Aadhar – PAN Card Link: ನಿಮ್ಮ ಆಧಾರ್ ನಂಬರ್ ಪ್ಯಾನ್ ಕಾರ್ಡ್ ನೊಂದಿಗೆ ಜೋಡಣೆ ಆಗಿದೆಯಾ ಎಂಬುದನ್ನು ಹೀಗೆ ತಿಳಿಯಿರಿ

Aadhar – PAN Card Link: ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಪಾನ್ಕಾರ್ಡ್ಗೆ ಆಧಾರ್ ಕಾರ್ಡ್ ಸಂಖ್ಯೆ(Aadhar – PAN Card Link) ಜೋಡಿಸುವಂತೆ ಸಾರ್ವಜನಿಕರಿಗೆ ಅನೇಕ ಬಾರಿ ಮನವಿ ಮಾಡಿದ್ದು, ಇದಕ್ಕಾಗಿ ಅವಧಿಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ. ಆದಾಯ ತೆರಿಗೆ ವಂಚನೆ, ಬೇನಾಮಿ ಆಸ್ತಿ, ಹೊರದೇಶಗಳಿಂದ ಹರಿದುಬರುವ ಹಣದ ಮೇಲೆ ಕಟ್ಟೆಚ್ಚರ ವಹಿಸಿ ಅಕ್ರಮವಾಗಿ ಹಣಕಾಸು(Financial Transaction) ವಹಿವಾಟು ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಸೂಚಿಸಲಾಗಿದೆ.

ಭಾರತದಲ್ಲಿ 61 ಕೋಟಿಗೂ ಹೆಚ್ಚು ಮಂದಿ ಪಾನ್ ಕಾರ್ಡ್ (Pan Card) ಹೊಂದಿದ್ದು, ಅದರಲ್ಲಿ 2023ರ ಫೆಬ್ರವರಿ ಕೊನೆಯಲ್ಲಿ 48.5 ಕೋಟಿ ಜನರ ಆಧಾರ್ ಕಾರ್ಡ್​ನೊಂದಿಗೆ ಜೋಡಣೆಯಾಗಿದೆ. ಇನ್ನುಳಿದವರು ಗಡುವಿನೊಳಗೆ ಲಿಂಕ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅನೇಕ ಬಾರಿ ಅವಧಿ ವಿಸ್ತರಣೆ ಮಾಡಿದರು ಕೂಡ ಶೇ.100 ಗುರಿ ತಲುಪಲು ಸಾಧ್ಯವಾಗದ ಹಿನ್ನೆಲೆ, ದಂಡಸಹಿತ (Penalty)ಪ್ರಸಕ್ತ ಸಾಲಿನ ಮಾ.31ರವರೆಗೂ ಅವಧಿ ವಿಸ್ತರಿಸಿದ್ದು, ಆ ಬಳಿಕ 10 ಸಾವಿರ ರೂ.ಗೆ ದಂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ. ಅಷ್ಟಕ್ಕೂಪಾನ್ ಕಾರ್ಡ್ ಆಧಾರ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯವೇಕೆ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ.

ಅನಧಿಕೃತ ಪಾನ್ ಸಂಖ್ಯೆ ಸೃಷ್ಟಿಸಿಕೊಂಡು ವಂಚಿಸಿರುವ ಪ್ರಕರಣಗಳು ಆಗಾಗ ಮುನ್ನಲೆಗೆ ಬರುತ್ತಿರುವ ಹಿನ್ನೆಲೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಹೊಸ ಪಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದ್ದು, ಈಗಾಗಲೇ, ಪಾನ್ ಕಾರ್ಡ್ ಹೊಂದಿದ್ದರೆ, ಸರ್ಕಾರ ನಿಗದಿ ಪಡಿಸಿದ ಸಮಯಕ್ಕೂ ಮೊದಲೇ ಆಧಾರ್ ಜತೆ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದ್ದು,(Pan Card Cancel) ನೀವು ಬ್ಯಾಂಕ್ (Bank)ಮೂಲಕ ಯಾವುದೇ ಹಣಕಾಸು ಚಟುವಟಿಕೆಗಳನ್ನ ಮಾಡಲು, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ(MutualFund Investment) ಆನ್​ಲೈನ್ (Online)ವಹಿವಾಟು ಕುರಿತ ಕೆವೈಸಿವರೆಗೂ, ಹೀಗೆ ಹಲವು ಹಣಕಾಸಿನ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅತ್ಯಗತ್ಯವಾಗಿದೆ. ಹಾಗಾದರೆ, ನಿಮ್ಮ ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದು ಹೇಗೆ?

ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಎಂಬುದನ್ನು ತಿಳಿಯಲು ಆನ್ ಲೈನ್ ಹಾಗೂ ಆಫ್ ಲೈನ್ ಗಳಲ್ಲಿ ಅವಕಾಶವಿದೆ.

ಆನ್ ಲೈನ್ ನಲ್ಲಿ ಪರಿಶೀಲಿಸಲು ಈ ಸರಳ ವಿಧಾನ ಅನುಸರಿಸಿ,
ಮೊದಲು, ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ (https://eportal.incometax.gov.in/iec/foservices/#/p login/bl-link-aadhaar) ಗೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ಸ್ಟೇಟಸ್ ಎಂಬ ಆಯ್ಕೆ ಪರಿಶೀಲನೆ ನಡೆಸಿ, ಪ್ಯಾನ್- ಆಧಾರ್ ನಂಬರ್ ಅನ್ನು ನಮೂದಿಸಬೇಕು. ಅಲ್ಲಿ ನಿಮಗೆ View Link Aadhaar Status ಎಂಬ ಆಯ್ಕೆ ಕಂಡು ಬರುತ್ತದೆ. ಆಧಾರ್-ಪ್ಯಾನ್ ಜೋಡಣೆಯಾಗದಿದ್ದರೆ
PAN not linked with Aadhaar. Please click on Link aadhaar link to link your Aadhaar with PAN ಈ ರೀತಿ ಕಂಡುಬರುತ್ತದೆ.
ಒಂದು ವೇಳೆ, ನಿಮ್ಮ ಪ್ಯಾನ್- ಆಧಾರ್ ನಂಬರ್ ಲಿಂಕ್ ಆಗಿದ್ದರೆ,Your PAN ALXXXXXX1B is already linked to given Aadhaar 46XXXXXXXX31 ಎಂದು ಕಾಣಿಸುತ್ತದೆ.

ಒಂದು ನಿಮ್ಮ ವೇಳೆ ಆಧಾರ್ ಪ್ಯಾನ್ ಜೋಡಣೆಯಾಗದೇ ಇದ್ದಲ್ಲಿ ಲಿಂಕ್ ಮಾಡುವುದು ಹೇಗೆ?
ಆಧಾರ್-ಪ್ಯಾನ್ ಜೋಡಣೆಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ದಂಡ ಪಾವತಿಯನ್ನು ಮನವಿ ಕಾಣುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗ್ರಾಹಕರಿಗೆ ಎನ್‌ಎಸ್ ಡಿಎಲ್ ವೆಬ್ ಸೈಟ್ ಕಾಣಿಸುತ್ತದೆ.ಪ್ಯಾನ್-ಆಧಾರ್ ಲಿಂಕ್ ವಿನಂತಿಯನ್ನು ಸಲ್ಲಿಸಲು ಅಲ್ಲಿರುವ ಆಯ್ಕೆಗಳ ಪೈಕಿ ಚಲನ್ ನಂ.ITNS 280 ಅಡಿಯಲ್ಲಿ ಮುಂದುವರೆಯಬೇಕು.
ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಹಾಕಿ Validate ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ Continue to pay through E-pay tax ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಪ್ಯಾನ್ ನಂಬರ್ ನ್ನು ಕೆಳಗಿನಂತೆ 2 ಸಲ ಹಾಕಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು.
these banks
* Indicates the mandatory fields
PAN/TAN *

Confirm PAN/TAN *HBDPS1449Q
Enter Mobile Number for OTP verification
Mobile **********
Click here to go to Protean (previously NSDL) tax payment page for other banks [ HDFC Bank, Punjab & Sind Bank, State Bank of India

ಇದರ ಜೊತೆಗೆ Continue ಮೇಲೆ ಕ್ಲಿಕ್ ಮಾಡಿ , ಆ ಬಳಿಕ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Continue ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ, ” You have successfully verified through mobile OTP. Click Continue to make a new payment.” ಎಂಬ ಸಂದೇಶ ಕಾಣಿಸುತ್ತದೆ. ನಂತರ Continue ಮೇಲೆ ಕ್ಲಿಕ್ ಮಾಡಿಕೊಂಡು ಮೊದಲನೆ Option ಮೇಲೆ ಕ್ಲಿಕ್ ಮಾಡಬೇಕು.

text.tile_income
text.tile_income_text
text.read_more
Buttons.proceed

ನಂತರ Assessment year 2023-24 ಮತ್ತು Payment minor “Other receipt 500” select ಮಾಡಿ continue ಮೇಲೆ ಕ್ಲಿಕ್ ಮಾಡಬೇಕು. ಈ ಪ್ರಕ್ರಿಯೆಯ ಮೂಲಕ ನಿಮ್ಮ Bank select ಮಾಡಿ Pay ಮಾಡಿದರೆ ನಿಮ್ಮ ಆಧಾರ್ ಗೆ ಪ್ಯಾನ್ ಲಿಂಕ್ ಆಗುತ್ತದೆ.ಇದರ ನಂತರ, ನಿಮ್ಮ Bank select ಮಾಡಿ Pay ಮಾಡಿದರೆ ನಿಮ್ಮ ಆಧಾರ್ ಗೆ ಪ್ಯಾನ್ ಲಿಂಕ್ ಆಗುತ್ತದೆ. ಇದಲ್ಲದೆ, ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಫಾರ್ಮ್ ತುಂಬಿ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ ಫೋಟೋಕಾಪಿಗಳನ್ನು ನೀಡುವ ಮೂಲಕ ಕೂಡ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ.

 

ಇದನ್ನೂ ಓದಿ: PM Kisan : ಪಿಎಂ ಕಿಸಾನ್ ಬಗ್ಗೆ ಸಿಎಜಿಯಿಂದ ಮಹತ್ವದ ಮಾಹಿತಿ ಬಹಿರರಂಗ!

5 Comments
  1. MichaelLiemo says

    ventolin online pharmacy: Ventolin inhaler – how to get ventolin over the counter
    ventolin india

  2. Josephquees says

    40 mg prednisone pill: prednisone 200 mg tablets – buying prednisone mexico

  3. Josephquees says

    furosemide 40mg: cheap lasix – lasix tablet

  4. Josephquees says

    Buy semaglutide pills: semaglutide – buy rybelsus

  5. Timothydub says

    buying from online mexican pharmacy: buying from online mexican pharmacy – pharmacies in mexico that ship to usa

Leave A Reply

Your email address will not be published.