Cheaper and Costlier Items : ಬಜೆಟ್ ಹಿನ್ನೆಲೆ ಏಪ್ರಿಲ್‌ 1ರಿಂದ ವಸ್ತುಗಳ ಬೆಲೆಯಲ್ಲಿ ಆಗಲಿದೆ ಏರಿಳಿತ ; ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಯಾವುದು ಅಗ್ಗ? ಸಂಪೂರ್ಣ ವಿವರ ಇಲ್ಲಿದೆ

Cheaper and Costlier Items: ಏಪ್ರಿಲ್ 1, 2023ರಿಂದ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗಲಿದೆ. ಆಮದು ಸುಂಕವನ್ನು ಏರಿಕೆ ಮಾಡಿದ್ದು, ಈ ಕಾರಣದಿಂದಾಗಿ ಮುಂದಿನ ಹಣಕಾಸು ವರ್ಷ ಆರಂಭದ ಮೊದಲ ದಿನದಿಂದ ಅಂದರೆ ಏಪ್ರಿಲ್ 1, 2023ರಿಂದ ಕೆಲವು ವಸ್ತುಗಳ ದರವು ದುಬಾರಿಯಾಗಲಿದೆ ಎಂದು ಹೇಳಲಾಗಿದೆ. ಯಾವೆಲ್ಲಾ ವಸ್ತುಗಳು ದುಬಾರಿಯಾಗಲಿದೆ? ಯಾವುದು ಅಗ್ಗವಾಗಲಿದೆ? (Cheaper and Costlier Items) ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

 

ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (nirmala sitharaman) ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ 2023ರ ಬಜೆಟ್ ಮಂಡಿಸಿದ್ದು, ಇದು ಐದನೇ ಬಾರಿಗೆ ಮಂಡಿಸಿದ ಬಜೆಟ್ (budget 2023) ಆಗಿದೆ. ಈ ವೇಳೆ ಸಚಿವೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಹಾಗೆಯೇ ಯಾವೆಲ್ಲಾ ವಸ್ತುಗಳ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಯಾವೆಲ್ಲ ವಸ್ತುಗಳು ದುಬಾರಿ (expensive)?
ಛತ್ರಿಗಳು ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನ್ಂ ಸಿಗರೇಟ್‌, ವಿದೇಶಿ ವಾಹನ, ಬ್ರಾಂಡೆಡ್‌ ಬಟ್ಟೆ, ಹೆಡ್‌ಫೋನ್‌, ಇಯರ್‌ಫೋನ್‌ ಸ್ಮಾಟ್‌ ಮೀಟರ್‌ಗಳು, ಸೋಲಾರ್‌ ಸೆಲ್ಸ್‌ ಎಕ್ಸ್‌ರೇ ಮಿಷಿನ್‌, ವೈದ್ಯಕೀಯ ವಸ್ತುಗಳು, ಎಲೆಕ್ಟ್ರಾನಿಕ್‌ ಆಟದ ಸಾಮಾನು, ಇವುಗಳ ದರವು ಏಪ್ರಿಲ್ 1ರಿಂದ ದುಬಾರಿಯಾಗಲಿದೆ ಎನ್ನಲಾಗಿದೆ. ಪ್ರಮುಖವಾಗಿ ಖಾಸಗಿ ವಿಮಾನ, ಹೆಲಿಕಾಫ್ಟರ್, ಹೈ ಎಂಡ್ ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್‌ ವಸ್ತುಗಳು, ಜ್ಯುವೆಲ್ಲರಿ, ಹೈ ಗ್ಲಾಸ್ ಪೇಪರ್, ವಿಟಮಿನ್‌ಗಳ ದರವು ಏಪ್ರಿಲ್ 1 ರಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

ಯಾವೆಲ್ಲ ವಸ್ತುಗಳು ಅಗ್ಗವಾಗಲಿದೆ?
ಸಿಮೆಂಟ್, ಉಕ್ಕು, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಟಿವಿ, ಎಲೆಕ್ಟಿಕ್‌ ವಾಹನ, ಎಲೆಕ್ಟ್ರಿಕ್‌ ಚಿಮಣಿ, ಕ್ಯಾಮರಾ ಲೆನ್ಸ್‌, ಚಾರ್ಜರ್‌ ಇಂಗು, ಕೋಕೋ ಬೀನ್ಸ್ ಮೀಥೈಲ್ ಆಲ್ಕೋಹಾಲ್ ಕತ್ತರಿಸಿ ನಯಗೊಳಿಸಿದ ವಜ್ರಗಳು, ಸ್ಮಾರ್ಟ್ ಫೋನ್‌ಗಳ ಬೆಲೆ ಏಪ್ರಿಲ್ 1ರಿಂದ ಅಗ್ಗವಾಗಲಿದೆ.

ಬಜೆಟ್ ನಲ್ಲಿ ಕೇಂದ್ರ ಸರ್ಕಾರವು (central government) ಹಲವಾರು ವಸ್ತುಗಳ ಆಮದು ಸುಂಕವನ್ನು ಕೂಡಾ ಏರಿಕೆ ಮಾಡಿದೆ. ಅಡುಗೆ ಮನೆಯಲ್ಲಿ ಬಳಸುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇಕಡ 7.5ರಿಂದ ಶೇಕಡ 15ಕ್ಕೆ ಏರಿಕೆ ಮಾಡಲಾಗಿದೆ. ಮಿಕ್ಸಿ ಮೊದಲಾದವುಗಳು ಇನ್ನುಮುಂದೆ ದುಬಾರಿಯಾಗಲಿದೆ. ಇದು ಸಾಮಾನ್ಯ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.

ಕೇಂದ್ರ ಬಜೆಟ್‌ನಲ್ಲಿ, ಬಟ್ಟೆ, ಸಂಸ್ಕರಿಸಿದ ಕಪ್ಪೆಚಿಪ್ಪು, ಸಂಸ್ಕರಿಸಿದ ಸ್ಕ್ವಿಡ್ ಮೀನು (frozen squid), ಇಂಗು, ಕೋಕೋ ಬೀನ್ಸ್ ಮುಂತಾದ ವಸ್ತುಗಳ ದರವನ್ನು ಇಳಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವಾಲಯದ ಮಾಡಿದ್ದು, ಅಸಿಟಿಕ್ ಆಮ್ಲ (acetic acid), ಕತ್ತರಿಸಿದ ಪಾಲಿಶ್ ಮಾಡಿ ವಜ್ರಗಳು, ಪೆಟ್ರೋಲ್ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುವ ಕೆಮಿಕಲ್‌ಗಳು, ಮೊಬೈಲ್ ಫೋನ್‌ನ ಕ್ಯಾಮೆರಾ ಲೆನ್ಸ್‌ಗಳ ಆಮದು ಸುಂಕವನ್ನು ಕೇಂದ್ರ ಸರ್ಕಾರವು ಇಳಿಕೆ ಮಾಡಿದೆ.

ಇದನ್ನೂ ಓದಿ: Meat Sale Ban : ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ !

Leave A Reply

Your email address will not be published.