Rahul Gandhi : ಅನರ್ಹತೆ ಬೆನ್ನಲ್ಲೇ ರಾಹುಲ್ ಟ್ವಿಟ್ಟರ್ ಅಲ್ಲಿ ಮಹತ್ವದ ಬದಲಾವಣೆ! ಬಿಜೆಪಿಗೆ ಟಾಂಗ್‌ ಕೊಡಲು ರಾಗಾ ಮಾಡಿದ್ದೇನು ಗೊತ್ತಾ?

Rahul Gandhi tweet : ಪ್ರಧಾನಿ ಮೋದಿ(PM Modi) ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಆದ ಹಿನ್ನೆಲೆ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ(Rahul Gandhi tweet) ತಮ್ಮ ಟ್ವಿಟರ್‌ ಬಯೋವನ್ನು ಬದಲಾಯಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡ ಒಂದು ದಿನದಲ್ಲಿಯೇ ಟ್ವಿಟರ್‌ ಬಯೋ ಬದಲಾಯಿಸಿರುವ ರಾಹುಲ್‌ ಗಾಂಧಿ ‘ಅನರ್ಹ ಸಂಸದ’ ಎಂದು ಬರೆದುಕೊಂಡಿದ್ದಾರೆ.

 

ಹೌದು, ಸಂಸತ್ ಸದಸ್ಯತ್ವದಿಂದ(Parliment Membeship) ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ ಖಾತೆ, ಟ್ವಿಟರ್ ಖಾತೆಯ ಹೆಸರಿನ ಕೆಳಗೆ ಕಾಣಿಸಿಕೊಳ್ಳುವ ಬಯೋ ವಿಭಾಗದಲ್ಲಿ “ಸಂಸತ್ತಿನ ಸದಸ್ಯ” ಅನ್ನು ‘’ಅನರ್ಹಗೊಂಡ ಸಂಸದ’’ (Disqualified MP’) ಎಂದು ಬದಲಾಯಿಸಿಕೊಂಡಿದ್ದಾರೆ. ಈ ಮೊದಲು ಅಲ್ಲಿ ವಯನಾಡು ಲೋಕಸಭಾ ಕ್ಷೇತ್ರದ ಸಂಸದ ಎಂದು ಇತ್ತು. ‘ಅನರ್ಹ ಸಂಸದ’ ಎಂದು ಬಯೋದಲ್ಲಿ ಸೇರಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ರಿಮಿನಲ್ ಎಂದು ಸೂಚಿಸುವ ಟೀಕೆಗಳಿಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ನಂತರ ರಾಹುಲ್‌ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು. ಈ ಮಧ್ಯೆ, ರಾಹುಲ್‌ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ.

ರಾಹುಲ್‌ ಗಾಂಧಿ ಅನರ್ಹತೆಯನ್ನು ಖಂಡಿಸಿ ಕಾಂಗ್ರೆಸ್‌(Congress) ನಾಯಕರು ದಿಲ್ಲಿಯ ರಾಜ್‌ಘಾಟ್‌ನ ಮಹಾತ್ಮ ಗಾಂಧಿ ಸಮಾಧಿ ಬಳಿ ಒಂದು ದಿನದ ಸಂಕಲ್ಪ ಸತ್ಯಾಗ್ರಹವನ್ನು ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ್‌ ವಾದ್ರಾ ಗಾಂಧಿ, ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್‌, ಪಿ ಚಿದಂಬರಂ, ಸಲ್ಮಾನ್‌ ಖುರ್ಷಿದ್‌ ಸೇರಿ ಪಕ್ಷದ ಅನೇಕ ನಾಯಕರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಸತ್ಯಾಗ್ರಹಕ್ಕೆ ಅನುಮತಿ ನೀಡಲು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಟ್ರಾಫಿಕ್‌ ಕಾರಣದಿಂದ ಸತ್ಯಾಗ್ರಹಕ್ಕೆ ಅವಕಾಶ ನೀಡಲು ಆಗುವುದಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದು, ರಾಜ್‌ಘಾಟ್‌ ಸುತ್ತಲೂ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

Leave A Reply

Your email address will not be published.