ವಿಧಾನಸಭಾ ಚುನಾವಣಾ ಹಿನ್ನೆಲೆ, ಚಿನ್ನದ ಅಂಗಡಿ ಮತ್ತು ಪೆಟ್ರೋಲ್ ಬಂಕ್ ಗಳ ಮೇಲೆ ಜಿಲ್ಲಾಧಿಕಾರಿ ನಿರ್ದೇಶನ

Karnataka election: ಕರ್ನಾಟಕದ ವಿಧಾನಸಭೆ ಚುನಾವಣೆ(Karnataka assembly elections) ದಿನಾಂಕ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಚುನಾವಣೆಯ ಜ್ವರ ಏರಲು ಕ್ಷಣಗಣನೆ ಆರಂಭವಾಗಿದೆ. ಅದರೊಳಗೆ ಚುನಾವಣಾ ಆಯೋಗ(Election Commission) ಎದ್ದು ಕೂತಿದ್ದು, ಜಿಲ್ಲೆಯ ಚುನಾವಣಾ(Karnataka election).ಅಧಿಕಾರಿಗಳೂ ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಚುನಾವಣೆಗೆ ಅನುಕೂಲವಾಗುವಂತೆ ಎಲ್ಲಾ ಪೆಟ್ರೋಲ್ ಮಾಲೀಕರು(Petrol owner) ಹಾಗೂ ಆಭರಣ ಅಂಗಡಿಯ ಮಾಲೀಕರ (jewelery shop owner)ಜೊತೆ ಇಂದು, ಮಾರ್ಚ್ 28 ರಂದು ಸಭೆ ನಡೆಸಲಾಗುತ್ತಿದೆ ಹಾಗೂ ಜಿಲ್ಲಾಡಳಿತವು ಹಲವು ನಿರ್ದೇಶನಗಳನ್ನು ಕೂಡ ನೀಡುತ್ತಿದೆ.

ಬಳ್ಳಾರಿಯ ಜಿಲ್ಲಾಧಿಕಾರಿಯಾದ ಮೊಹಮ್ಮದ್ ಝುಬೇರಾ ಅವರು ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಆಭರಣ ಅಂಗಡಿಯ ಮಾಲೀಕರು ಜೊತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ನಡೆಸಿದರು.

ಈ ಸಭೆಯಲ್ಲಿ ಮಾಲೀಕರಿಗೆ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಸಂದರ್ಭ ಪಾಲಿಸಲು ಹಲವು ಸೂಚನೆಗಳನ್ನು ನೀಡಿದರು.

ಮೊಹಮ್ಮದ್ ಝುಬೇರಾ ಅವರು ವಿಧಾನಸಭೆ ಚುನಾವಣೆಯ ಕುರಿತು ಮಾತನಾಡಿ, ಚುನಾವಣೆಯ ವೇಳೆ  ಮತದಾರರನ್ನು ಸೆಳೆಯಲು ಆಭರಣ, ಹಾಗೂ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಜಿಲ್ಲಾಡಳಿತದೊಂದಿಗೆ ಆಭರಣ ಅಂಗಡಿಯ ಮಾಲೀಕರು ಮತ್ತು ಪೆಟ್ರೋಲ್ ಬಂಕ್ ಮಾಲೀಕರು ಸಹಕರಿಸಬೇಕು ಎಂದು ವಿನಂತಿಸಿಕೊಂಡರು.

ಬರುವ ಏಪ್ರಿಲ್ ಮೊದಲ ವಾರದಲ್ಲಿಯೇ ಕರ್ನಾಟಕದ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗುತ್ತದೆ ಎಂದು ನಿರೀಕ್ಷೆ ಇದೆ. ಚುನಾವಣೆ ವೇಳಾಪಟ್ಟಿ ಘೋಷಣೆಯ ನಂತರ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

ಚುನಾವಣೆಯ ಪ್ರಚಾರದ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಅನಧಿಕೃತವಾಗಿ ಬಳಸದಂತೆ ನೋಡಿಕೊಳ್ಳಬೇಕು. ಅಂಗಡಿ ಮಾಲೀಕರು ಹೆಚ್ಚು ಇಂಧನವನ್ನು ಆಮದು ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಮಾಡಿಕೊಂಡಲ್ಲಿ ಹಿಂದಿನ ಮೂರು ತಿಂಗಳ ಆಮದು ಸರಬರಾಜಿನ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಇನ್ನು ಮತದಾರರನ್ನು ಸೆಳೆಯಲು ನಾಣ್ಯದ ರೂಪದ ಆಭರಣಗಳನ್ನು ಮತ್ತು ಉಡುಗೊರೆಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಆದ್ದರಿಂದ ಆಭರಣ ಅಂಗಡಿಯ ಮಾಲೀಕರ ಇಂತಹಾ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಸ್ಪದ ನೀಡಬಾರದು. ಯಾರಾದರೂ ಅತಿ ಹೆಚ್ಚು ಆಭರಣಗಳನ್ನು ಖರೀದಿಸಿದರೆ ಅಂಗಡಿಯ ಮಾಲೀಕರಗಳು ತಕ್ಷಣ ಖರೀದಿಯ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು. ದಾಖಲೆಗಳಿಲ್ಲದ ಅಭರಣ ಅಥವಾ ಇತರೆ ಉಡುಗೊರೆಗಳನ್ನು ಸಂಚಾರದ ಸಮಯದಲ್ಲಿ ಜಪ್ತಿ ಮಾಡಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

Leave A Reply

Your email address will not be published.