Optical illusion: ಓದುಗರೇ, ಇಲ್ಲಿ ನೀಡಿರುವ ಮಹಿಳೆಯರ ಚಿತ್ರಣದಲ್ಲಿರುವ ವ್ಯತ್ಯಾಸವನ್ನು ಗುರುತಿಸುವಿರಾ?

Optical illusion viral game : ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಕಾಣ ಸಿಗುತ್ತವೆ. ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ (optical illusion viral game) ಚಾಲೆಂಜ್ ಗಳನ್ನು ನೀವು ನೋಡಿರಬಹುದು. ಪ್ರಾಣಿ ಅಥವಾ ಪಕ್ಷಿಗಳನ್ನು ಹುಡುಕುವುದು. ಬಂಡೆಕಲ್ಲಿನ ನಡುವೆ ಯಾವುದೋ ಜೀವಿಯನ್ನು ಹುಡುಕಿ ಎನ್ನುವಂತಹ ಚಾಲೆಂಜ್ ಗಳನ್ನು ನೀವು ನೋಡಿರುತ್ತೀರಾ!!.

 

ಇಂತಹ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ (photo) ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral) ಆಗಿದೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಈ ಆಪ್ಟಿಕಲ್ ಇಲ್ಯೂಷನ್​ಗಳಂತಹ ಚಿತ್ರಣಗಳು ಸಹಕಾರಿಯಾಗಿದೆ. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ?. ಇಲ್ಲಿದೆ ನೋಡಿ ನಿಮಗೆ ಸವಾಲ್!!.

ಇಲ್ಲಿ ಇಬ್ಬರು ದೇಸಿ ಮಹಿಳೆಯರ (women’s) ಫೋಟೋ ನೀಡಲಾಗಿದೆ. ನೀವು ಅವುಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಬೇಕು. ಆದಷ್ಟು ಬೇಗನೆ ಹುಡುಕಬೇಕು. ತಮ್ಮ ಬುದ್ಧಿವಂತಿಕೆಯಿಂದ ಅತಿ ಬೇಗ ಉತ್ತರ ಹುಡುಕಿದವರು ನಿಮಗೆ ನೀವೇ ಭೇಷ್!! ಅಂದುಕೊಳ್ಳಿ. ಇನ್ನು ಎಷ್ಟು ದಿಟ್ಟಿಸಿ ನೋಡಿದರೂ ವ್ಯತ್ಯಾಸ ಗೊತ್ತಾಗದೇ ಇರುವವರು ಇಲ್ಲಿ ಕೇಳಿ.

ಮಹಿಳೆಯ ಸೀರೆಯ ಬಣ್ಣ – ಎಡ ಚಿತ್ರವು ನೀಲಿ ಬಣ್ಣದ ಸೀರೆಯಲ್ಲಿ ತೆಳ್ಳಗಿನ ಚಿನ್ನದ ಗಡಿಯೊಂದಿಗೆ ಮಹಿಳೆಯನ್ನು ತೋರಿಸುತ್ತದೆ, ಆದರೆ ಬಲ ಚಿತ್ರದಲ್ಲಿ ಅವಳು ವಿಶಾಲವಾದ ಗುಲಾಬಿ ಅಂಚು ಹೊಂದಿರುವ ಹಸಿರು ಸೀರೆಯನ್ನು ಧರಿಸಿದ್ದಾಳೆ. ಹಾಗೇ ಮಹಿಳೆ ಎಡ ಚಿತ್ರದಲ್ಲಿ ಉಂಗುರವನ್ನು ಧರಿಸಿದ್ದಾಳೆ, ಆದರೆ ಬಲ ಚಿತ್ರದಲ್ಲಿ ಇಲ್ಲ. ಇದುವೇ ಉತ್ತರ.

Leave A Reply

Your email address will not be published.