Indian Youth Congrress President BV Srinivas: ಸ್ಮೃತಿ ಇರಾನಿಯನ್ನು ಮಾಟಗಾತಿ, ಮೂಗಿ, ಕಿವುಡಿ ಎಂದ ಬಿವಿ ಶ್ರೀನಿವಾಸ್! BJPಯಿಂದ ಭಾರೀ ಆಕ್ರೋಶ!
BV Srinivas :ರಾಜಕೀಯ ನಾಯಕರುಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಬೇಕಾಬಿಟ್ಟಿಯಾಗಿ ನಾಲಿಗೆ ಹರಿಬಿಡುತ್ತಿದ್ದಾರೆ. ಸದ್ಯ ಈ ಪಟ್ಟಿಗೆ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ(Srinivas BV) ಕೂಡ ಸೇರಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ(Smruthi Irani)ಅವರನ್ನು ಬಾಯಿಗೆ ಬಂದಂತೆ ನಿಂದಿಸಿ ‘ಸೆಕ್ಸಿಸ್ಟ್'(Sexist)ಎಂದೆಲ್ಲ ಕಮೆಂಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗ್ತಿದೆ.
ಹೌದು, ಲೋಕಸಭೆಯಿಂದ(Parliment) ಅನರ್ಹಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ಬೆಂಬಲಿಸಿ ದೆಹಲಿಯಲ್ಲಿ ನಡೆದ ‘ಸಂಕಲ್ಪ ಸತ್ಯಾಗ್ರಹ’ದಲ್ಲಿ ಭಾರತೀಯ ಯುವ ಕಾಂಗ್ರೆಸ್(Indian Youth Congrress President) ಅಧ್ಯಕ್ಷ ಶ್ರೀನಿವಾಸ್ ಬಿವಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮಾತನಾಡುವ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ “ಸ್ಮೃತಿ ಇರಾನಿ ಮೂಕ ಮತ್ತು ಕಿವುಡಾಗಿದ್ದಾಳೆ ಮತ್ತು ಈಗ ಅದೇ ಮಾಟಗಾತಿ ಹಣದುಬ್ಬರ ಮಾಟಗಾತಿಯನ್ನು ‘ಡಾರ್ಲಿಂಗ್’ ಆಗಿ ಪರಿವರ್ತಿಸಿ ಮಲಗುವ ಕೋಣೆಯಲ್ಲಿ ಇರಿಸಿದ್ದಾರೆ’ ಎಂದು ಶ್ರೀನಿವಾಸ್ ಹೇಳುತ್ತಾರೆ. ಹೀಗೆ ಹೇಳುವ ಮೂಲಕ ‘ಸೆಕ್ಸಿಸ್ಟ್’ ಕಾಮೆಂಟ್ ಕೂಡ ಮಾಡಿದ್ದಾರೆ. ಇದಕ್ಕೆ ಬಿಜೆಪಿಯಿಂದ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗಿದೆ.
ಚಿಕ್ಕ ಕ್ಲಿಪ್ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ(Amith Malaviya) “ಈ ಅಸಭ್ಯ, ಸೆಕ್ಸಿಸ್ಟ್ ವ್ಯಕ್ತಿ ಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ಮಹಿಳಾ ಸಚಿವೆಯೊಬ್ಬರು ಅಮೇಥಿಯಿಂದ ರಾಹುಲ್ ಗಾಂಧಿಯನ್ನು ಸೋಲಿಸಿದರು ಎಂಬ ಕಾರಣಕ್ಕೆ ಇದು ಅವರ ಹತಾಶೆಯ ಲಕ್ಷಣವಾಗಿದೆ. ಕಾಂಗ್ರೆಸ್ ಇಂದು ದೇಶದಲ್ಲಿಯೇ ಅಪ್ರಸ್ತುತವಾಗುವ ಹಾದಿಯಲ್ಲಿದೆ’ ಎಂದು ಟೀಕಿಸಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ(Shehajabad Poonavala) ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಮೊದಲು ಅವರು ಒಬಿಸಿ ಸಮುದಾಯವನ್ನು ಅವಮಾನಿಸಿದರು, ನಂತರ ಅವರು ಪತ್ರಕರ್ತರು, ಸಾವರ್ಕರ್, ನ್ಯಾಯಾಲಯ, ಸಂವಿಧಾನವನ್ನು ಅವಮಾನಿಸಿದರು, ಸ್ಪೀಕರ್ ಮೇಲೆ ಪೇಪರ್ ಎಸೆದು ಈಗ ಎಲ್ಲರಿಗೂ ಅವಮಾನ ಮಾಡುತ್ತಿದ್ದಾರೆ. ದೇಶದ ಮಹಿಳೆಯರು ವಿಶೇಷವಾಗಿ ಕಠಿಣ ಪರಿಶ್ರಮದಿಂದ ತಲುಪಿದವರನ್ನೂ ಅವಮಾನ ಮಾಡುವ ಹಂತಕ್ಕೆ ತಲುಪಿದ್ದಾರೆ’ ಎಂದು ಟೀಕಿಸಿದ್ದಾರೆ.
ಅಲ್ಲದೆ “ಇದರಲ್ಲಿ ಸ್ಮೃತಿ ಇರಾನಿ ಅವರ ತಪ್ಪೇನಿದೆ. ಅವರು ಸಾಮಾನ್ಯ ಕುಟುಂಬದಿಂದ ಬಂದು, ರಾಹುಲ್ ಗಾಂಧಿಯನ್ನು ಸೋಲಿಸಿದರು ಅನ್ನೋ ಕಾರಣವೇ. ಇದೇ ಜನರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಬಗ್ಗೆಯೂ ಇದೇ ರೀತಿಯ ಮಾತುಗಳನ್ನಾಡಿದ್ದರು. ಇದು ಶ್ರೀನಿವಾಸ್ ಅವರ ಮಾತುಗಳಲ್ಲ. ಇಡೀ ಕಾಂಗ್ರೆಸ್ ನವರದ್ದೇ ಇದೇ ಮನಸ್ಥಿತಿ. ಇದು ರಾಹುಲ್ ಗಾಂಧಿಯವರ ಮಾತುಗಳು. ಪ್ರಿಯಾಂಕಾ ಗಾಂಧಿ ವಾದ್ರಾ, ಸೋನಿಯಾ ಗಾಂಧಿ ಅವರಲ್ಲಿ ನಿಮಗೆ ಈ ಮಾತಿಗೆ ಸಹಮತ ಇದೆಯೇ ಎಂದು ಕೇಳಬೇಕಾಗಿದೆ. ಇದನ್ನು ನಾನು ಕಠಿಣ ಶಬ್ದದಿಂದ ಖಂಡನೆ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಮಾಜಿ ನಾಯಕ ಅನಿಲ್ ಕೆ ಆಂಟನಿ(Anil K Antany) ಕೂಡ ಶ್ರೀನಿವಾಸ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ನಾಚಿಕೆಗೇಡಿಗಳೇ, ನಾನು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದ ನನ್ನ ಇನ್‌ಬಾಕ್ಸ್‌ಗಳು ಮತ್ತು ಕಾಮೆಂಟ್ ವಿಭಾಗಗಳು ಅವರ ಕೈಕೆಳಗಿನವರಿಂದ ಹೊಲಸು ನಿಂದನೆಗಳಿಂದ ತುಂಬಿ ಹೋಗಿತ್ತು. 2024 ಭಾರತದ ಮಹಾನ್ ಜನರಿಗೆ ಈ ನಕಾರಾತ್ಮಕ ಜನರನ್ನು ಇತಿಹಾಸದ ಕಸದ ಬುಟ್ಟಿಗೆ ಕಳುಹಿಸಲು ಉತ್ತಮ ಅವಕಾಶವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Bank interest : ಈ ದೇಶದ ಬ್ಯಾಂಕ್‌ಗಳಲ್ಲಿ ಅತ್ಯಧಿಕ ಬಡ್ಡಿದರಗಳನ್ನು ನೀಡ್ತಾರಂತೆ! ಏನಿದು ವಿಷಯ?