Coffee Land Lease : ಕಾಫಿ ಬೆಳೆಗಾರರಿಗೆ ಆರ್‌ ಅಶೋಕ್‌ ನೀಡಿದ್ರು ಬಂಪರ್‌ ಸಿಹಿ ಸುದ್ದಿ!

Coffee Land Lease: ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್​ ಅಶೋಕ್ (R Ashok) ಕಾಫಿ ಬೆಳೆಗಾರರಿಗೆ ಬಂಪರ್‌ ಸಿಹಿ ಸುದ್ದಿ ನೀಡಿದ್ದಾರೆ. ಕಾಫಿ ಬೆಳೆಗಾರರ (Coffee Growers) ಜಮೀನು ಅತಂತ್ರ ಪರಿಸ್ಥಿತಿಯಲ್ಲಿತ್ತು. ಕಂದಾಯ ಇಲಾಖೆಯ (Revenue Department) ಕಾಫಿ ಜಮೀನುಗಳಿಗೆ ದರ ನಿಗದಿ ಮಾಡಿದ್ದೇವೆ. 30 ವರ್ಷಗಳ ಕಾಲ ರೈತರಿಗೆ ಲೀಸ್ (Coffee Land Lease) ಕೊಡುವ ತೀರ್ಮಾನವನ್ನು ಸದನದಲ್ಲಿ ಮಾಡಿದ್ದೇವು. ಅಂತೆಯೇ ಕಾಫಿ ಬೆಳೆಗಾರರ ಬೇಡಿಕೆಗೆ ತಕ್ಕಂತೆ ದರ ನಿಗದಿ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

 

ಕಾಫಿ (coffee) ಬೆಳೆಯುವ ರೈತರಿಗೆ ಜಮೀನಿನ ದರ 1. 1 ರಿಂದ 5 ಎಕರೆವರೆಗೆ ಪ್ರತಿ ವರ್ಷ 1000 ರೂ. ಇದ್ದು, 2. 5 ರಿಂದ 10 ಎಕರೆವರೆಗೆ 1500 ರೂ. ಹಾಗೇ 3. 10 ರಿಂದ 15 ಎಕವರೆಗೆ 2000 ರೂ. ಇನ್ನು 4. 15 ರಿಂದ 20 ಎಕವರೆಗೆ 2500 ರೂ. ಆಗಿದ್ದು, 5. 20 ರಿಂದ 25 ಎಕವರೆಗೆ 3000 ರೂ. ದರ ನಿಗದಿ ಮಾಡಿದ್ದೇವೆ ಎಂದು ಹೇಳಿದರು.

ದಕ್ಷಿಣ ಕನ್ನಡ (dakshina Kannada), ಉಡುಪಿ (Udupi) ಭಾಗದಲ್ಲಿ 30 ವರ್ಷದಿಂದ ಕಾಫಿ ಬೆಳೆಗಾರರ ರೀತಿ, ಕುಮ್ಕಿ ಬೆಳೆಗಾರರು ಅಲೆದಾಡುತ್ತಿದ್ದರು. ಬೇಸಾಯಕ್ಕೆ ಅಲ್ಲದೆ ಸೊಪ್ಪು, ಹುಲ್ಲುಬಣಿ, ಸೌದೆಗೆ ಈ ಪ್ರದೇಶ ಬಳಸುತ್ತಿದ್ದರು. ಸದ್ಯ 5 ಎಕರೆ ಮೀರದಂತೆ, 30 ವರ್ಷ ಲೀಸ್ ಕೊಡಲು ನಿರ್ಧಾರ ಮಾಡಲಾಗಿದೆ. 1964 ಕಾಯ್ದೆ ತಿದ್ದುಪಡಿ ಮಾಡಲು ಸಿಎಂ ಬೊಮ್ಮಾಯಿಯವರಿಗೆ ಶಿಫಾರಸ್ಸು ಮಾಡಿದ್ದೇನೆ. ಕುಮ್ಕಿ ಜಮೀನು ಬಳಸುವ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಕಂದಾಯ ಸಚಿವನಾಗಿ ಕಾಫಿ ಬೆಳೆಗಾರರ ರೀತಿ, ಕುಮ್ಕಿ ಜಮೀನಿಗೂ ನ್ಯಾಯ ಒದಗಿಸಿದ್ದೇನೆ. ದರ ನಿಗದಿಯಾಗಿಲ್ಲ, ಕಡಿಮೆ ದರದಲ್ಲಿ ಮಾಡಲಾಗುವುದು ಎಂದು ಹೇಳಿದರು.

52 ಸಾವಿರ ಗೊಲ್ಲರ ಹಟ್ಟಿಗೆ ಹಾಗೂ ಕುರುಬರ ಹಟ್ಟಿಗೆ ಹಕ್ಕು ಪತ್ರ ನೀಡಲಾಗಿದೆ. ಈಗ ಕುರುಬರ ಹಟ್ಟಿ, ಗೊಲ್ಲರಹಟ್ಟಿಗೆ ಗ್ರಾಮ ಎಂದು ನಮೂದಿಸಲಾಗಿದೆ. 60 ಸಾವಿರ ಹಕ್ಕು ಪತ್ರ ನೀಡಲು ನಿರ್ಧಾರ ಮಾಡಲಾಗಿದ್ದು, ಅದರಲ್ಲಿ 40 ಸಾವಿರ ಹಕ್ಕು ಪತ್ರ ನೀಡಲಾಗಿದೆ. ಉಳಿದದ್ದು ಡಿಸಿಗಳಿಗೆ ಸೂಚಿಸಿ ಕೊಡಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ನನಗೆ ಮನವಿ ಪತ್ರ ನೀಡಿದ್ದನ್ನು ಈಡೇರಿಸುವ ಕೆಲಸ ಮಾಡಿದ್ದೇನೆ ಎಂದು ಸಚಿವರು ಹೇಳಿದರು.

Leave A Reply

Your email address will not be published.