Dakshina Kannada : ದ.ಕ. ವಿಧಾನಸಭಾ ಚುನಾವಣೆ : ಕಾಂಗ್ರೆಸ್‌ನಿಂದ ಫೈನಲ್ ಆಗದ 3 ಕ್ಷೇತ್ರದ ಅಭ್ಯರ್ಥಿಗಳ ಹೆಸರು ,ಇವರೇ ಪ್ರಬಲ ಆಕಾಂಕ್ಷಿಗಳು
D.K. Assembly Elections :ಮಂಗಳೂರು : ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಿಗೆ (D.K. Assembly Elections) ಕಾಂಗ್ರೆಸ್ ಇನ್ನೂ ಟಿಕೇಟ್ ಘೋಷಣೆ ಮಾಡಿಲ್ಲ.ಈ ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಬ್ಬಿಣದ ಕಡಲೆಯಾಗಿದೆ.ಮಂಗಳೂರು ದಕ್ಷಿಣ, ಮಂಗಳೂರು ಉತ್ತರ,ಪುತ್ತೂರು ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳು ಫೈನಲ್ ಆಗಿಲ್ಲ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ (D.K. Assembly Elections) ಮಾಜಿ ಶಾಸಕ ಜೆ.ಆರ್. ಲೋಬೋ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ’ಸೋಜಾ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇದೆ. ಐವನ್ ಡಿ’ಸೋಜಾ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಲೋಬೋ ಬಣರಾಜಕೀಯದಿಂದ ದೂರವಿದ್ದಾರೆ. ಇವರ ಮಧ್ಯೆ, ಬಿಲ್ಲವ ಅಭ್ಯರ್ಥಿಗೆ ಸ್ಥಾನ ನೀಡಬೇಕು ಎಂಬ ಮಾತೂ ಕೇಳಿಬರುತ್ತಿದ್ದು, ಬಿಲ್ಲವ ಮುಖಂಡ ಪದ್ಮರಾಜ್ ಅವರ ಹೆಸರು ಮುಂಚೂಣಿಯಲ್ಲಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಅಭ್ಯರ್ಥಿ, ಮಾಜಿ ಶಾಸಕ ಮೊಯ್ದಿನ್ ಬಾವ ಹಾಗೂ ಡಿ.ಕೆ. ಶಿವಕುಮಾರ್ ಬಣದ ಹೊಸ ಅಭ್ಯರ್ಥಿ ಇನಾಯತ್ ಅಲಿ ನಡುವಿನ ಟಿಕೆಟ್ ಪೈಪೋಟಿ ಇದೆ. ಈ ಕಾರಣದಿಂದ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 15 ಮಂದಿ ಆಕಾಂಕ್ಷಿಗಳಿದ್ದಾರೆ. ಮುಖ್ಯವಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂಲಕ ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿದ್ದಾರೆ,ಇನ್ನೊಂದು ಕಡೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಅಶೋಕ್ ರೈ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರ ಪರೋಕ್ಷ ಬೆಂಬಲವಿದೆ. ಶಕುಂತಳಾ ಶೆಟ್ಟಿ ಹಾಗೂ ಅಶೋಕ್ ರೈ ಅವರು ಮೂಲ ಬಿಜೆಪಿಗರು.ಇನ್ನೂ ಜಿಲ್ಲೆಯಲ್ಲಿರುವ ಪ್ರಬಲ ಸಮುದಾಯವಾಗಿರುವ ಒಕ್ಕಲಿಗ ಸಮುದಾಯವರಿಗೂ ಟಿಕೇಟ್ ನೀಡ ಬೇಕೆಂಬ ಒತ್ತಾಯ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.ಒಕ್ಕಲಿಗ ಸಮಯದಾಯವರಿಗೆ ಟಿಕೆಟ್ ನೀಡಲೇ ಬೇಕೆಂದರೆ ಅದು ಸದ್ಯದ ಸ್ಥಿತಿಯಲ್ಲಿ ಪುತ್ತೂರಿನಿಂದ ಮಾತ್ರವೇ ಅವಕಾಶ ಇರೋದು.ಇಲ್ಲಿ ಸುಳ್ಯದ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ ರೇಸ್‌ನಲ್ಲಿದ್ದಾರೆ.
ಸುಳ್ಯದಲ್ಲಿ ಈಗಾಗಲೇ ಕೃಷ್ಣಪ್ಪ ಅವರಿಗೆ ಟಿಕೇಟ್ ಘೋಷಣೆ ಮಾಡಲಾಗಿದೆ.ಟಿಕೆಟ್ ಘೋಷಣೆ ಮಾಡಿರುವ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಸುಳ್ಯದಲ್ಲಿ ಮಾತ್ರ ಅಸಮಾಧಾನ ಇದೆ.ಇಲ್ಲಿ ನಂದ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್‌ನ ಒಂದು ಬಣ ಈಗಾಗಲೇ ಶಕ್ತಿ ಪ್ರದರ್ಶನ ನಡೆಸುತ್ತಿದೆ.