Ramya having Kids: ಮದುವೆ ಆಗದಿದ್ದರೂ ನಟಿ ರಮ್ಯಾಗೆ ಇದ್ದಾರೆ 3 ಮಕ್ಕಳು, ಶಾಕಿಂಗ್ ಅನ್ನಿಸೋ ಸತ್ಯ ಬಿಚ್ಚಿಟ್ಟ ಮೋಹಕ ತಾರೆ !

Actress Ramya  : ಮೊನ್ನೆ ಪ್ರಸಾರ ಆದ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದ ಈ ಬಾರಿಯ ಸೀಸನ್ ನಲ್ಲಿ ನಟಿ ರಮ್ಯಾ ದಿವ್ಯ ಸ್ಪಂದನ (Actress Ramya) ಅವರು ಮೊದಲ ಅತಿಥಿಯಾಗಿ ಕಾಣಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮಕ್ಕೆ ಶುಭಾರಂಭವನ್ನು ಕೊಟ್ಟಿದ್ದಾರೆ. ನಟ ರಮೇಶ್ ಅರವಿಂದ್ (Ramesh Aravind) ನಡೆಸಿಕೊಡುವ ಈ ಕಾರ್ಯಕ್ರಮವನ್ನು ತುಂಬಾ ಜನ ಇಷ್ಟಪಡುತ್ತಾರೆ. ಮೊನ್ನೆಯ, ನಟಿ ರಮ್ಯಾ ಗೆಸ್ಟ್ ಆಗಿ  ಭಾಗವಹಿಸಿದ ವೀಕೆಂಡ್ ವಿತ್ ರಮೇಶ್ ನಲ್ಲಿ ರಮ್ಯಾಳನ್ನು ಅನೇಕರು ಇಷ್ಟಪಟ್ಟರೆ, ಇನ್ನೂ ಹಲವರು ರಮ್ಯಾ ಅವರನ್ನು ದೂರಿದ್ದರು. ಕಾರಣ ರಮ್ಯಾ ಅಲ್ಲಿ ಉದುರಿಸಿದ ಅತಿಯಾದ ಇಂಗ್ಲಿಷ್. ಆಕೆಯ ಇಂಗ್ಲೀಷ್ ನೋಡಲಾಗದೆ, ಸ್ಸಾರಿ, ಕೇಳಲಾಗದೆ, ಕೇಳಿದರೂ ಚೂರೂ ಅರ್ಥವಾಗದ ಅಜ್ಜಿಯರೆಲ್ಲ ಟಿವಿ ಬಂದ್ ಮಾಡಿ ರಿಮೋಟ್ ಅನ್ನು ಡೈನಿಂಗ್ ಟೇಬಲ್ ಮೇಲೆ ಕುಟುಕಿ ನಂತ್ರ ಅಜ್ಜನಿಂದ ಬೈಸಿಕೊಂಡ ಸುದ್ದಿ ಈಗ ಹಳೆಯದಾಗುತ್ತಿದೆ. ಅಷ್ಟರಲ್ಲಿ ಹೊಸ ಸುದ್ದಿ ಬಂದಿದೆ. ರಮ್ಯಾಗೆ ಇವೆಯಂತೆ ಮೂರು ಮಕ್ಕಳು ! ಸುದ್ದಿ ಕೇಳಿದ ಜನ ಶಾಕ್ ಬಿದ್ದು ಹೋಗಿದ್ದಾರೆ.

 

ಇದು ನಾವು ಪತ್ರಿಕೆಗಳು ಇನ್ನೊಂದಿಷ್ಟು ವೀವ್ಸ್ ಬರಲಿ ಎಂದು ಮಾಡುವ ಗಾಸಿಪ್ ಅಂದುಕೊಳ್ಳಬೇಡಿ. ನಿಜವಾಗಿಯೂ ರಮ್ಯಾ ಅವರೇ ತಮ್ಮ ಮೂರು ಜನ ಮಕ್ಕಳ ಬಗ್ಗೆ ಖುಲ್ಲಂ ಖುಲ್ಲವಾಗಿ ಮಾತಾಡಿದ್ದಾರೆ. ತಮ್ಮ ಮಕ್ಕಳ ಕುರಿತಂತೆ ಆಕೆ ವೀಕೆಂಡ್ ವಿತ್ ರಮೇಶ್ ಸೀಸನ್ ಇನ ಮೊದಲ ಎಪಿಸೋಡಿನಲ್ಲಿ ಗುಟ್ಟು ಬಿಟ್ಟುಕೊಟ್ಟಿದ್ದಾಳೆ. ಅರೆ ಇದೇನಿದು ನಟಿ ರಮ್ಯಾ ಅವರು ಇನ್ನೂ ಕೂಡ ಮದುವೆ ಆಗಿಲ್ಲ ಆದೆಲ್ಲಿಂದ ಮಕ್ಕಳು ಬಂದ್ರು ಎನ್ನುವುದಾಗಿ ನೀವು ತಮಾಷೆಯ ಪ್ರಶ್ನೆಯನ್ನು ಕೂಡ ಕೇಳಬಹುದು. ಈ ಕಾಲದಲ್ಲಿ ಮಕ್ಕಳಾಗಲು ಮದುವೆಯೇ ಆಗಬೇಕಿಲ್ಲ ಅಂತ ನೀವು ಕೊಂಕು ಮಾತಾಡಲೂಬಹುದು. ಒಂದಂತೂ ನಿಜ, ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ರಿಗೆ ಮಕ್ಕಳಿವೆ. ಹೌದು, ಅದು ಕೂಡಾ ಆಕೆಗೆ ಮದುವೆ ಆಗದೆ ಇದ್ದರೂ, ಮಕ್ಕಳು ಮಾತ್ರ ಇದ್ದಾರೆ. ಇದನ್ನು ಸ್ವತ: ನಟಿ ರಮ್ಯಾ ಅವರೇ ಹೇಳಿಕೊಂಡಿರುವುದು. ಆಕೆಗೆ ತನ್ನ ಬಗ್ಗೆ ಹೇಳಿಕೊಂಡಾಗ ನಾವು ನಂಬಲೇಬೇಕು ಹಾಗಾಗಿ ಖಚಿತವಾಗಿ ಆಕೆಗೆ ಮಕ್ಕಳಿವೆ.

ರಮ್ಯಾ ಅವರು ತನ್ನ ಮಕ್ಕಳೆಂಬುದಾಗಿ ಹೇಳಿರೋದು ಅವರು ಸಾಕುತ್ತಿರುವಂತಹ ನಾಯಿಗಳ ಬಗ್ಗೆ. ರಮ್ಯಾ ಅವರು ಮಾತಾಡುವಾಗ ಒಂದಿಷ್ಟು ಒರಟರ ಹಾಗೆ ಕಂಡರೂ ಆಕೆಯಲ್ಲೂ ಪ್ರಾಣಿಯನ್ನು ಪ್ರೀತಿಸುವ ವಿಶೇಷ ಹೃದಯವಿದೆ. ಆಕೆ  ಶ್ವಾನ ಪ್ರಿಯೆ. ಈ ಹಿಂದೆ, 2022 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ರಾಜಕಾರಣಿ ಕುಟುಂಬದ ಉದ್ಯಮಿಯೊಬ್ಬರ ಮಗನು ರಸ್ತೆಯಲ್ಲಿ ಮಲಗಿದ್ದ ನಾಯಿಯ ಮೇಲೆ ಐಶಾರಾಮಿ ಕಾರು ಹರಿಸಿ ನಾಯಿಯ ಸಾವಿಗೆ ಕಾರಣವಾಗಿದ್ದ. ಜಯನಗರದಲ್ಲಿ ನಡೆದ ಈ ಘಟನೆಯಿಂದ ಲಾರಾ ಎಂಬ ಶ್ವಾನವು ಅಸು ನೀಗಿತ್ತು. ಆಗ ಆ ನಾಯಿಯ ಪೋಷಕರ ಜೊತೆ ನಟಿ ರಮ್ಯಾ ಸೇರಿಕೊಂಡು ಆ ನಾಯಿಯ ಉತ್ತರ ಕ್ರಿಯೆ ನಡೆಸಿದ್ದರು. ಅಂದಿನಿಂದ ಆಕೆಗೆ ನಾಯಿಗಳ ಮೇಲೆ ಒಂದು ವಿಪರೀತವಾದ ಪ್ರೀತಿ ಇದೆ ಎನ್ನುವುದು ಜಗತ್ತಿಗೆ ತಿಳಿದುಬಂದಿತ್ತು.

ಮೊದಲನೆಯದಾಗಿ ರಮ್ಯಾ ಅವರ ನೆಚ್ಚಿನ ಚಾಂಪ್ ಎನ್ನುವ ಹದಿನಾರು ವರ್ಷದ ನಾಯಿ ರಮ್ಯಾ ಅವರ ಮೊದಲ ಮಗುವಾಗಿದೆ. ಈ ನಾಯಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಕೂಡ ಈ ನಾಯಿ ಬಳಸುತ್ತಿದೆ ಎಂಬುದಾಗಿ ಕೂಡ ಆಕೆ ಮೊನ್ನೆ  ಹೇಳಿಕೊಂಡಿದ್ದಾರೆ.

ಅಲ್ಲದೆ ಹಿಂದೆ ಆಕೆಯ ಜತೆ ಗೋವಾದಲ್ಲಿ ಇದ್ದಾಗ ವಾಹನಕ್ಕೆ ಸಿಲುಕಿ ನಾಯಿಯೊಂದು ನರಳುತ್ತ ಇತ್ತು. ಆಗ ನಟಿ ರಮ್ಯಾ ಅವರು ಆ ನಾಯಿಯನ್ನು ಬಚಾವ್ ಮಾಡಿದ್ದರು. ಈ ರಾಣಿ ಎನ್ನುವ ನಾಯಿಯನ್ನು ಕೂಡ ರಮ್ಯಾ ಅವರು ಈಗ ಸಾಕುತ್ತಿದ್ದಾರೆ. ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರು ಬದುಕಿದ್ದಾಗ ರಮ್ಯಾಗೆ ನಾಯಿಯೊಂದನ್ನು ಗಿಫ್ಟ್ ನೀಡಿದ್ದರು. ಆ ಶ್ವಾನಕ್ಕೆ ಅಂಬಿ ವಿಶೇಷವಾದ ಹೆಸರಿಟ್ಟಿದ್ದರು.

ರೆಬೆಲ್ ಅಂಬರೀಶ್ (Rebel Ambarish) ಅವರು ಪಾನಪ್ರಿಯರು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅವರ ಇಷ್ಟದ ಪಾನೀಯವಾದ ‘ಬ್ರಾಂಡಿ ‘ ಯ ಹೆಸರನ್ನೇ ಆ ನಾಯಿಗೆ ಇಡಲಾಗಿತ್ತು. ಬ್ರಾಂಡಿ ಥರಾನೇ ಸದಾ ಸ್ವಲ್ಪ ಗರಂ ಆಗಿರುವ ನಾಯಿ ಕೂಡ ರಮ್ಯಾ ಅವರ ನೆಚ್ಚಿನ ನಾಯಿಯಾಗಿತ್ತು. ಆದರೆ. ಈಗ ಅದು ಈಗ ಈ ಲೋಕದಲ್ಲಿ ಇಲ್ಲ, ತೀರಿಕೊಂಡಿದೆ ಎಂದು ಆಕೆ ದುಃಖದಿಂದಲೇ ಹೇಳಿಕೊಂಡಿದ್ದಾರೆ. ಮಕ್ಕಳ ಪ್ರೀತಿಯನ್ನು ನಾಯಿಯಲ್ಲಿಯೂ ಕಾಣುವ, ಅಮ್ಮನ ಪ್ರೀತಿಯನ್ನು ತನ್ನ ನಾಯಿಗೂ ಹಂಚುವ ಆಕೆಗೆ ಈ ಶ್ವಾನಗಳು. ನಿಜಕ್ಕೂ ಮಕ್ಕಳೇ ಸರಿ. ಅದಕ್ಕೇ ಹೇಳಿದ್ದು : ರಮ್ಯಾಗೆ ಮದುವೆ ಆಗದೆ ಇದ್ದರೂ ಮಕ್ಕಳಿದ್ದಾರೆ ಅಂತ.

Leave A Reply

Your email address will not be published.