Free Call: ಇನ್ನು ಮುಂದೆ ರೀಚಾರ್ಜ್ ಮಾಡದೆಯೂ ಫ್ರೀಯಾಗಿ ಕರೆ ಮಾಡಬಹುದು!! ಇಲ್ಲಿದೆ ಸಂಪೂರ್ಣ ವಿವರ
Free Call : ಎಷ್ಟೇ ದುಬಾರಿ ಸ್ಮಾರ್ಟ್ ಫೋನ್ (smartphone) ನಮ್ಮಲ್ಲಿ ಇದ್ದರೂ ನಾವು ಯಾರಿಗೆ ಕರೆ ಮಾಡಬೇಕಾದರೂ ರೀಚಾರ್ಜ್ ಇರಲೇ ಬೇಕು. ರಿಚಾರ್ಜ್ ಇಲ್ಲವಾದರೆ ಕಾಲ್ (Free Call) ಹೇಗೆ ಮಾಡೋದು ಎಂಬ ಚಿಂತೆ ನಿಮಗೆ ಹಲವು ಸಲ ಕಾಡಿರಬಹುದು. ಆದರೆ ಇನ್ನು ಮುಂದೆ ನೀವು ರೀಚಾರ್ಜ್ ಮಾಡದೆಯೇ ಉಚಿತವಾಗಿ ಯಾರಿಗೆ ಬೇಕಾದರೂ ಕಾಲ್ ಮಾಡಬಹುದು.
ನೀವು ಯಾರಿಗೂ ಕರೆ ಮಾಡಬೇಕಾದರೂ ಸಿಮ್ಗೆ ರೀಚಾರ್ಜ್ ಮಾಡಲೇ ಬೇಕು. ಆದರೆ ಈ ಟ್ರಿಕ್ ಮೂಲಕ ನೀವು ಯಾರಿಗೆ ಬೇಕಾದರೂ ಉಚಿತವಾಗಿಯೇ ಕಾಲ್ ಮಾಡಬಹುದು.
ಕೆಲವು ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಮಹತ್ತರವಾದ ನಿಯಮವೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಯಾರೇ ಆಗಲಿ, ಯಾವುದೇ ಸಿಮ್ ಹೊಂದಿದ್ದರು ತಮ್ಮ ಸಿಮ್ನಲ್ಲಿ ನಿಗದಿತವಾಗಿ ತಿಂಗಳ ರೀಚಾರ್ಜ್ ಪ್ಯಾಕ್ ಅನ್ನು ಹೊಂದಿರಬೇಕು. ಆದರೆ ಇನ್ಮುಂದೆ ಯಾವುದೇ ರೀಚಾರ್ಜ್ ಮಾಡದೇ ಉಚಿತವಾಗಿಯೇ ಇನ್ನೊಬ್ಬರಿಗೆ ಕಾಲ್ ಮಾಡಬಹುದಾಗಿದೆ.
ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು. ಅದಲ್ಲದೆ ಕಾಲ್ ಮಾಡಲು ಇಂಟರ್ನೆಟ್ ಸಹ ಅಗತ್ಯವಿರುವುದಿಲ್ಲ.
ಈ ಅಪ್ಲಿಕೇಶನ್ನ ಹೆಸರು ಬ್ಲೂಟೂತ್ ವಾಕಿ ಟಾಕಿ. ಇದನ್ನು ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಬ್ಲೂಟೂತ್ (Bluetooth ) ವಾಕಿ ಟಾಕಿ ಅಪ್ಲಿಕೇಶನ್ (application) ಅನ್ನು ಡೌನ್ಲೋಡ್ ಮಾಡಿದ ನಂತರ, ಇಲ್ಲಿ ನಿಮಗೆ ವೈ-ಫೈ ಮತ್ತು ರಿಫ್ರೆಶ್ಗಾಗಿ 2 ಆಯ್ಕೆಗಳನ್ನು ತೋರಿಸಲಾಗುತ್ತದೆ.
ನೀವು ಈ ಅಪ್ಲಿಕೇಶನ್ ಮೂಲಕ ಉಚಿತವಾಗಿ ಕಾಲ್ ಮಾಡಲು ಬಯಸಿದ್ರೆ , ನಂತರ ನೀವು ಮಾತನಾಡಲು ಬಯಸುವ ವ್ಯಕ್ತಿಯಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಮತ್ತು ನೀವು ಮಾಡಿದಂತೆಯೇ ಲಾಗಿನ್ ಆಗಲು ಹೇಳಿ. ನಂತರ ನೀವು ರಿಫ್ರೆಶ್ ಆಯ್ಕೆಯನ್ನು ಸೆಲೆಕ್ಟ್ ಮಾಡಿದಾಗ ಅಲ್ಲಿ ನಿಮಗೆ ಆನ್ ಆಗಿರುವ ಬ್ಲೂಟೂತ್ ಸಾಧನಗಳನ್ನು ತೋರಿಸುತ್ತದೆ. ಅದರಲ್ಲಿ ನೀವು ಕರೆ ಮಾಡಲು ಬಯಸುವಂತಹ ಬ್ಲೂಟೂತ್ ಅನ್ನು ಆಯ್ಕೆ ಮಾಡ್ಬೇಕು.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಬ್ಲೂಟೂತ್ ವಾಕಿ ಟಾಕಿ ಅಪ್ಲಿಕೇಶನ್ನ ವ್ಯಾಪ್ತಿಯು 100 ಮೀಟರ್ಗಳವರೆಗೆ ಮಾತ್ರ ಇರುತ್ತದೆ, ಅಂದರೆ, ಈ ಅಪ್ಲಿಕೇಶನ್ ಹೊಂದಿರುವ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ವ್ಯಕ್ತಿಯೊಂದಿಗೆ ನೀವು ಉಚಿತವಾಗಿ ಮಾತನಾಡಬಹುದು.
ಒಟ್ಟಿನಲ್ಲಿ ನೀವು ಹಣ ಮತ್ತು ಇಂಟರ್ನೆಟ್ ಖರ್ಚು ಮಾಡದೆಯೇ ಜೀವಮಾನದ ಉಚಿತ ಕರೆಗಳನ್ನು ಮಾಡಲು ಬಯಸಿದರೆ, ನೀವು ನಿಮ್ಮ ಸ್ಮಾರ್ಟ್ಫೋನ್ನ ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ.