Shootout at School : ಮಂಗಳಮುಖಿಯಿಂದ ಶಾಲೆಗೆ ಶೂಟೌಟ್! ಮಕ್ಕಳು ಸೇರಿ 6 ಜನರ ದುರ್ಮರಣ!
US School: ಅಮೆರಿಕಾದಲ್ಲಿ(USA) ಶಾಲೆಯಲ್ಲಿ ಬಂದೂಕು(Gun) ಹಿಡಿಯಲು ಯಾವುದೇ ರೀತಿಯ ನಿರ್ಬಂಧ ಹೇರದ ಹಿನ್ನೆಲೆ ಸಾರ್ವಜನಿಕರು ಅಧಿಕೃತವಾಗಿ ಬಂದೂಕು ಹಿಡಿದು ಅಡ್ಡಾಡುವುದನ್ನು ಗಮನಿಸಬಹುದು. ಇದರ ಪರಿಣಾಮವಾಗಿ ಅಮೆರಿಕದ ಟೆನ್ನೆಸ್ಸೀ ನಗರದ ನ್ಯಾಶ್ವಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಈ ಗುಂಡಿನ ದಾಳಿಗೆ ಮೂವರು ಮಕ್ಕಳು ಹಾಗೂ ಮೂವರು ಸಿಬ್ಬಂದಿ ಸೇರಿ 6 ಜನ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕದ(United States Of America) ನ್ಯಾಶ್ವಿಲ್ಲೆಯ(nashville school shooting six killed) ಈ ಖಾಸಗಿ ಕ್ರೈಸ್ತ ಶಾಲೆಯಲ್ಲಿ ಈ ಘಟನೆ ನಡೆದಿದ್ದು,ಈ ಗುಂಡಿನ ದಾಳಿ ನಡೆಸಿದ್ದು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿ ಎನ್ನಲಾಗಿದೆ. ಈ ಆರೋಪಿಯನ್ನು ಮಂಗಳಮುಖಿ(Transgender) ಎಂದು ಗುರುತಿಸಲಾಗಿದ್ದು, ಅಮೆರಿಕದ ಟೆನ್ನೆಸ್ಸೀ ನಗರದ ನ್ಯಾಶ್ವಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ 6 ಮಂದಿ (Death)ಬಲಿಯಾಗಿದ್ದು, ಮೃತಪಟ್ಟ ಮೂವರು ವಿದ್ಯಾರ್ಥಿಗಳು ಎವೆಲಿನ್ ಡಿಕ್ಹೌಸ್, ಹ್ಯಾಲಿ ಸ್ಕ್ರಗ್ಸ್ ಮತ್ತು ವಿಲಿಯಂ ಕಿನ್ನೆ ಎಂದು ಗುರುತಿಸಲಾಗಿದೆ. ಇವರು ಕೊವೆನೆಂಟ್ ಶಾಲೆಯವರಾಗಿದ್ದು, ಕೇವಲ 9 ವರ್ಷ ಹರೆಯಕ್ಕಿಂತಲೂ ಸಣ್ಣ ವಯಸ್ಸಿನವರೆನ್ನಲಾಗಿದೆ. ಅದೇ ರೀತಿ ಮೃತಪಟ್ಟ ಶಾಲೆಯ ಸಿಬ್ಬಂದಿಗಳನ್ನ ಲ್ಲ್ಸಿಂಥಿಯಾ ಪೀಕ್(61), ಕ್ಯಾಥರೀನ್ ಕೂನ್ಸ್ (60), ಮೈಕ್ ಹಿಲ್ (61)ಎಂದು ಪೊಲೀಸರು ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಬೆಳಿಗ್ಗೆ ಸ್ಥಳೀಯ ಸಮಯ 10:13 ಕ್ಕೆ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಶಾಲೆಯಲ್ಲಿ(US School) ಬಂದೂಕು ಹಾರಿಸಿದ ಮಂಗಳಮುಖಿ ಆಡ್ರೆ ಹೇಲ್ ಆರೋಪಿಯನ್ನು 28 ವರ್ಷದ ಎಂದು ಪೊಲೀಸರು ತಿಳಿಸಿದ್ದಾರೆ. ಆಡ್ರೆ ಹೇಲ್ ಅರೆ-ಸ್ವಯಂಚಾಲಿತ ರೈಫಲ್ ಸೇರಿದಂತೆ ಮೂರು ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದರು ಎನ್ನಲಾಗಿದೆ. ಈ ಪ್ರಕರಣದ ಆರೋಪಿಯು ಹೋಂಡಾ ಫಿಟ್ನಲ್ಲಿ ಶಾಲೆಗೆ ಆಗಮಿಸಿ, ಶಾಲೆಯ ಬಾಗಿಲೊಂದಕ್ಕೆ ಗುಂಡು ಹಾರಿಸಿ ಒಳ ನುಗ್ಗಿದ್ದಾರೆ ಎನ್ನಲಾಗಿದೆ. ಆ ಬಳಿಕ ಕಟ್ಟಡದ ಎರಡನೇ ಮಹಡಿಗೆ ತೆರಳುವ ಮುನ್ನ ಆಡ್ರೆ ಹೇಲ್ ನೆಲ ಮಹಡಿಯಲ್ಲಿ ಸುಮ್ಮನೇ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಶಾಲೆಯ ಬಗ್ಗೆ ನಕ್ಷೆ ಇಟ್ಟುಕೊಂಡಿದ್ದು, ದಾಳಿಯ ಯೋಜನೆ ವೇಳೆ ಶೂಟರ್ ಕಣ್ಗಾವಲು ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ನಡುವೆ, ಗುಂಡಿನ ದಾಳಿಯಿಂದ ತನ್ನ ಮಗ ಆಘಾತಕ್ಕೊಳಗಾಗಿರುವ ಕುರಿತು ಎಂದು ವಿದ್ಯಾರ್ಥಿಯೊಬ್ಬರ ಪೋಷಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಕಾರುಗಳು ಆಗಮಿಸುತ್ತಿದ್ದಂತೆ, ಆರೋಪಿ ಎರಡನೇ ಮಹಡಿಯಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಗುಂಡು ಹಾರಿಸಿದ ಸಂದರ್ಭ ಗಾಜು ಒಡೆದ ಪರಿಣಾಮ ಓರ್ವ ಅಧಿಕಾರಿ ಗಾಯಗೊಂಡಿದ್ದು, ಪೊಲೀಸರು ಒಳಗೆ ಧಾವಿಸಿ ಶಂಕಿತನನ್ನು 10:27 ಕ್ಕೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Veer Savarkar: ‘ತಾತ ಕ್ಷಮೆ ಕೇಳಿದ್ದನ್ನು ಸಾಬೀತು ಮಾಡಿ’ ; ರಾಹುಲ್ ಗಾಂಧಿಗೆ ಸವಾಲು ಎಸೆದ ರಂಜಿತ್ ಸಾವರ್ಕರ್ !!