RCB -WPL: ಗೋವಾದಲ್ಲಿ RCB ಆಟಗಾರ್ತಿಯರ ಮೋಜು-ಮಸ್ತಿ! ಮಣ್ಣಿನ ಕಪ್ ತಯಾರಿಸಲು ಹೋಗಿದ್ದಾರೆ ಎಂದ ಅಭಿಮಾನಿಗಳು
RCB -WPL :ಮೊಟ್ಟ ಮೊದಲ ಬಾರಿಗೆ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (Women’s Premier League) ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಅದರಲ್ಲೂ RCB ಅಭಿಮಾನಿಗಳಿಗಂತೂ ತುಸು ಹೆಚ್ಚೇ ಅನ್ನಬಹುದು. ಹರಾಜು ಪ್ರಕ್ರಿಯೆ ಮುಗಿದಂದಿನಿಂದ, ಕ್ಯಾಪ್ಟನ್ ಸೆಲೆಕ್ಟ್ ಆದಾಗಿನಿಂದ ಕಪ್ ಗೆಲ್ಲುವ ಕನಸು ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈ ವಿಶ್ವಾಸದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಸೋಲುಗಳ ಸರದಾರವೆನಿಸಿ ಲೀಗ್ ಹಂತದಲ್ಲೇ ಹೊರ ಬಿದ್ದಿದೆ.
ಹೌದು, WPL (RCB -WPL) ನಲ್ಲಿ ಆರ್‌ಸಿಬಿ ಅತ್ಯಂತ ಬಲಿಷ್ಠ ತಂಡ ಎನಿಸಿದೆ. ಆದರೆ ತೋರಿದ್ದು ಮಾತ್ರ ಹೀನಾಯ ಪ್ರದರ್ಶನ. ಲೀಗ್ನ ಆರಂಭಿಕ ಐದೂ ಪಂದ್ಯಗಳಲ್ಲೂ ಸತತ ಸೋಲು ಕಂಡಿತ್ತು. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಧೈರ್ಯ ತುಂಬಿದ್ದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆದ್ದ ಆರ್‌ಸಿಬಿ, ಲೀಗ್ನ ಕೊನೆಯ ಪಂದ್ಯದಲ್ಲಿ ಮುಗ್ಗರಿಸಿ, ಸೋಲಿನೊಂದಿಗೆ ತನ್ನ ಅಭಿಯಾನ ಮುಗಿಸಿತು. ಹೀಗೆ ಸತತ ಸೋಲು ಕಂಡಿದ್ದು ಮಾತ್ರ ಅಭಿಮಾನಿಗಳನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಈ ಸೋಲುಗಳನ್ನು ಅಭಿಮಾನಿ ಬಳಗಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನ (Smriti Mandhana), ಮುಂದಿನ ವರ್ಷ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಶಪಥ ಮಾಡಿದ್ದಾರೆ.
ಆದರೀಗ ಆರ್‌ಸಿಬಿ ಆಟಗಾರ್ತಿಯರ ನಡೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆಂದರೆ ತಂಡವು ಒಂದರಮೇಲೊಂದರಂತೆ ಸೋಲುಂಡು ಲೀಗ್ನಿಂದ ಹೊರ ಬಿದ್ದದ್ದು ಅಭಿಮಾನಿಗಳಿಗೆ ಭಾರೀ ಬೇಸರ ಉಂಟುಮಾಡಿದೆ. ಆ ಬೇಸರದಿಂದ ಇನ್ನೂ ಹೊರ ಬಂದಿಲ್ಲ. ಆದರೆ ಈ ಎಲ್ಲಾ ನೋವು ಮರೆತ ಆರ್‌ಸಿಬಿ ಆಟಗಾರ್ತಿಯರು ಗೋವಾದ ಬೀಚ್ನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.
ಮೋಜು ಮಸ್ತಿಯಲ್ಲಿ ತೊಡಗಿದ ಮಂಧಾನ ಪಡೆ! ಇದು ಕೋಟ್ಯಾಂತರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಹೌದು, RCB ಆಟಗಾರ್ತಿಯರು ಸದ್ಯ ಗೋವಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ನಾಯಕಿ ಸ್ಮೃತಿ ಮಂಧಾನ, ಎಲಿಸ್ ಪೆರ್ರಿ, ಹೀದರ್ ನೈಟ್, ಸೋಫಿ ಡಿವೈನ್, ಮೇಗನ್ ಶುಟ್, ಎರಿನ್ ಬರ್ನ್ಸ್ ಬೀಚ್ವೊಂದರಲ್ಲಿ ತೆಗೆಸಿಕೊಂಡಿರುವ ಗ್ರೂಪ್ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರ್ತಿಯರು, ಗೋವಾದಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.
ಅಂದಹಾಗೆ ಇದನ್ನು ನೋಡಿದ ಫ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೈಲಿ ಕಪ್ ಗೆಲ್ಲಲು ಸಾಧ್ಯವಾಗಲ್ಲ, ಇದಕ್ಕಷ್ಟೇ ಸೀಮಿತ. ಆರ್‌ಸಿಬಿ ಅಭಿಮಾನಿಗಳ ಭಾವನೆಗಳೊಂದಿಗೆ ಆಡಿದ ನಂತರ ಅವರು ಈಗ ಗೋವಾದಲ್ಲಿ ಆಡುತ್ತಿದ್ದಾರೆ ಎಂದು ಭಾವಿಸುತ್ತೇವೆ, ಸ್ಮೃತಿ ಮಂಧಾನ ಇಲ್ಲೂ ಕೂಡ ಶೈನ್ ಆಗಿಲ್ಲ, ಬೀಚ್ನಲ್ಲಿ ಮಣ್ಣಿನ ಕಪ್ ತಯಾರಿಸುತ್ತಿದ್ದಾರೆ, ಟೀಮ್ ಜೋಕರ್ಸ್ ಎಂದೆಲ್ಲಾ ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Cooker Bomb Blast : ಕುಕ್ಕರ್ ಬಾಂಬ್ ಕಾರಣಕರ್ತ ಶಾರೀಕ್ ಕುರಿತು ಸ್ಫೋಟಕ ಮಾಹಿತಿ ಲೀಕ್!