GST: ಸಿಗರೇಟ್‌,ಪಾನ್‌ ಮಸಾಲ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಗರಿಷ್ಠ ಜಿಎಸ್‌ಟಿ ಸೆಸ್‌ ಮಿತಿ!

GST: ಕೇಂದ್ರ ಸರಕಾರವು (central government) ಪಾನ್‌ ಮಸಾಲ (pan masala), ಸಿಗರೇಟ್‌ (Cigarette) ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ (GST) ಪರಿಹಾರ ಸೆಸ್‌ನ ಗರಿಷ್ಠ ದರಕ್ಕೆ ಮಿತಿ ಹೇರಿದೆ.

 

ಲೋಕಸಭೆಯಲ್ಲಿ ಅಂಗೀಕಾರಗೊಂಡ ಹಣಕಾಸು ಮಸೂದೆಯ 2023ರ ತಿದ್ದುಪಡಿಯಲ್ಲಿ ಈ ಬಗ್ಗೆ ತಿಳಿಸಿದ್ದು, ತಿದ್ದುಪಡಿಯ ಪ್ರಕಾರ, ಪಾನ್‌ ಮಸಾಲದ ಮೇಲೆ ಅದರ ಚಿಲ್ಲರೆ ಮಾರಾಟ ದರದ ಪ್ರತೀ ಪ್ಯಾಕೆಟ್‌ಗೆ ಗರಿಷ್ಠ ಶೇ.51ರಷ್ಟನ್ನು ಜಿಎಸ್‌ಟಿ ಪರಿಹಾರ ಸೆಸ್‌ ಆಗಿರಲಿದೆ. ಪ್ರಸಕ್ತ ಈ ಮಿತಿ, ಅದರ ಮೌಲ್ಯಕ್ಕೆ ಶೇ.135 ವಿಧಿಸಲಾಗುತ್ತಿತ್ತು.

ಇದೀಗ ಇರುವ ನಿಯಮದ ಪ್ರಕಾರ, ಪಾನ್‌ ಮಸಾಲದ ಬೆಲೆಯ ಶೇ.135ರಷ್ಟನ್ನು ಸೆಸ್‌ ಎಂದು ವಿಧಿಸಲಾಗುತ್ತಿತ್ತು. ಆದರೆ, ನೂತನ ತಿದ್ದುಪಡಿಯಿಂದ ಇನ್ನು ತಂಬಾಕು ಉತ್ಪನ್ನಗಳ ಮೇಲೆ ಕೂಡ ಗರಿಷ್ಠ ಸೆಸ್‌ ವಿಧಿಸಲಾಗುತ್ತದೆ. ಪಾನ್‌ ಮಸಾಲ, ಗುಟ್ಕಾ (Gutka) ಉದ್ಯಮದಲ್ಲಿ ತೆರಿಗೆ ತಪ್ಪಿಸುವಿಕೆ ನಿಯಂತ್ರಿಸಲು ಸಲ್ಲಿಕೆಯಾಗಿದ್ದ ವರದಿಯನ್ನು ಫೆಬ್ರವರಿಯಲ್ಲಿ ಜಿಎಸ್‌ಟಿ ಮಂಡಳಿ ಅನುಮೋದಿಸಿತ್ತು.

ತಂಬಾಕು ದರವನ್ನು (Tobacco rate) ಪ್ರತಿ ಸಾವಿರ ಕಡ್ಡಿಗಳಿಗೆ ರೂ. 4,170 ಜತೆಗೆ, 290 ಪ್ರತಿಶತ ಮೌಲ್ಯಕ್ಕೆ ತಕ್ಕಂತೆ ಅಥವಾ ಪ್ರತಿ ಯೂನಿಟ್‌ಗೆ ಚಿಲ್ಲರೆ ಮಾರಾಟದ ಬೆಲೆಯ ಶೇ.100ಕ್ಕೆ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ, ಗರಿಷ್ಠ ದರವು ಪ್ರತಿ ಸಾವಿರ ಕಡ್ಡಿಗಳಿಗೆ ರೂ. 4,170 ರೂ. ಜತೆಗೆ ಅದರ ಮೌಲ್ಯಕ್ಕೆ ಅನುಗುಣವಾಗಿ 290 ಪ್ರತಿಶತವಿತ್ತು. ಸೆಸ್ ಅನ್ನು ಅತ್ಯಧಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವಾದ 28 ಪ್ರತಿಶತಕ್ಕಿಂತ ಹೆಚ್ಚಾಗಿ ವಿಧಿಸಲಾಗುತ್ತದೆ.

Leave A Reply

Your email address will not be published.