Rahul Gandhi : ರಾಹುಲ್‌ ಬೆಂಬಲಿಸಲು ವಿಪಕ್ಷಗಳ ಸಂಸದರೆಲ್ಲರೂ ರಾಜೀನಾಮೆ ನೀಡಲು ಮುಂದಾದ್ರಾ? ಹಾಗಿದ್ರೆ ದೇಶದ ರಾಜಕೀಯದಲ್ಲಿ ಆಗುತ್ತಾ ಮಹಾ ಬದಲಾವಣೆ?

Rahul Gandhi disqualification : ಪ್ರಧಾನಿ ಮೋದಿ(PM Modi) ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಆದ ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡ (Rahul Gandhi disqualification ) ಬೆನ್ನಲ್ಲೇ ಸದ್ಯ ವಿಪಕ್ಷ ಸ್ಥಾನದ್ಲಿರುವ ಎಲ್ಲಾ ಸಂಸದರೂ ಸ್ವ ಇಚ್ಛೆಯಿಂದ ರಾಜಿನಾಮೆ ನೀಡುತ್ತಾರಾ? ಎಂಬ ಪ್ರಶ್ನೆಯೊಂದು ರಾಜಕೀಯ ರಂಗದಲ್ಲಿ ಉದ್ಭವಿಸಿದೆ.

 

ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ತಮ್ಮ ಟ್ವಿಟರ್‌ ಬಯೋವನ್ನು ಬದಲಾಯಿಸಿದ್ದರು. ಕಾಂಗ್ರೆಸ್(Congress) ನಾಯಕರೆಲ್ಲರೂ ರಾಜ್ ಘಾಟ್(Raj Ghat) ಬಳಿ ಧರಣಿ ನಡೆಸಿದ್ದಲ್ಲದೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕತ್ತವಾಗುತ್ತಿದೆ. ಆದರೆ ಇದರ ನಡುವೆಯೇ ವಿಪಕ್ಷ ಸ್ಥಾನದ್ಲಿರುವ ಎಲ್ಲಾ ಸಂಸದರೂ ಸ್ವ ಇಚ್ಛೆಯಿಂದ ರಾಜಿನಾಮೆ ನೀಡಿ ರಾಹುಲ್ ಗಾಂಧಿಗೆ ಬೆಂಬಲವಾಗಿ ನಿಲ್ಲುತ್ತಾರಾ? ಎಂಬ ಪ್ರಶ್ನೆಯೊಂದು ರಾಜಕೀಯ ರಂಗದಲ್ಲಿ ಉದ್ಭವಿಸಿದೆ. RJD ಶಾಸಕರೊಬ್ಬರು ನೀಡಿದ ಹೇಳಿಕೆಯೊಂದು ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ.

ಹೌದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಲೋಕಸಭೆ ಸದಸ್ಯತ್ವವನ್ನು ಅನರ್ಹ ಮಾಡಿರುವುದರ ಕುರಿತು ಬಿಜೆಪಿ ಹೊರತಾದ ಪಕ್ಷಗಳು ಒಗ್ಗಟ್ಟಾಗಿ ಪ್ರತಿಭಟಿಸಬೇಕು. ದೇಶದ ಪ್ರಜಾಪ್ರಭುತ್ವಕ್ಕೆ ಆತಂಕ ಬಂದಿರುವ ಈ ಹೋರಾಟದಲ್ಲಿ ಬಿಹಾರ ಸಿಎಂ ನಿತೀಶ್‌ ಕುಮಾರ್‌(Bihar CM Niteesh Kumar) ವಿರೋಧ ಪಕ್ಷಗಳ ಪಾಳಯವನ್ನು ಮುನ್ನಡೆಸಬೇಕು ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶಾಸಕ ಭಾಯಿ ವೀರೇಂದ್ರ(Bhai Veerendra) ಮನವಿ ಮಾಡಿದ್ದಾರೆ. ಅಲ್ಲದೆ ‘ಪ್ರತಿಪಕ್ಷಗಳ ಎಲ್ಲ ಸಂಸದರು ರಾಜೀನಾಮೆ ನೀಡಿ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವಂತೆ ನಾನು ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವವನ್ನು ಉಳಿಸಲು ಸಂಸದರು ಈ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ಲಖನ್ ಸಿಂಗ್ ಯಾದವ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಶಾಸಕ ವೀರೇಂದ್ರ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ “ಬಿಜೆಪಿ(BJP) ವಿರುದ್ಧ ಹೋರಾಡಲು ಎಲ್ಲಾ ವಿಪಕ್ಷಗಳ ನಾಯಕರು ಒಗ್ಗೂಡಬೇಕೆಂದು ನಾನು ಒತ್ತಾಯಿಸಿದ್ದೇನೆ ಮತ್ತು 2024 ರಲ್ಲಿ ಬಿಜೆಪಿ ವಿರುದ್ಧದ ಪ್ರತಿಪಕ್ಷದ ಹೋರಾಟವನ್ನು ನಿತೀಶ್ ಕುಮಾರ್ ಮುನ್ನಡೆಸಬೇಕು” ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಅವರು “ನನ್ನ ದೃಷ್ಟಿಯಲ್ಲಿ ರಾಹುಲ್ ಗಾಂಧಿಗೆ ಏನಾಗಿದೆ ಎಂಬುದು ಅಂತ್ಯವಲ್ಲ. ಇದು ಕೇವಲ ಆರಂಭವಾಗಿರಬಹುದು. ನನ್ನ ನಾಯಕ (ಉಪ ಮುಖ್ಯಮಂತ್ರಿ) ತೇಜಸ್ವಿ ಯಾದವ್ ಈಗಾಗಲೇ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಮುಂದೆ ನಾನೇ ಇರಬಹುದು. ಇದು ಸೂಕ್ತ ಸಮಯ. ಪ್ರಜಾಪ್ರಭುತ್ವದ ಬೆದರಿಕೆಯ ವಿರುದ್ಧ ಇಡೀ ಪ್ರತಿಪಕ್ಷಗಳು ಹೋರಾಟಕ್ಕೆ ಧುಮುಕಬೇಕು. ಎಲ್ಲ ವಿರೋಧ ಪಕ್ಷದ ಸಂಸದರು ರಾಜೀನಾಮೆ ನೀಡುವ ಮೂಲಕ ಇದರ ಆರಂಭವನ್ನು ಮಾಡಬಹುದು ಮತ್ತು ಅದರ ನಂತರ, ನಮ್ಮ ಮುಖ್ಯಮಂತ್ರಿಗಳ ಮುಂದಾಳತ್ವದಲ್ಲಿ ರಾಷ್ಟ್ರವನ್ನು ಮುನ್ನಡೆಸಿದರೆ ಒಳ್ಳೆಯದು” ಎಂದು ಹೇಳಿದರು.

ಇದನ್ನೂ ಓದಿ : Yatnal hits Muslims: ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ ? –ಗುಡುಗಿದ ಯತ್ನಾಳ್‌ !

Leave A Reply

Your email address will not be published.