Honda Activa’ಗೆ ಪ್ರತಿಸ್ಪರ್ಧಿಯಾಗಿದೆ TVS Jupiter | ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ TVS Jupiter EV !

Electric vehicle :ದೇಶದಲ್ಲಿ ಇಂಧನ ಚಾಲಿತ ವಾಹನಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಎಲೆಕ್ಟ್ರಿಕ್ ವಾಹನಗಳ (Electric vehicle) ಹಾವಳಿ ಜಾಸ್ತಿಯಾಗುತ್ತಿದೆ ಎಂದು ಹೇಳಿದರೂ ತಪ್ಪೇನಿಲ್ಲ. ಸದ್ಯ ಹೊಸ ಕಂಪನಿಗಳಾದ ಓಲಾ, ಎಥರ್‌ನಂತಹ ಎಲೆಕ್ಟ್ರಿಕ್ ವಾಹನಗಳು ರಸ್ತೆಯಲ್ಲಿ ತನ್ನದೇ ಆಳ್ವಿಕೆಯನ್ನು ಮಾಡುತ್ತಿದೆ. ಆದರೆ ಹಿಂದಿನಿಂದಲೂ, ದಶಕಗಳ ಇತಿಹಾಸವಿರುವ ಬ್ರಾಂಡ್‌ಗಳು ಇವಿ ವಿಭಾಗದಲ್ಲಿ ಗುರಿತಿಸಿಕೊಳ್ಳಲು ಸ್ವಲ್ಪಮಟ್ಟಿಗೆ ಪರದಾಡುತ್ತಿದೆ ಎನ್ನಬಹುದು.

 

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ನಾವು ಗಮನವನ್ನು ಹರಿಸಿದರೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಎಕೆಂದರೆ ಸದ್ಯ ಭಾರತೀಯರ ದ್ವಿಚಕ್ರ ವಿಭಾಗದ ಫೇವರಿಟ್ ಬ್ರಾಂಡ್ ಗಳಾದ ಟಿವಿಎಸ್( TVS), ಬಜಾಜ್ ಮತ್ತು ಹೀರೋ ಮೋಟೋಕಾರ್ಪ್‌ನಂತಹ (Hero Moto Corp) ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳು ಪ್ರಸ್ತುತ ತಮ್ಮ ಎಲೆಕ್ಟ್ರಿಕ್ ಪೋರ್ಟ್‌ಫೋಲಿಯೊದಲ್ಲಿ ಒಂದೊಂದು ಹೊಸ ಉತ್ಪನ್ನವನ್ನು ಹೊರತಂದಿವೆ. ಇವು ಓಲಾ, ಎಥರ್‌ನಂತಹ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಟೆಕ್ನಾಲಜಿಯಲ್ಲಿ ಹಿಂದಿವೆ ಎನ್ನದೆ ವಿಧಿ ಇಲ್ಲ. ಇದನ್ನು ಹೆಚ್ಚು ಗಣನೆಗೆ ತೆಗೆದುಕೊಂಡ ಹೋಂಡಾ ಕಂಪನಿಯು (Honda company) ಆಕ್ಟಿವಾ ಇವಿಯನ್ನು (Activa EV) ತರಲು ಮಹತ್ವದ ಪ್ರೊಜೆಕ್ಟ್ ಗೆ ಕೈ ಹಾಕಿದೆ.

ತಾನು ಕೂಡ ಈ ವಿಭಾಗದಲ್ಲಿ ಹಿಂದೆ ಬೀಳಲು ತಯಾರಿಲ್ಲದ TVS ಕೂಡ ತನ್ನ ಐಕ್ಯೂಬ್ ಇವಿಯನ್ನು(I cube EV) ಬಿಟ್ಟು ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತರಲು ಸಿದ್ಧವಾಗಿರುವ ಕುರಿತು ಮಾಹಿತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 5 kW ನಿಂದ 25 kW ವ್ಯಾಪ್ತಿಯಲ್ಲಿ ಹೊಸ ಉತ್ಪನ್ನಗಳನ್ನು ತರುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅದು ನೋಡುತ್ತಿದೆ. ಈ ಹೊಸ ಉತ್ಪನ್ನಗಳನ್ನು ಮುಂದಿನ 18 ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯ ಸಿಇಒ ಕೆಎನ್ ರಾಧಾಕೃಷ್ಣನ್(KN Radhakrishnan) ಅವರು ಇತ್ತೀಚಿಗೆ ನಡೆದ ಸಮ್ಮೇಳನದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್(new electric scooter) ಅನ್ನು ಟಿವಿಎಸ್‌ನ ಜನಪ್ರಿಯ ಜುಪಿಟರ್ ಎಂದು ಹೇಳಲಾಗುತ್ತಿದೆ. ಕಂಪನಿಯು ಸಲ್ಲಿಸಿದ ಪೇಟೆನಿಂದ Tvs ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೊಸ ಪವರ್ ಟ್ರೇನ್ ಪಡೆಯಲಿವೆ ಎಂಬುದು ತಿಳಿದು ಬಂದಿದೆ. ಇದು ಮುಂದಿನ ವರ್ಷ ಆಕ್ಟಿವಾ ಎಲೆಕ್ಟ್ರಿಕ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ (market)ಇಳಿಯಲಿದೆ. ಟಿವಿಎಸ್ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೊಸ ಮಿಡ್-ಮೌಂಟೆಡ್ ಮೋಟರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

TVS ಬಹುಶಃ ಈ ಹೊಸ ಪವರ್‌ಟ್ರೇನ್‌ನೊಂದಿಗೆ ಹೊಸ ಶ್ರೇಣಿಯ ಕಾರ್ಯಕ್ಷಮತೆ-ಆಧಾರಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತರಲು ಪ್ರಯತ್ನಿಸುತ್ತಿದೆ. ಅಂದರೆ ಹೆಚ್ಚಿನ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಧ್ಯದಲ್ಲಿ ಜೋಡಿಸಲಾದ ಮೋಟಾರ್‌ಗಳೊಂದಿಗೆ ಬರುತ್ತವೆ.ಎಥರ್ 450X ಮತ್ತು Ola S1 Pro ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೇ ರೀತಿಯ ವ್ಯವಸ್ಥೆಗಳನ್ನು ಬಳಸುತ್ತವೆ. ಇವು ವೇಗ, ರೇಂಜ್ ಹಾಗೂ ಪರ್ಫಾಮೆನ್ಸ್‌ನಲ್ಲಿ ಇವಿ ವಿಭಾಗದಲ್ಲಿ ಉತ್ತಮ ರೀತಿಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

TVS Jupiter EV scooter naಮೋಟರ್ ಉತ್ತಮ ಚಾಲನೆ ಅನುಭವವನ್ನು ನೀಡಲಿದೆ. ಟಿವಿಎಸ್ iQube ಕೇವಲ 4.2 ಸೆಕೆಂಡುಗಳಲ್ಲಿ 40 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಇದು ಮುಂಬರುವ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಆಗಲಿದೆ. ಇದನ್ನು ಜನವರಿ 2024 ರಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.

ಆಕ್ಟಿವಾ ಮತ್ತು ಜುಪಿಟರ್ ಭಾರತದಲ್ಲಿ ಮಾರಾಟವಾಗುವ ಟಾಪ್ 2 ಸ್ಕೂಟರ್‌ಗಳಾಗಿವೆ. ಇವೆರಡು ಕೂಡಾ ಪೆಟ್ರೋಲ್ ಸ್ಕೂಟರ್ಗಳು. ಈಗ ಇವಿ ವಿಭಾಗದಲ್ಲೂ ಇವು ಪೈಪೋಟಿಗೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಸದ್ಯಕ್ಕೆ, TVS iQube ಈಗಾಗಲೇ ದೇಶದ ಟಾಪ್ 10 ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯನ್ನು ಪ್ರವೇಶಿಸಿದೆ. ಇನ್ನು ಹೊಸ ಜುಪಿಟರ್ ಇವಿ ಕೂಡ ಟಿವಿಎಸ್‌ನ. ಮತ್ತಷ್ಟು ಮಾರಾಟಕ್ಕೆ ಸಹಕರಿಸುವ ಸಾಧ್ಯತೆಯಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

Leave A Reply

Your email address will not be published.