Fake PAN Card Alert: ಒಂದೇ ನಿಮಿಷದಲ್ಲಿಯೇ ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ಹೀಗೆ ತಿಳಿಯಿರಿ

Fake PAN Card Alert: ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಪಾನ್ಕಾರ್ಡ್ಗೆ ಆಧಾರ್ ಕಾರ್ಡ್ ಸಂಖ್ಯೆ(Aadhar – PAN Card Link) ಜೋಡಿಸುವಂತೆ ಸಾರ್ವಜನಿಕರಿಗೆ ಅನೇಕ ಬಾರಿ ಮನವಿ ಮಾಡಿದ್ದು, ಇದಕ್ಕಾಗಿ ಅವಧಿಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಇದೀಗ ಆಧಾರ್-ಪ್ಯಾನ್ ಲಿಂಕ್ ಮಾಡಲು 1,000ರೂ. ಗಳ ದಂಡ ಸಹಿತ ಪಾವತಿ ಮಾಡಿ ಲಿಂಕ್ ಮಾಡಿಕೊಳ್ಳಲು ಕೇವಲ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದ್ದು, ಹೀಗಾಗಿ, ಆದಷ್ಟು ಬೇಗನೆ ಆಧಾರ್ – ಪ್ಯಾನ್ ಲಿಂಕ್ ಮಾಡಿಸಿಕೊಳ್ಳಿ. ಇದೆಲ್ಲದಕ್ಕೂ ಮೊದಲು ನಿಮ್ಮ ಬಳಿ ಇರುವ ಪ್ಯಾನ್ ನಿಜವಾಗಿಯೂ ಅಸಲಿಯೇ ನಕಲಿಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ. ಹಾಗಿದ್ರೆ, ಪ್ಯಾನ್ ಕಾರ್ಡ್(PAN Card Alert) ಅಸಲಿಯಾ ನಕಲಿಯಾ ತಿಳಿಯುವುದು ಹೇಗೆ? ಎಂಬ ಮಾಹಿತಿ ನಿಮಗಾಗಿ.

 

ಇಂದು ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಅತ್ಯಗತ್ಯ ದಾಖಲೆಯಾಗಿದ್ದು, ಹೀಗಾಗಿ, ಪ್ಯಾನ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕೂಡ ಮುಖ್ಯವಾಗುತ್ತದೆ. ಇದರ ಜೊತೆಗೆ ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ನಕಲಿ(Fake PAN Card Alert) ಎಂದು ತಿಳಿದು ಬಂದರೆ ನಿಮ್ಮ ಹೆಚ್ಚಿನ ಕೆಲಸಗಳಿಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಆದಾಯ ತೆರಿಗೆ ವಂಚನೆ, ಬೇನಾಮಿ ಆಸ್ತಿ, ಹೊರದೇಶಗಳಿಂದ ಹರಿದುಬರುವ ಹಣದ ಮೇಲೆ ಕಟ್ಟೆಚ್ಚರ ವಹಿಸಿ ಅಕ್ರಮವಾಗಿ ಹಣಕಾಸು(Financial Transaction) ವಹಿವಾಟು ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಹಲವು ನಕಲಿ ಪ್ಯಾನ್ ಕಾರ್ಡ್ ಸಂಬಂಧಿತ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಕೇಂದ್ರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದಿದ್ದರೆ ಏಪ್ರಿಲ್ 01ರಿಂದ ಪ್ಯಾನ್ ಕಾರ್ಡ್ ನಿಷ್ಪ್ರಯೋಜಕವಾಗುವುದಷ್ಟೆ ಅಲ್ಲದೇ, ನಿಮ್ಮ ಹಣಕಾಸಿನ ವಹಿವಾಟುಗಳು ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ನಕಲಿ ಪ್ಯಾನ್ ಕಾರ್ಡ್ ಎಂದರೆ, ದಾಖಲೆ ಆದಾಯ ತೆರಿಗೆ(IncomeTax Department) ಇಲಾಖೆ ಬಳಿ ಇಲ್ಲದ ಪ್ಯಾನ್ ಕಾರ್ಡ್ ಆಗಿದ್ದು, ಆದಾಯ ತೆರಿಗೆ ಇಲಾಖೆಯು 10 ಅಂಕಿಗಳ ಗುರುತಿನ ಸಂಖ್ಯೆಯನ್ನು ಒದಗಿಸುತ್ತದೆ. ಇದುವೇ ಪ್ಯಾನ್ ಕಾರ್ಡ್ ಆಗಿದ್ದು, ಹೆಚ್ಚಿನ ಎಲ್ಲಾ ರೀತಿಯ ಬ್ಯಾಂಕಿಂಗ್( Banking Transaction) ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅವಶ್ಯಕ ದಾಖಲೆಯಾಗಿದೆ. ನಕಲಿ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ವಹಿವಾಟು ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ, ನಕಲಿ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ವಹಿವಾಟು ಮಾಡುವ ಮುನ್ನ ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ನಕಲಿಯೋ ಎಂದು ತಪ್ಪದೇ ಪರಿಶೀಲಿಸುವುದು ಉತ್ತಮ. ಇದಕ್ಕಾಗಿ ನೀವು ಹೆಚ್ಚೇನು ಯೋಚನೆ ಮಾಡಬೇಕಾಗಿಲ್ಲ. ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ನಕಲಿಯೋ ಎಂಬುದನ್ನು ಒಂದೇ ನಿಮಿಷದಲ್ಲಿ ಪರಿಶೀಲಿಸಬಹುದು.

ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ/ನಕಲಿಯೋ ಎಂಬುದನ್ನು ತಿಳಿಯಲು ಈ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.
ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ (ಪ್ಯಾನ್ ಕಾರ್ಡ್ ಇ-ಫೈಲಿಂಗ್) ಪೋರ್ಟಲ್‌ಗೆ ಹೋಗಬೇಕಾಗಿದ್ದು, ಇಲ್ಲಿ ನೇರ ಮೇಲ್ಭಾಗದಲ್ಲಿರುವ ‘ನಿಮ್ಮ ಪ್ಯಾನ್ ವಿವರಗಳನ್ನು ಪರಿಶೀಲಿಸಿ’ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗಿದೆ. ಆ ಬಳಿಕ, ಬಳಕೆದಾರರು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ನಿಮಗೆ ಪ್ಯಾನ್ ಸಂಖ್ಯೆ, ಪ್ಯಾನ್ ಕಾರ್ಡ್ ಹೊಂದಿರುವವರ ಪೂರ್ಣ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ದೊರೆಯುತ್ತದೆ. ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ, ಭರ್ತಿ ಮಾಡಿದ ಮಾಹಿತಿಯು ನಿಮ್ಮ ಪ್ಯಾನ್ ಕಾರ್ಡ್‌ಗೆ ಹೊಂದಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಸಂದೇಶವು ಪೋರ್ಟಲ್‌ನಲ್ಲಿ(Portal) ಕಂಡುಬರುತ್ತದೆ. ಈ ವಿಧಾನ ಅನುಸರಿಸಿ ನೀವು ಪ್ಯಾನ್ ಕಾರ್ಡ್‌ ಅಸಲಿಯಾ ಅಥವಾ ನಕಲಿಯಾ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಇದನ್ನೂ ಓದಿ: PAN Card-Aadhaar link :ಪಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಗಡುವು ವಿಸ್ತರಣೆಯಾಗಿಲ್ಲ

Leave A Reply

Your email address will not be published.