Nissan X-Trail : ಟೊಯೊಟಾ ಫಾರ್ಚೂನರ್‌ಗೆ ಪೈಪೋಟಿ ನೀಡಲು ಮಾರುಕಟ್ಟೆಗೆ ಶೀಘ್ರ ಬರಲಿದೆ ʼನಿಸ್ಸಾನ್‌ ಎಕ್ಸ್‌ಟ್ರಯಲ್‌’

Nissan X-Trail: ಜನಪ್ರಿಯ ಕಾರು (car) ತಯಾರಿಕಾ ಕಂಪನಿಗಳು ಮಾರುಕಟ್ಟೆಗೆ ಹಲವು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯುತ್ತಮ ವೈಶಿಷ್ಟ್ಯತೆ, ಕಣ್ಮನ ಸೆಳೆಯುವ ಬಣ್ಣಗಳ ಆಯ್ಕೆ ಹೊಂದಿರುವ ಕಾರುಗಳನ್ನು ಪರಿಚಯಿಸುತ್ತಿದೆ. ಅಂತೆಯೇ ಜನರು ಆಕರ್ಷಿತರಾಗಿ ಕಾರು ಕೊಳ್ಳಲು ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿದರೂ ಪೆಟ್ರೋಲ್ (petrol) ಕಾರುಗಳಿಗೆ ಬೇಡಿಕೆ ಏನೂ ತಗ್ಗಿಲ್ಲ. ಸದ್ಯ ‘ನಿಸ್ಸಾನ್ ಮೋಟಾರ್ ಇಂಡಿಯಾ’ (Nissan motor india) ಶೀಘ್ರದಲ್ಲೇ ಎಕ್ಸ್ ಟ್ರಯಲ್ (Nissan X-Trail) ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

 

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಸ್ಸಾನ್ ತನ್ನ ಮೂರು ಪ್ರೀಮಿಯಂ ಎಸ್‌ಯುವಿಗಳಾದ ಕಶ್ಕೈ (Qashqai), ಜ್ಯೂಕೆ (Juke) ಹಾಗೂ ಎಕ್ಸ್ ಟ್ರಯಲ್ (X-Trail) ಅನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ನ್ಯೂ ಜನರೇಷನ್ ‘ಎಕ್ಸ್ ಟ್ರಯಲ್’ ಎಸ್‌ಯುವಿಯನ್ನು ಇದಾಗಲೇ ನಿಸ್ಸಾನ್ ಪರಿಚಯಿಸಿದೆ. ಇದೀಗ, ಭಾರತದ ಮಾರುಕಟ್ಟೆಗೂ ಬರಲಿದೆ ಎಂದು ವರದಿಯಾಗಿದೆ.

ನಿಸ್ಸಾನ್ ಎಕ್ಸ್ ಟ್ರಯಲ್ ಎಸ್‌ಯುವಿ, 5 ಹಾಗೂ 7 ಆಸನ ವ್ಯವಸ್ಥೆಯಲ್ಲಿ ದೊರೆಯಲಿದ್ದು, ಒಳಭಾಗದಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, 360 ಡಿಗ್ರಿ ಕ್ಯಾಮೆರಾ ಸಿಸ್ಟಮ್ ವೈಶಿಷ್ಟ್ಯವನ್ನು ಪಡೆದಿರಲಿದ್ದು, ಸುರಕ್ಷತೆಗಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹೊಂದಿರಲಿದೆ. ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರಲಿದ್ದು, ಇದು ಸ್ಪ್ಲಿಟ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಬ್ಲ್ಯಾಕ್ ಗ್ರಿಲ್ ಹಾಗೂ ಮಸ್ಕ್ಯುಲರ್ ಬಾನೆಟ್ ಅನ್ನು ಪಡೆದಿದೆ.

ಇ-ಪವರ್ ಟೆಕ್ನಾಲಜಿ ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದ್ದು, ಇದರ ಸುಮಾರು ರೂ.40 ಲಕ್ಷ ಬೆಲೆ ಇರಬಹುದು ಎನ್ನಲಾಗಿದೆ. ಮುಂಬರಲಿರುವ ನಿಸ್ಸಾನ್ ಎಕ್ಸ್ ಟ್ರಯಲ್ ಎಸ್‌ಯುವಿಯನ್ನು ಹಬ್ಬದ ಸೀಸನ್ ವೇಳೆಗೆ ಲಾಂಚ್ ಆಗಲಿದೆ ಎಂದು ಹೇಳಲಾಗಿದೆ.

Leave A Reply

Your email address will not be published.