Driving test : ಭರ್ಜರಿ 960 ಬಾರಿ ಡ್ರೈವಿಂಗ್ ಟೆಸ್ಟ್ ಗೆ ಒಳಗಾದ ಮಹಿಳೆ; ಈಕೆ ಕಥೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರ!
Driving test : ವಾಹನ ಚಲಾಯಿಸಲು ನಮಗೆ ತರಬೇತಿ ಬೇಕೇ ಬೇಕಾಗುತ್ತದೆ. ತರಬೇತಿ ಪಡೆದ ನಂತರ ಪರವಾನಿಗೆ ಪಡೆಯಲು ಸುಲಭ ಆಗುತ್ತದೆ . ಆದರೆ ಕೆಲವರ ಪಾಲಿಗೆ ಪರವಾನಿಗೆ ಪಡೆಯುವಷ್ಟರಲ್ಲಿ ಸಾಕೋ ಸಾಕಾಗುತ್ತದೆ.
ಯಾಕೆಂದರೆ ಆರ್ಟಿಒ ಕಚೇರಿಗೆ (RTO office ) ಹೋಗಿ, ಡ್ರೈವಿಂಗ್ ಟೆಸ್ಟ್ನಲ್ಲಿ (driving test ) ಪಾಸಾಗಲೇಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬೈಕ್/ಕಾರ್ ಅಥವಾ ಯಾವುದೇ ವಾಹನವನ್ನು ಡ್ರೈವ್ ಮಾಡಿ ತೋರಿಸಬೇಕು. ಲಿಖಿತ ಪರೀಕ್ಷೆಯನ್ನೂ ಬರೆಯಬೇಕು. ಇದರಲ್ಲೇನಾದರೂ ಎಡವಟ್ಟು ಮಾಡಿದರೆ ಅಥವಾ ನಮ್ಮ ಡ್ರೈವಿಂಗ್ ಪರಿಪೂರ್ಣವಾಗಿಲ್ಲ ಎಂದು ಆರ್ಟಿಒ ಅಧಿಕಾರಿಗಳಿಗೆ ಅನ್ನಿಸಿದರೆ ನಮಗೆ ಲೈಸೆನ್ಸ್ ಸಿಗೋದಿಲ್ಲ. ಮತ್ತೆ ಬನ್ನಿ ಎನ್ನುತ್ತಾರೆ. ಹೀಗೆ ಹತ್ತು ಹಲವು ಬಾರಿ ಡ್ರೈವಿಂಗ್ ಟೆಸ್ಟ್ನಲ್ಲಿ ಸೋತು ನಂತರ ಗೆದ್ದಿರಬಹುದು.
ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 960 ಪ್ರಯತ್ನಗಳ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರಂತೆ. ಹೌದು, ದಕ್ಷಿಣ ಕೊರಿಯಾದ ಈ ಮಹಿಳೆಯ ಹೆಸರು ಚಾ ಸಾ ಸೂನ್. 2005ರಲ್ಲಿ ಈಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಈ ಮಹಿಳೆ ಡ್ರೈವಿಂಗ್ ಟೆಸ್ಟ್ನಲ್ಲಿ ಅದೆಷ್ಟು ಸಲ ವಿಫಲಗೊಂಡರೂ, ಹಠ ಬಿಡದೆ ಕೊನೆಗೂ ಲೈಸೆನ್ಸ್ ಪಡೆದ ಅವರ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News)ಆಗುತ್ತಿದೆ.
2005ರಲ್ಲಿ ಚಾ ಸಾ ಸೂನ್ ಅವರು ಮೊಟ್ಟಮೊದಲು ಕಾರು ಲೈಸೆನ್ಸ್ಗಾಗಿ ಡ್ರೈವಿಂಗ್ ಟೆಸ್ಟ್ ಕೊಟ್ಟಿದ್ದರು. ಆದರೆ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಹೀಗೆ ದಿನಬಿಟ್ಟು ದಿನ ಚಾಲನಾ ಪರೀಕ್ಷೆಗೆ ಹಾಜರಾದರು. ವಾರದಲ್ಲಿ ಐದು ದಿನ ಇದನ್ನೇ ಮಾಡಿದ್ದರು. ಬರುಬರುತ್ತ ವಾರದಲ್ಲಿ ಎರಡು ದಿನ ಟೆಸ್ಟ್ಗೆ ಹಾಜರಾಗಲು ಶುರು ಮಾಡಿದರು.
ಸುಮಾರು ಮೂರು ವರ್ಷ ಹೀಗೇ ಮಾಡಿದರು. ಅವರು ಚಾಲನಾ ಟೆಸ್ಟ್ ಮತ್ತು ಲಿಖಿತ ಪರೀಕ್ಷೆ ಎರಡರಲ್ಲೂ ವಿಫಲರಾಗುತ್ತಿದ್ದರು. ಅಥವಾ ಒಂದರಲ್ಲಿ ಪಾಸ್ ಆದರೆ ಇನ್ನೊಂದರಲ್ಲಿ ಅನುತ್ತೀರ್ಣರಾಗುತ್ತಿದ್ದರು. ಕೊನೆಗೂ 2010ರಲ್ಲಿ ಅವರು ಡ್ರೈವಿಂಗ್ ಟೆಸ್ಟ್ನಲ್ಲಿ ಪಾಸ್ ಆದರು.
ವಿಶೇಷವೆಂದರೆ ಈ 960 ಟೆಸ್ಟ್ನಲ್ಲಿ ಅವರು ಲಿಖಿತ ಪರೀಕ್ಷೆ ಬರೆದಿದ್ದು 860 ಬಾರಿ ಎನ್ನಲಾಗಿದೆ. ಇಷ್ಟೆಲ್ಲ ಆಗಿ ಚಾ ಸಾ ಸೂನ್ ಅವರು ಚಾಲನಾ ಪರವಾನಗಿ ಪಡೆದಾಗ ಅವರ ವಯಸ್ಸು 69 ಆಗಿತ್ತು.
ಇನ್ನು 2010ರಲ್ಲಿ ಚಾ ಸಾ ಸೂನ್ ಲೈಸೆನ್ಸ್ ಪಡೆದಾಗ, ಆಕೆಯ ಚಾಲನಾ ಮಾರ್ಗದರ್ಶಕ ಕೂಡ ಪ್ರತಿಕ್ರಿಯೆ ನೀಡಿದ್ದರು. ಚಾ ಸಾ ಸೂನ್ ಪರವಾನಗಿ ಪಡೆಯುತ್ತಿದ್ದಂತೆ ನಮಗೆಲ್ಲ ಸಿಕ್ಕಾಪಟೆ ಖುಷಿಯಾಗಿತ್ತು. ಓಡಿಹೋಗಿ ಅವರನ್ನು ತಬ್ಬಿಕೊಂಡೆವು. ಪದೇಪದೆ ಡ್ರೈವಿಂಗ್ ಟೆಸ್ಟ್ನಲ್ಲಿ ವಿಫಲರಾಗುತ್ತಿದ್ದರೂ, ಹಠ ಬಿಡದೆ ಪ್ರಯತ್ನಿಸಿದರು. ಪ್ರಯತ್ನವನ್ನೇ ಬಿಡಿ ಎಂದು ಅವರಿಗೆ ಹೇಳುವ ಧೈರ್ಯ ನಮಗೆ ಇರಲಿಲ್ಲ. ಕೊನೆಗೂ ಪ್ರಯತ್ನ ಫಲಿಸಿತು ಎಂದು ಅವರು ಹೇಳಿದ್ದರು.
ಆ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲಂತೂ ಚಾ ಸಾ ಸೂನ್ ಸೆಲೆಬ್ರಿಟಿ ಆಗಿಹೋಗಿದ್ದರು. ಅದಲ್ಲದೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಕಂಪನಿ ಹುಂಡಾಯಿ, ಚಾ ಸಾ ಸೂನ್ರಿಗೆ ಒಂದು ಕಾರನ್ನು ಕೂಡ ಉಡುಗೊರೆಯನ್ನಾಗಿ ಕೊಟ್ಟಿತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ: Hyundai Mufasa : ಹ್ಯುಂಡೈ ಕ್ರೆಟಾಗಿಂತ ದೊಡ್ಡದಾದ SUV ಶೀಘ್ರ ಮಾರುಕಟ್ಟೆಗೆ!