಮಾ ಸಂಬಂಧಿಕರ ಮನೆಯಲ್ಲಿದ್ದ ಭುವನ್‌ನನ್ನು ನಾನೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಬಂದಿದ್ದ. ಹಾಗೆ ಬಂದು ತನ್ನ ತಾಯಿ ಸುಬ್ಬಲಕ್ಷ್ಮೀ ಜೊತೆ ನಂಗಲಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಬಿಟ್ಟಿದ್ದ. ಆದ್ರೆ ನಿನ್ನೆ ರಾತ್ರಿ ತನ್ನ ಮಗುವನ್ನು ಕತ್ತು ಸೀಳಿ ಕೊಂದದ್ದಲ್ಲದೆ ತನ್ನ ತಾಯಿ ಮೇಲೆ ಹಲ್ಲೆಗೆ ಕೂಡಾ ಯತ್ನಿಸಿದ್ದಾನೆ. ಸುದ್ದಿ ತಿಳಿದ ನಂಗಲಿ ಪೊಲೀಸರು ಸುಬ್ರಮಣ್ಯಂನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅವತಾರ್ : ದಿ ವೇ ಆಫ್ ವಾಟರ್ ’ ಸಿನಿಮಾ ಒಟಿಟಿಯಲ್ಲಿ ಪ್ರದರ್ಶನ ಶುರು !

Leave A Reply

Your email address will not be published.