Expensive Liquor Bottle: ವಿಶ್ವದ ಅತ್ಯಂತ ದುಬಾರಿ ಮದ್ಯದ ಬಾಟಲಿಗಳು ಯಾವುದು ಗೊತ್ತಾ?

Expensive Liquor Bottle: ಮದ್ಯ ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋಇಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!. ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!. ಆದರೆ, ಮದ್ಯ ಪ್ರಿಯರಿಗೆ( Liquor)ಈ ಸುದ್ಧಿ ಕೇಳಿ ಬೇಜಾರಾದರೂ ಅಚ್ಚರಿಯಿಲ್ಲ.

 

ನಿಮಗೆ ವಿಶ್ವದ ಅತ್ಯಂತ ದುಬಾರಿ ಮದ್ಯದ ಬೆಲೆ (Expensive Liquor Bottle) ಎಷ್ಟು ಅಂತಾ ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ!! ಅದು ಬಿಡಿ!! ಲಕ್ಷಗಟ್ಟಲೇ ಖರ್ಚು ಮಾಡಿ ಕುಡಿಯುವುದು ದೊಡ್ಡ ವಿಷಯವೇನಲ್ಲ ಎಂದುಕೊಂಡರೂ ಕೂಡ ಹಣ ಉಳಿತಾಯ ಮಾಡುವ ವ್ಯಕ್ತಿ ಆ ದುಡ್ಡಲ್ಲಿ ಐಷಾರಾಮಿ ಕಾರನ್ನೋ ಇಲ್ಲವೇ ಸೈಟ್ ಅನ್ನೋ ಖರೀದಿ ಮಾಡಬಹುದಿತ್ತೆನೋ ಎಂದು ಮರುಗಿದರೂ ಅತಿಶೋಕ್ತಿಯೇನಲ್ಲ. ವಿಶ್ವದ ಅತ್ಯಂತ ದುಬಾರಿ ಮದ್ಯದ ಆರು ಬಾಟಲಿಗಳಿವೆಯಂತೆ. ಇದರ ಬೆಲೆ ಕೇಳಿದರೆ ಸಾಕು!! ನಶೆಯಲ್ಲಿದ್ದವರು ಕೂಡ ಗಾಬರಿಯಲ್ಲಿ ಮೂಗಿನ ಮೇಲೆ ಬೆರಳಿಟ್ಟರು ಆಶ್ಚರ್ಯವಿಲ್ಲ. ಹಾಗಿದ್ರೆ, ವಿಶ್ವದ ದುಬಾರಿ ಮದ್ಯ ಯಾವುದೆಲ್ಲ ಅಂತೀರಾ?

ವರ್ಲ್ಡ್ ಕಾಸ್ಟ್ಲಿ ಆಲ್ಕೋಹಾಲ್ ಬ್ರ್ಯಾಂಡ್ಗಳು (World Costly Alchohol Brands) ಎಲ್ಲಿ ಲಭ್ಯವಾಗುತ್ತದೆ ಎಂಬ ಮಾಹಿತಿ ತಿಳಿಯದೇ ಹೋದರೂ ಕೂಡ ಈ ದುಬಾರಿ ಮದ್ಯದ ಬಾಟಲಿಗಳನ್ನು(Liquor Bottle) ಸಾಮಾನ್ಯ ಮದ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ತಯಾರಿಸಿ ದೀರ್ಘ ಸಮಯದವರೆಗೆ ಸ್ಟೋರ್ ಮಾಡಿಡಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ವೈನ್ ಎಂಬ ಖ್ಯಾತಿ ಪಡೆದಿರುವ ಟಕಿಲಾ ಲೀ .925 ಎಂದು ಮೊದಲ ಸ್ಥಾನವನ್ನು ತನ್ನೊಡಲಿಗೆ ಹಾಕಿಕೊಂಡಿದ್ದು, ಇದರ ಬೆಲೆ ಬರೋಬ್ಬರಿ ಸುಮಾರು ರೂ. 25 ಕೋಟಿ ರೂ. ಯಂತೆ!! ಅರೇ ಇಷ್ಟೆಲ್ಲಾ ದುಡ್ಡು ಸುರಿದು ಎಣ್ಣೆ ಕುಡಿಬೇಕಾ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಮೂಡಬಹುದು.

ಆದರೆ ಏನು ಮಾಡೋಣ? ಎಣ್ಣೆ ಎಂದರೆ ಸಾಕು ಮದ್ಯ ಪ್ರಿಯರಿಗೆ ಒಂದು ರೀತಿಯ ಸೆಳೆತ!!ಈ ಔಷಧವು ಮಾದಕವಲ್ಲದೆ ಹೋದರೂ ಕೂಡ ಬಾಟಲಿಯು 6400 ವಜ್ರಗಳನ್ನ ಒಳಗೊಂಡಿದೆಯಂತೆ. ಈ ಬಾಟಲ್​ ಗೋಸ್ಕರ ಸ್ಪೆಷಲ್ ಕಸ್ಟಮರ್ ಗಳು ಕೂಡ ಇದ್ದು, ಇಷ್ಟು ದುಬಾರಿ ಬೆಲೆ ಕೊಟ್ಟು ಕುಡಿಯಲು ಆಗದೇ ಇದ್ದರೂ ಕೂಡ ಕನಿಷ್ಠ ಬಾಟಲಿಯನ್ನು ಖರೀದಿಸಿ ವಾಸನೆ ಮೂಗಿಗೆ ಬಡಿಯುತ್ತದಲ್ಲ ಅಷ್ಟಕ್ಕೆ ಸುಮ್ಮನಾಗಬೇಕಷ್ಟೇ!!

ವಿಶ್ವದ ಅತ್ಯಂತ ದುಬಾರಿ ರೆಡ್ ವೈನ್ ಬೆಲೆ(Expensive Liquor Bottle) ಎಷ್ಟು ಗೊತ್ತಾ? ಪೆನ್ಫೋಲ್ಡ್ಸ್ ಆಂಪೋಲ್ ವಿಶ್ವದ ಅತ್ಯಂತ ದುಬಾರಿ ಕೆಂಪು ವೈನ್ ಎನ್ನಲಾಗಿದ್ದು, ಈ ಬ್ರಾಂಡ್ ನ ರೆಡ್ ವೈನ್ ಬಾಟಲಿಯ ಬೆಲೆ 20 ಲಕ್ಷ ರೂಪಾಯಿಯಾಗಿದ್ದು , ಈ ದುಬಾರಿ ಮದ್ಯದ ಬೆಲೆಯಲ್ಲಿ ಒಂದು ಮನೆಯನ್ನೇ ಕೊಂಡುಕೊಳ್ಳಬಹುದೇನೋ!! ಎಂದೆನಿಸಿದರೂ ಕೂಡ ಅಚ್ಚರಿಯಿಲ್ಲ. ನಾವು ವಿಶ್ವದ ಅತ್ಯಂತ ದುಬಾರಿ ಶಾಂಪೇನ್ ಬಗ್ಗೆ ತಿಳಿದರೆ, ಅಮಂಡಾ ಡಿ ಬ್ರಿಗ್ನಾಕ್ ಮಿಡಾಸ್ ಹೆಸರು ಮೊದಲ ಸ್ಥಾನವನ್ನ ಬಾಚಿಕೊಂಡಿದೆ. ಈ ಶಾಂಪೇನ್ನ ಬಾಟಲಿಯ ಬೆಲೆ ಎಷ್ಟು ಗೊತ್ತಾ?? ಸುಮಾರು 1 ಕೋಟಿ 40 ಲಕ್ಷ ರೂಪಾಯಿಗಳು ಎಂದರೆ ಬೆರಗಾಗಬಹುದು.

ದಿವಾ ವೋಡ್ಕಾ ಕೂಡ ವಿಶ್ವದ ಅತ್ಯಂತ ದುಬಾರಿ ಮದ್ಯ ವಿಭಾಗದಲ್ಲಿದ್ದು, ಒಂದು ಫುಲ್ ಬಾಟಲ್ ದಿವಾ ವೋಡ್ಕಾ ಬೆಲೆ 7 ಕೋಟಿ 30 ಲಕ್ಷ ರೂ. ಆಗಿದ್ದು, ಒಂದು ಬಾಟಲ್ ಖರೀದಿ ಮಾಡುವ ಬೆಲೆಗೆ ಐಷಾರಾಮಿ ಜೀವನ ನಡೆಸಬಹುದು. ಹೆನ್ರಿ IV ಡುಡೋಗ್ನೆ ಕಾಗ್ನ್ಯಾಕ್ ವಿಶ್ವದ ಎರಡನೇ ಅತ್ಯಂತ ದುಬಾರಿ ವೈನ್ ಆಗಿದ್ದು, ಈ ಬ್ರಾಂಡ್ ನ ಒಂದು ಬಾಟಲಿ ಮದ್ಯದ ಬೆಲೆ ಕೇಳಿದರೆ, 56 ಲಕ್ಷ 93 ಸಾವಿರ ರೂಪಾಯಿ ಆಗಿದ್ದು, ಅದರ ಬಾಟಲ್ ಕೂಡ 24 ಕ್ಯಾರೆಟ್ ಚಿನ್ನ ಮತ್ತು ಪ್ಲಾಟಿನಂನಿಂದ ಮಾಡಲಾಗುತ್ತದೆ. ಡೆಲ್ಮೋರ್ 62 ವಿಶ್ವದ ಅತ್ಯಂತ ದುಬಾರಿ ವಿಸ್ಕಿಯೆಂದು ಹೇಳಲಾಗುತ್ತದೆ. ಶ್ರೀಮಂತರು ಈ ದುಬಾರಿ ಔಷಧ ಖರೀದಿ ಮಾಡಿ ಕುಡಿಯಬಹುದು. ಒಂದು ಬಾಟಲಿಯ ಬೆಲೆ ರೂ.1.5 ಕೋಟಿಗೂ ಹೆಚ್ಚು ಬೆಲೆ ತೆತ್ತುಕೊಂಡುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Cooking salt : ಅಡುಗೆಗೆ ಹೆಚ್ಚು ಉಪ್ಪು ಹಾಕಿದ್ರೆ ಏನಾಗುತ್ತೆ? ಇಲ್ಲಿದೆ ಹೆಲ್ತ್​ ಟಿಪ್ಸ್​

Leave A Reply

Your email address will not be published.