New Skoda Kushaq ONYX : ಗ್ರಾಹಕರನ್ನು ಆಕರ್ಷಿಸಲು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಸ್ಕೋಡಾ ಕುಶಾಕ್ ಓನಿಕ್ಸ್!!

New Skoda Kushaq ONYX : ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಸ್ಕೋಡಾ ಕಂಪನಿಯ ‘New Skoda Kushaq ONYX’ ಆವೃತ್ತಿ. ಹೌದು, ಸ್ಕೋಡಾ ಕುಶಾಕ್ ಓನಿಕ್ಸ್ ಹೊಸ ಫಾಕ್ಸ್ ಡಿಫ್ಯೂಸರ್ ಜೊತೆಗೆ ಗ್ರಿಲ್ ಸುತ್ತ ಕ್ರೋಮ್ ಸರೌಂಡ್ ಪಡೆದಿದ್ದು, B-ಪಿಲ್ಲರ್‌ಗಳ ಮೇಲೆ ಬೋಲ್ಡ್ ಫಾಂಟ್‌ನಲ್ಲಿ ಓನಿಕ್ಸ್ ಬ್ಯಾಡ್ಜಿಂಗ್ ಅನ್ನು ನೋಡಬಹುದು. ಅದಲ್ಲದೆ ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯನ್ನು ಬೇಸ್ ಆಕ್ಟಿವ್ ಮತ್ತು ಆಂಬಿಷನ್ ಕ್ಲಾಸಿಕ್ ಟ್ರಿಮ್‌ಗಳ ನಡುವೆ ಇರಿಸಲಾಗಿದೆ.

ಜೊತೆಗೆ 16 ಇಂಚಿನ ಸ್ಟೀಲ್ ವೀಲ್‌ಗಳಿಗಾಗಿ ವಿಭಿನ್ನ ಶೈಲಿಯ ಕವರ್‌ಗಳನ್ನು ಕೂಡ ನೀಡಲಾಗಿದೆ. ಆಕರ್ಷಣೀಯ ಹಿನ್ನೆಲೆಯಲ್ಲಿ ಇದರ ಡೋರ್‌ಗಳ ಮೇಲೆ ಉತ್ತಮ ಗ್ರಾಫಿಕ್ಸ್ ಡಿಸೈನ್‌ ನೀಡಲಾಗಿದ್ದು, ಇದು ಓನಿಕ್ಸ್ ಆವೃತ್ತಿಯನ್ನು ಮತ್ತಷ್ಟು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತದೆ.

ಇನ್ನುಳಿದಂತೆ ಸ್ಕೋಡಾ ಬ್ಲಾಕ್ ಲೆದರೇಟ್, ಸಿಲ್ವರ್ ಡ್ಯಾಶ್‌ ಬೋರ್ಡ್ ನೊಂದಿಗೆ ನರ್ಲ್ಡ್ ಪ್ಯಾಟರ್ನ್‌ಗಳು ಮತ್ತು ಇತರ ವಿನ್ಯಾಸ ಅಂಶಗಳೊಂದಿಗೆ 2 ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಉಳಿಸಿಕೊಂಡಿದೆ. ಇದು ಮೊದಲಿನಂತೆ ಹೆಚ್ಚು ಆಕರ್ಷಣೀಯವಾಗಿಯೇ ಇದೆ.

New Skoda Kushaq ONYX ಫೀಚರ್‌ಗಳು :
ಇದು ವೈರ್ಡ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಹಿಂಭಾಗದ AC ವೆಂಟ್‌ಗಳು ಇವೆ.

ಅದಲ್ಲದೆ ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಫಾಗ್ ಲೈಟ್‌ಗಳು, ರೂಫ್ ರೈಲ್‌ಗಳು, ವೀಲ್ ಕವರ್‌ಗಳು, ರಿಯರ್ ವಾಷರ್ ವೈಪರ್, ರಿಯರ್ ಡಿಫಾಗರ್, ರಿಮೋಟ್ ಲಾಕಿಂಗ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯು 115 bhp ಪವರ್ ಮತ್ತು 175 Nm ಟಾರ್ಕ್ ನೊಂದಿಗೆ 1.0L 3-ಸಿಲಿಂಡರ್ TSI ಎಂಜಿನ್ ಪಡೆಯುವ ಸಾಧ್ಯತೆಯಿದೆ.

ಕಂಪನಿಗೆ ಸಂಬಂಧಿಸಿದಂತೆ ಉತ್ತಮ ಮಾರಾಟ ಗಳಿಸುತ್ತಿರುವ ಕುಷಾಕ್ ಮಾದರಿಯಿಂದಾಗಿಯೇ ಇದೀಗ ಓನಿಕ್ಸ್ ಅನ್ನು ಪರಿಚಯಿಸಲಾಗಿದೆ. ಈ ಕಾಂಪಾಕ್ಟ್ ಎಸ್‌ಯುವಿ ವಿಭಾಗವು ಅತಿ ಹೆಚ್ಚು ಸ್ಪರ್ಧೆಯಿರುವ ವಿಭಾಗವಾಗಿದೆ. ಕ್ರೆಟಾ ಮತ್ತು ಸೆಲ್ಟೋಸ್ ಎರಡರ ಫೇಸ್‌ಲಿಫ್ಟ್ ಮಾಡೆಲ್‌ಗಳು ಈ ವಿಭಾಗವನ್ನು ಸದ್ಯ ಆಳುತ್ತಿವೆ. ಇವು ಈ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.

ಇನ್ನು ನಿರ್ದಿಷ್ಟ ಪ್ರೇಕ್ಷಕರಿಗೆ ತಕ್ಕಂತೆ ಮಾಡಲಾದ ಹೆಚ್ಚಿನ ರೂಪಾಂತರಗಳೊಂದಿಗೆ, ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್ ಈ ಜಾಗದಲ್ಲಿ ಗ್ರಾಹಕರನ್ನು ಆಕರ್ಷಣೆ ಮಾಡಬಹುದು.

ಸದ್ಯ ಕುಶಾಕ್ ONYX ಆವೃತ್ತಿಯ ಬೆಲೆಗಳು ರೂ. 12.4 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗಲಿದ್ದು, ಮೊದಲಿನಿಂದಲೂ ಕುಶಾಕ್ ಮಾದರಿಯು ಅದರ ವಿನ್ಯಾಸ ಹಾಗೂ ಬೆಲೆಗೆ ತಕ್ಕ ಫೀಚರ್‌ಗಳ ವಿಷಯದಲ್ಲಿ ಜನಪ್ರಿಯತೆ ಪಡೆದಿದೆ.

Leave A Reply

Your email address will not be published.