Alcohol Facts & Truths: ವ್ಯಕ್ತಿಯೋರ್ವ ಮದ್ಯ ಸೇವನೆ ಮಾಡಿದ ಬಳಿಕ ಯಾಕೆ ಇಂಗ್ಲೀಷ್‌ ಮಾತನಾಡ್ತಾರೆ ? ಉತ್ತರ ಇಲ್ಲಿದೆ !

Alcohol Facts & Truth: ಎಣ್ಣೆಯ ಮಹಿಮೆ ಅರಿಯದವರು ಇರಲು ಸಾಧ್ಯವೇ ಇಲ್ಲ. ಸ್ವತಃ ಕುಡಿಯದೆ ಇದ್ದವರಿಗೂ ಕೂಡಾ ಎಣ್ಣೆಯ ಮತ್ತು, ಅದು ಕುಡಿದವರಲ್ಲಿ ತೋರಿಸುವ ಗಮ್ಮತ್ತು- ಕರಾಮತ್ತಿನ ಬಗ್ಗೆ ಅರಿವಿರುತ್ತದೆ. ಯಾಕೆಂದರೆ ಕುಡಿದ ವ್ಯಕ್ತಿಯ ಅಭಿವ್ಯಕ್ತಿಯೇ ಬದಲಾಗಿರುತ್ತದೆ.( Alcohol Facts & Truth) ಆತ ಮಾಮೂಲಿನ ಹಾಗೆ ಇರೋದಿಲ್ಲ. ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ.

 

ಕುಡಿದ ಮತ್ತಿನಲ್ಲಿ ಮದ್ಯ ಪ್ರಿಯರು ಮಾಡುವ ಜಗಳ, ತಂದಿಡುವ ರಾದ್ಧಾಂತ ಹೊಸದಲ್ಲ. ಬೇಕಾದ್ದು ಬೇಡದ್ದು ಎರಡನ್ನೂ ಉತ್ಸಾಹದಿಂದ ಮಾಡುವ ಈ ಕುಡುಕು ಜನ ಕೆಲವೊಮ್ಮೆ ಕುಡಿದ ಅಮಲಿನಲ್ಲಿ ಅಪರಾಧ ಎಸಗಿ ಅಮಲು ಇಳಿದ ಮೇಲೆ ತಾನು ಮಾಡಿದ ತಪ್ಪಿಗೆ ಕೊರಗುವವರನ್ನು ನೀವು ಕೂಡ ನೋಡಿರಬಹುದು. ಮತ್ತೆ ಕೆಲವರು ಕುಡಿದ ನಶೆಯಲ್ಲಿ ಮಾಡುವ ಅವಾಂತರ ನೋಡಿ ನಗು ಬಂದರೂ ಅಚ್ಚರಿಯಿಲ್ಲ.

ಕುಡಿದ ಮತ್ತಿನಲ್ಲಿ ಅವರ ಬಾಯಲ್ಲಿ ಮುಚ್ಚಿಟ್ಟ ಅದೆಷ್ಟೋ ಸತ್ಯಗಳು ಹೊರಬರುತ್ತವೆ. ಎಷ್ಟೋ ಅಪರಾಧದ ಕೇಸುಗಳು ಸೀದಾ ಬಾರ್ ಆಂಡ್ ರೆಸ್ಟೋರೆಂಟಿನಲ್ಲಿ ಸಾಲ್ವ್ ಆಗಿವೆ. ಒಂದಷ್ಟು ಕುಡಿದು, ಕಂಟ್ರೋಲ್ ಇಳಿದು ಹೆಮ್ಮೆಯಿಂದ ಕೊಲೆ ಮುಂತಾದ ಅಪರಾಧದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡವನು ಮರುದಿನ ಪೊಲೀಸ್ ಕಸ್ಟಡಿಯಲ್ಲಿರುತ್ತಾನೆ.

ಕಾರಣ ತರೆದುಕೊಳ್ಳುವ ಸ್ವಭಾವ ಮತ್ತು ಕುಡಿದ ವ್ಯಕ್ತಿ ಮಾತನಾಡುವ ಭಾಷೆಯಲ್ಲಿ ತುಂಬಾ ಬದಲಾವಣೆ ಆಗುತ್ತದೆ. ವಾಸ್ತವವಾಗಿ, ನಶೆಯ ಸ್ಥಿತಿಯಲ್ಲಿ ಜನರು ಬರುವ ಇಂಗ್ಲಿಷ್ ಮಾತಾಡೋದನ್ನು ನಾವು ಕೇಳಿರಬಹುದು.( Alcohol Facts & Truths) ಇದು ಯಾಕೆ ಹೀಗೆ ? ಭಟ್ಟಿ ಒಳಗೆ ಸೇರಿದ ಹಾಗೆ ಯಾಕೆ ಭಾವ, ಭಂಗಿ ಮತ್ತು ಭಾಷೆ ಬದಲಾಗುತ್ತದೆ ಎನ್ನುವ ಬಗ್ಗೆ ಈಗ ಅಧ್ಯಯನವೊಂದು ಬೆಳಕು ಚೆಲ್ಲಿದೆ.

ಈ ಅಧ್ಯಯನದ ಪ್ರಕಾರ, ವ್ಯಕ್ತಿಗೆ ಭಾಷೆಯ ಬಗ್ಗೆ ಸಾಮಾನ್ಯವಾಗಿ ಇರುವ ಭಯವೇ ಇರುವುದಿಲ್ಲವಂತೆ. ಅಷ್ಟೇ ಅಲ್ಲ, ತಮ್ಮ ಬಗ್ಗೆ ಜನರು ಹೇಗೆ ಆಲೋಚನೆ ಮಾಡುತ್ತಾರೆ ಎಂಬ ವಿಚಾರದ ಕುರಿತು ಚಿಂತಿಸುವುದು ಕೂಡಾ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ವಾಸ್ತವ ಪ್ರಪಂಚದಲ್ಲಿ ಇರುವುದಿಲ್ಲ ಎನ್ನುವುದನ್ನು ಕೂಡ ಮರೆಯಬಾರದು.

ಹೀಗಾಗಿಯೇ ಕುಡುಕರು ಮನಸ್ಸಿಗೆ ತೋಚಿದಂತೆ ಸಲೀಸಾಗಿ ವಿವಿಧ ಭಾಷೆಗಳಲ್ಲಿ ಮಾತನಾಡುತ್ತಾರೆ. ಈ ಒಂದು ಸಂಶೋಧನೆಯ ಅನುಸಾರ ಇನ್ನೂ ಅನೇಕ ರೋಚಕ ವಿಚಾರಗಳು ಹೊರಬಿದ್ದಿವೆ. ಕುಡಿದಾಗ ಮಾತ್ರ ಸತ್ಯ ಹೇಳುವ ಕುಡುಕರ ಬಗೆಗಿನ ಹಲವು ಸತ್ಯಗಳನ್ನು ವಿಜ್ಞಾನಿಗಳ ತಂಡ ಕುಡಿಯದೇನೇ ಪತ್ತೆ ಮಾಡಿದೆ.

ಸ್ವಲ್ಪ ಆಲ್ಕೋಹಾಲ್ ಸೇವನೆ ಕುಡುಕರ ಉಚ್ಚಾರಣೆಯನ್ನು ಸುಧಾರಿಸುವಲ್ಲಿ ನೆರವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಇದಲ್ಲದೆ, ಮಧ್ಯ ಕುಡಿದವರ ಆತಂಕ ಭಯ ಕೂಡ ಕಡಿಮೆಯಾಗುತ್ತದೆ ಎನ್ನಲಾಗಿದೆ. ಹೆಚ್ಚು ಮದ್ಯ ಸೇವಿಸಿದ ಸಂದರ್ಭದಲ್ಲಿ ವ್ಯಕ್ತಿ ಸರಿಯಾಗಿ ಮಾತನಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ, ಜಾಸ್ತಿ ಕುಡಿದರೆ ಮತ್ತೆ ಭಾಷೆ ಹಳಿ ತಪ್ಪುತ್ತೆ ಎನ್ನುತ್ತಿದೆ ಸಂಶೋಧನೆ. ಆದರೆ, ಈ ಕುರಿತು ವಿಜ್ಞಾನಿಗಳು ಇನ್ನಷ್ಟು ಸಂಶೋಧನೆ ನಡೆಸುತ್ತಿದ್ದು, ಅಂತಿಮ ಫಲಿತಾಂಶ ಬಳಿಕವಷ್ಟೇ ಸ್ಪಷ್ಟ ನಿರ್ಣಯ ತಿಳಿಸಲು ಸಾಧ್ಯವಂತೆ.

ಲಿವರ್‌ಪೂಲ್ ವಿಶ್ವವಿದ್ಯಾಲಯ ಮತ್ತು ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಎರಡನೇ ಭಾಷೆ ಮತ್ತು ಮದ್ಯದ ಸಂಪರ್ಕದ ಬಗ್ಗೆ ಈ ಸಂಶೋಧನೆಯಲ್ಲಿ ಎರಡು ಭಾಷೆಗಳ ಜ್ಞಾನ ಹೊಂದಿರುವ 50 ಜನರ ಮೇಲೆ ಪ್ರಯೋಗ ನಡೆಸಲಾಗಿದೆಯಂತೆ. ಅಲ್ಲಿ ಸಂಶೋಧನೆಯ ನಿಮಿತ್ತ 50 ಜನರಿಗೆ ಮದ್ಯವನ್ನು ಕುಡಿಸಲಾಗಿದ್ದು, ಮದ್ಯಪಾನ ಮಾಡಿದ ವ್ಯಕ್ತಿ ಉತ್ತಮ ರೀತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಮಾತನಾಡುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಆತ ಮದ್ಯ ಸೇವನೆಯ ಮೊದಲು ಆ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಸ್ವಲ್ಪ ದ್ರವ ಒಳಕ್ಕೆ ಇಳಿದ ನಂತರ ಭಾಷೆ ಸರಕ್ಕನೆ ನಿರರ್ಗಳವಾಗಿ ಹೊರಕ್ಕೆ ಬಂದಿದೆ ಎಂಬುದು ಕೂಡ ಬಯಲಾಗಿದೆ. ಆಲ್ಕೋಹಾಲ್ ಎರಡನೆಯ ಭಾಷೆಯನ್ನು (ನಮ್ಮಲ್ಲಿ ಇಂಗ್ಲಿಷ್ ಅನ್ನು) ಮಾತಾಡಿಸಲು ಪ್ರೇರೇಪಿಸುತ್ತದೆ. ಅದಕ್ಕೇ ಕುಡಿದ ವ್ಯಕ್ತಿ ಇಂಗ್ಲಿಷಿಗೆ ಶಿಫ್ಟ್ ಆಗೋದು, ಕುಡಿಯದವರು ಆತನ ಇಂಗ್ಲಿಷ್ ಪ್ರೌಢಿಮೆಯ ಬಗ್ಗೆ ಮಜಾ ತಗೊಳ್ಳೋದು !!!

Leave A Reply

Your email address will not be published.