Vehicle color: ನೀವು ಖರೀದಿಸುವ ವಾಹನದ ಬಣ್ಣ ಹೇಳುತ್ತೇ ನೀವು ಎಷ್ಟು ಸ್ಮಾರ್ಟ್ ಅಂತ!! ಅಧ್ಯಯನದಿಂದ ಮಾಹಿತಿ ಬಹಿರಂಗ
Vehicle color: ಎಲ್ಲರೂ ವಾಹನ (vehicle) ಖರೀದಿಸಬೇಕಾದರೆ ಅದರ ಬ್ರ್ಯಾಂಡ್ (brand), ಫೀಚರ್ (feature), ಬಣ್ಣ (color) ಸೇರಿದಂತೆ ಹಲವು ವೈಶಿಷ್ಟ್ಯತೆ ನೋಡಿ ಖರೀದಿಸುತ್ತಾರೆ. ಇನ್ನು ಕೆಲವರು ಉತ್ತಮವಲ್ಲದ ಬಣ್ಣವನ್ನು ಆಯ್ಕೆ ಮಾಡುತ್ತಾರೆ. ಆದರೆ, ನಿಮಗೆ ಗೊತ್ತಾ? ನೀವು ಆಯ್ಕೆ ಮಾಡುವ ವಾಹನದ ಬಣ್ಣವು (vehicle color) ಕೂಡ ನೀವು ಎಷ್ಟು ಬುದ್ಧಿವಂತರು ಎಂಬುದನ್ನು ಹೇಳುತ್ತದೆ. ಹೌದು, ಈ ಬಗ್ಗೆ ಇತ್ತೀಚೆಗೆ ಕಾರ್ ಬಣ್ಣದ IQ (ಬುದ್ಧಿಮತ್ತೆಯ ಪ್ರಮಾಣ) ಅಧ್ಯಯನ ನಡೆಸಿದ್ದು, ಇದರಲ್ಲಿ ಈ ಬಗ್ಗೆ ಮಾಹಿತಿ ಬಯಲಾಗಿದೆ.
ಕಾರ್ ಬಣ್ಣದ IQ ಕುರಿತು ಇಂಗ್ಲೆಂಡ್‌ನ ಸ್ಕ್ರ್ಯಾಪ್ ಹೋಲಿಕೆಯು (UK’s Scrap Comparison) ಈ ಸಮೀಕ್ಷೆಯನ್ನು ನಡೆಸಿದ್ದು, ಅಧ್ಯಯನದಲ್ಲಿ, ಕಾರು ಖರೀದಿಸುವಾಗ ನೀವು ಆಯ್ಕೆ ಮಾಡುವ ಬಣ್ಣವು ನೀವು ಎಷ್ಟು ಸ್ಮಾರ್ಟ್ (smart) ಎಂಬುದನ್ನು ತಿಳಿಸುತ್ತದೆ ಎಂಬ ವಿಚಾರವನ್ನು ಬಹಿರಂಗಪಡಿಸಿದೆ.
ವರದಿಯಲ್ಲಿ, ಅತಿ ಹೆಚ್ಚು ಜನರು ತಮ್ಮ ಸ್ವಂತ ನಿರ್ಧಾರದಿಂದ ಒಂದೇ ಬಣ್ಣವನ್ನು ಆಯ್ಕೆ ಮಾಡಿದವರಿಗೆ IQ ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ. ವಾಹನದ ಬಣ್ಣದ ಆಯ್ಕೆಯು ಅವರ ಬುದ್ಧಿಮತ್ತೆಯ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ಅನೇಕ ಜನರು ವಾಹನ ಖರೀದಿಸುವಾಗ ಕುಟುಂಬ ಅಥವಾ ಸ್ನೇಹಿತರಿಂದ ಬಣ್ಣದ ಬಗ್ಗೆ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅವನ ಸ್ವಂತ ನಿರ್ಧಾರವು ಅವನ IQ ಸಾಮರ್ಥ್ಯದ ಬಗ್ಗೆ ಹೇಳುತ್ತದೆ.
ಹಾಗಾಗಿ ವಾಹನ ಖರೀದಿಸುವಾತನೇ ಆಯ್ಕೆ ಮಾಡಿದರೆ ಆತನ IQ ಸಾಮರ್ಥ್ಯದ ಬಗ್ಗೆ ತಿಳಿಯುತ್ತದೆ.
ಅಧ್ಯಯನದಲ್ಲಿ, ವಿವಿಧ ಬಣ್ಣದ ವಾಹನಗಳ ಮಾಲೀಕರ ಇಂಟೆಲಿಜೆನ್ಸ್ ಕ್ವಾಟಿಯಂಟ್ (ಐಕ್ಯೂ) ಪರೀಕ್ಷೆಯನ್ನು ಕೂಡ ಮಾಡಲಾಯಿತು. ಇನ್ನು ಬಿಳಿ ಬಣ್ಣದ ಕಾರನ್ನು ಆಯ್ಕೆ ಮಾಡಿದ ಜನರ ಸರಾಸರಿ ಐಕ್ಯೂ ಮಟ್ಟವು 95.71 ಆಗಿತ್ತು, ಸ್ವಂತ ನಿರ್ಧಾರದ ಮೇಲೆ ಬಿಳಿ ಬಣ್ಣವನ್ನು ಆಯ್ಕೆ ಮಾಡಿಕೊಂಡವರ ಐಕ್ಯೂ ಮಟ್ಟವು ಅಗ್ರಸ್ಥಾನದಲ್ಲಿದೆ.
ಹಾಗೆಯೇ ಬೂದು ಬಣ್ಣದ ವಾಹನವನ್ನು ಖರೀದಿಸುವವರ ಐಕ್ಯೂ ಸ್ಕೋರ್ 94.97 ಆಗಿದೆ. ಕೆಂಪು ಬಣ್ಣದ ವಾಹನ ಖರೀದಿಸಿದವರ ಸ್ಕೋರ್ 94.88, ನೀಲಿ ಬಣ್ಣದ ವಾಹನ ಖರೀದಿದಾರರ ಸ್ಕೋರ್ 93.60 ಆಗಿದ್ದು, ಕಪ್ಪು ಬಣ್ಣದ ವಾಹನ ಖರೀದಿದಾರರು 92.83 ಸ್ಕೋರ್ ಮಾಡಿದ್ದಾರೆ. ಸಿಲ್ವರ್ ಬಣ್ಣದ ವಾಹನ ಖರೀದಿಸಿದವರ ಸ್ಕೋರ್ 92.67, ಹಸಿರು ಬಣ್ಣದ ವಾಹನಗಳನ್ನು ಖರೀದಿಸಿದ ವಾಹನ ಮಾಲೀಕರಿಗೆ ಕನಿಷ್ಠ ಐಕ್ಯೂ ಸ್ಕೋರ್ 88.43 ರಷ್ಟು ಕಂಡುಬಂದಿದೆ.