Malayalam actor Innocent Dies : ಮಲಯಾಳಂ ಚಿತ್ರರಂಗದ ಹಿರಿಯ ನಟ ಇನ್ನೊಸೆಂಟ್ ಇನ್ನಿಲ್ಲ!
Malayalam actor Innocent Dies : ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಹೊಡೆತ. ನಿನ್ನೆಯಷ್ಟೇ 25ವರ್ಷದ ಬೋಜ್ಪುರಿ ನಟಿ ಆಕಾಂಕ್ಷ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಇದಕ್ಕೂ ಮೊದಲು ನಟ-ನಿರ್ದೇಶಕ ಸತೀಶ್ ಕೌಶಿಕ್ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿತ್ತು. ಈಗ ಇನ್ನೊಂದು ಶಾಕಿಂಗ್ ನ್ಯೂಸ್ ಬಂದಿದೆ. ಮಲಯಾಳಂ ಚಿತ್ರರಂಗದ ಹಿರಿಯ ನಟ ಇನ್ನೋಸೆಂಟ್ (Malayalam actor Innocent Dies) ನಿಧನರಾಗಿದ್ದಾರೆ.
ಮಲಯಾಳಂನ ಖ್ಯಾತ ನಟ ಹಾಗೂ ಲೋಕಸಭೆಯ ಮಾಜಿ ಸಂಸದ ಇನ್ನೋಸೆಂಟ್ ಭಾನುವಾರ ನಿಧನರಾಗಿದ್ದಾರೆ. 75 ವರ್ಷದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಕೊನೆಯುಸಿರೆಳೆದರು. ಇನ್ನೋಸೆಂಟ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ಮಾರ್ಚ್ 3 ರಂದು ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಂದಿರುವ ಮಾಹಿತಿ ಪ್ರಕಾರ ಇನ್ನೋಸೆಂಟ್ ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರು ಕರೋನಾ ಸೋಂಕು, ಉಸಿರಾಟದ ಕಾಯಿಲೆಗಳು, ಬಹು ಅಂಗಾಂಗ ವೈಫಲ್ಯ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
75 ವರ್ಷದ ಈ ಹಿರಿಯ ನಟ, ಹಾಸ್ಯನಟ ಮತ್ತು ಲೋಕಸಭಾ ಸಂಸದರಾದ ಇನ್ನೋಸೆಂಟ್ ವಿಧಿವಶರಾಗಿದ್ದಾರೆ. ಇವರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಹಲವು ವರ್ಷಗಳ ಹಿಂದೆ ಅವರು ಕ್ಯಾನ್ಸರ್ನಂತಹ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯ ಜೊತೆ ಹೋರಾಟ ನಡೆಸಿ ಜಯ ಗಳಿಸಿದ್ದರು. ಈ ನಟನ ಸಾವಿನ ಸುದ್ದಿ ನಟನೆ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಶೋಕ ಅಲೆಯನ್ನು ಎಬ್ಬಿಸಿದೆ.
ಮಾಲಿವುಡ್ನ ಹಿರಿಯ ಕಲಾವಿದ ಅನೇಕ ಘಟಾನುಘಟಿ ನಟರ ಜೊತೆ ನಟಿಸಿದ 75 ವರ್ಷದ ಹಿರಿಯ ನಟ, ‘ಇನ್ನೊಸೆಂಟ್’ ಅವರ ನಿಧನ ನಿಜಕ್ಕೂ ಶಾಕಿಂಗ್ ಆಗಿದೆ. ಕೋವಿಡ್ ಕಾರಣದಿಂದ ಮಾರ್ಚ್ 3 ರಂದು ಇನ್ನೋಸೆಂಟ್ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಮಾರ್ಚ್ 26 ರಂದು ರಾತ್ರಿ 10:30 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ, ನಟ ಕೋವಿಡ್ ನಿಂದ ಬಳಲುತ್ತಿದ್ದಾರೆ ಮತ್ತು ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿತ್ತು. ಇನ್ನೋಸೆಂಟ್ ಅವರ ಅನೇಕ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ಕಾರಣ ಅವರು ನಿಧನರಾಗಿದ್ದಾರೆ ಎನ್ನಲಾಗಿದೆ.
2012 ರಲ್ಲಿ ಹಿರಿಯ ನಟ ಇನ್ನೋಸೆಂಟ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಮೂರು ವರ್ಷಗಳ ನಂತರ ಅವರು ಕ್ಯಾನ್ಸರ್ ನಿಂದ ಮುಕ್ತರಾಗಿದ್ದರು ಎಂಬುದಾಗಿ ಕೂಡಾ ಹೇಳಿದ್ದರು. ಹಾಗೂ ಅವರು ‘ಕ್ಯಾನ್ಸರ್ ವಾರ್ಡ್ನಲ್ಲಿ ನಗು’ ಎಂಬ ಪುಸ್ತಕವನ್ನು ಬರೆದಿದ್ದಾರೆ. 2014ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸಿದ ಇನ್ನೋಸೆಂಟ್ 2022ರಲ್ಲಿ ತೆರೆಕಂಡ ‘ಕಡುವ’ ಚಿತ್ರದಲ್ಲಿ ಅವರು ನಟಿಸಿದ್ದು, ಇದು ಕೊನೆಯ ಚಿತ್ರವಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಜೆಪಿಯ ಖುಷ್ಬು ಸುಂದರ್ ಸೇರಿದಂತೆ ಹಲವರು ಇನ್ನೋಸೆಂಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.