Weekend Ramesh: ರಮ್ಯಾ ಕನ್ನಡ ಕೇಳಿ ಅಜ್ಜಿ ಟೀವಿ ಆಫ್ ಮಾಡಿ ಮಲಗಿದ್ರಂತೆ, ಅತಿಯಾಗಿ ಇಂಗ್ಲಿಷ್ ಬಳಸಿದ್ದಕ್ಕೆ ರಮ್ಯಾ ಟ್ರೋಲ್

Weekend Ramesh: ಕನ್ನಡ  ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ (Reality Show) ವೀಕೆಂಡ್ ವಿತ್ ರಮೇಶ್ (Weekend With Ramesh) ನಿನ್ನೆಯಿಂದ ಮತ್ತೆ ಶುರುವಾಗಿದೆ. ಈ ಬಾರಿ ಮೊದಲ ಅತಿಥಿಯಾಗಿ (Guest) ಸ್ಯಾಂಡಲ್​ವುಡ್​ನ (Sandalwood) ಮೋಹಕ ತಾರೆ ರಮ್ಯಾ (Ramya) ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ಹೆಚ್ಚಾಗಿ ಇಂಗ್ಲಿಷ್ ಮಾತನಾಡಿದ್ದಕ್ಕಾಗಿ ಟ್ರೋಲ್ ಆಗಿದ್ದಾರೆ.

 

ನಟಿ ರಮ್ಯಾ ಅವರು ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮಿನ ಅತಿಥಿ ಸೀಟ್​ನಲ್ಲಿ ಕುಳಿತು ತಮ್ಮ ಬಾಲ್ಯ, ಸಿನಿಮಾ, ಮೊದಲ ಸಂಪಾದನೆ ಹೀಗೆ ಹಲವು ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ. ಇದರೆಲ್ಲದರ ಮಧ್ಯೆ ಹೆಚ್ಚು ಜನರು ಗಮನಿಸಿದ್ದು ನಟಿಯ ಇಂಗ್ಲಿಷ್. ಹೌದು ರಮ್ಯಾ ಅವರು ಇಂಗ್ಲಿಷ್ ಮಿಶ್ರಿತ ಕನ್ನಡ (English Kannada) ಭಾಷೆಯಲ್ಲಿ ಮಾತನಾಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಇದೀಗ ಅದೇ ವಿಷಯವನ್ನು ಇಟ್ಟುಕೊಂಡು ರಮ್ಯಾ ಅವರನ್ನು ಟ್ರೊಲ್ ಮಾಡಲಾಗುತ್ತಿದೆ. ರಮ್ಯಾ ಅವರ ಇಂಗ್ಲಿಷ್ ನೋಡಿ ಟಿವಿ ನೋಡುತ್ತಿದ್ದ ಅಜ್ಜಿಯಂದಿರು ಟಿವಿ ಆಫ್ ಮಾಡಿ ಕಂಬಳಿ ಹೊದ್ದು ಮಲಗಿದ್ದಾರಂತೆ.

ಅಜ್ಜಿಗೆ ರಮ್ಯಾ ಗೊತ್ತು, ಆದ್ರೆ ಇಂಗ್ಲಿಷ್ ಬರಲ್ಲ ಎಂದು ಟ್ರೊಲ್ ಆಗುತ್ತಿರುವ ರಮ್ಯಾ !

ಈ ಟ್ರೊಲ್ ಗಳು ಬಹಳಷ್ಟು ಟ್ರೋಲ್ ವೈರಲ್ ಆಗುತ್ತಿದ್ದು ಅಂತಹಾ ಟ್ರೊಲ್ ಒಂದರಲ್ಲಿ, ‘ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಕ್ಕೊಂಡ್ರು’ ಎಂದಿದ್ದಾನೆ ಟ್ರೋಲಿಗ.

‘ ರಮ್ಯಾ ಅವರು ಬರೀ ಇಂಗ್ಲಿಷ್ ಮಾತಾಡೋದೇ ಆಯ್ತು. ಸಾಧನೆ ಮಾಡಿರೋದು ಇಲ್ಲಿನ ಭಾಷೆಯಿಂದ ‘ ಎಂದಿದ್ದಾರೆ ಇನ್ನೊಬ್ಬರು. ಈ ಸೀಸನ್​ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ? ಕನ್ನಡ ಸಬ್​ಟೈಟಲ್ ಆದ್ರೂ ಹಾಕ್ರೋ ಕೆಳಗೆ, ಕನ್ನಡ ಮಾಯ ಆಗಿದೆ ‘ ಎಂಬ ಟ್ರೊಲ್ ಕೂಗು ಕೇಳಿ ಬಂದಿದೆ.

ಇನ್ನೊಬ್ಬರು, ‘ ಇದೇನಾ ವೀಕೆಂಡ್ ವಿತ್ ರಮೇಶ್ ? ಅಥವಾ ವೀಕೆಂಡ್ ವಿತ್ ಇಂಗ್ಲಿಷಾ ? ಎಂದು ಕಿಚಾಯಿಸಿ ಕೇಳಿದ್ದಾರೆ. ನಿಮ್ಮ ಮೇಲೆ ಪ್ರೀತಿ ಅಭಿಮಾನ ಜಾಸ್ತಿ ಇದೆ. ಆದರೆ, ರಮ್ಯಾ ಮೇಡಂ, ನೀವು ಕನ್ನಡ ಜಾಸ್ತಿ ಬಳಸದೆ ಇದ್ದದ್ದು ಖಂಡಿತ ತಪ್ಪು ಎಂದಿದ್ದಾರೆ ಮತ್ತೊಬ್ಬ ವೀಕ್ಷಕ. ನಾವೇನಾದ್ರೂ ಇಂಗ್ಲಿಷ್ ಶೋ ನೋಡ್ತಿದ್ದೀವಾ? ಎಂದು ಪ್ರಶ್ನಿಸಿದ್ದಾರೆ ಹಲವರು. ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ, ರಮ್ಯಾ ಅವರಿಗೆ ಕನ್ನಡ ಬರಲ್ಲ- ಇಬ್ರೂ ಇನ್ಯಾವಾಗ ಕಲಿತಾರೋ ಎಂದಿದ್ದಾರೆ ಕೆಲವರು.

ವೀಕೆಂಡ್ ವಿಥ್ ರಮೇಶ್ ಎಂದು ಪೂಜಾ ಗಾಂಧಿ (Pooja Gandhi) ಅವರು ಪೋಸ್ಟ್ ಮಾಡಿದ ಕನ್ನಡ ಬರಹದ ಫೋಟೋ ಪೋಸ್ಟ್ ಮಾಡಿ ನೆಟ್ಟಿಗರು ರಮ್ಯಾ ಅವರನ್ನು ಟ್ರೋಲ್ ಮಾಡಿದ್ದಾರೆ. ರಮ್ಯಾ ಅವರನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕನ್ನಡದಲ್ಲಿ ಪತ್ರಬರೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಟಿ ಪೂಜಾ ಗಾಂಧಿ ಅವರನ್ನು ನೆಟ್ಟಿಗರು ಹೊಗಳುತ್ತಿದ್ದಾರೆ.

ಈ ಶೋವಿನ ಮೂಲಕ ರಮ್ಯಾ ಅವರ ಬದುಕಿನ ಹಲವು ಸಂಗತಿಗಳು ಬಹಿರಂಗವಾಗಿವೆ. ಆರ್.ಟಿ ನಾರಾಯಣ್ ಮತ್ತು ರಂಜಿತಾ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982ರಲ್ಲಿ ಜನಿಸಿದ್ದಾರೆ ರಮ್ಯಾ. ಅವರು ಊಟಿಯ ಬೋರ್ಡಿಂಗ್ ಸ್ಕೂಲ್​ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ಚೆನ್ನೈನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಬಾಲಿವುಡ್‌ ಜಾಕಿ ಶ್ರಾಫ್‌ ರಮ್ಯಾ. ಫೇವರಿಟ್ ಹೀರೋ ಅಂತೆ. ನಿನ್ನೆ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ ರಮ್ಯಾ ತನ್ನ ಹಳೆಯ ದಿನಗಳ ಬಗ್ಗೆ ಮಾತಾಡಿದ್ದಾರೆ. ತನ್ನ ಗೆಳತಿಯರು, ನಟಿಯ ಶಾಲಾ ದಿನಗಳ ಬಗ್ಗೆ ಮಾತಾಡಿದ್ರು. ತಮ್ಮ ಹಳೆಯ ಫೋಟೋಗಳನ್ನು ನೋಡಿ ರಮ್ಯಾ ಕೂಡ ತುಂಬಾ ಖುಷಿ ಪಟ್ಟಿದ್ದಾರೆ. ಬಾಲ್ಯದಲ್ಲಿ ಸ್ಫೋರ್ಟ್ಸ್​ನಲ್ಲಿ ಮುಂದಿದ್ದ ರಮ್ಯಾಗೆ ಬ್ಯಾಸ್ಕೆಟ್ ಬಾಲ್ ಅಂದ್ರೆ ತುಂಬಾ ಇಷ್ಟವಂತೆ. ಆದ್ರೆ ಆದರೆ ಸಕ್ಸಸ್ ಕಂಡದ್ದು ಸಿನಿಮಾ ರಂಗದಲ್ಲಿ.

Leave A Reply

Your email address will not be published.