Unique Tradition : ಅವನಲ್ಲಿ-ಇವಳಿಲ್ಲಿ! ಇಲ್ಲಿ ದಂಪತಿಗಳು ಒಟ್ಟಿಗೆ ಮಲಗೋ ಆಗಿಲ್ಲ, ದೂರನೇ ಮಲಗೋ ಸಂಪ್ರದಾಯ! ವಿಚಿತ್ರ ಸಂಪ್ರದಾಯ ಯಾಕೆ ಇದೆ ಗೊತ್ತಾ?

Unique Tradition: ಮದುವೆ (marriage) ಪ್ರತಿಯೊಬ್ಬರ ಜೀವನದಲ್ಲೂ ಒಂದು ಬಾರಿ ಘಟಿಸುವ ಸುಂದರ ಘಟನೆ. ಕೆಲವರು ಪ್ರೀತಿಸಿ ಮದುವೆಯಾದರೆ, ಇನ್ನೂ ಕೆಲವರು ಪೋಷಕರು ಯಾರನ್ನು ಆಯ್ಕೆ ಮಾಡುತ್ತಾರೋ ಅವರನ್ನೇ ವಿವಾಹವಾಗುತ್ತಾರೆ. ವಿವಾಹದ ಬಳಿಕ ಹೆಂಡತಿ ಗಂಡನ ಮನೆಗೆ ಹೋಗೋದು, ಇಬ್ಬರು ಒಟ್ಟಿಗೆ ಸದಾ ಕಾಲ ಜೊತೆಯಾಗಿರುವುದು. ಪ್ರತಿದಿನ ಒಂದೇ ಕೋಣೆಯಲ್ಲಿ ಮಲಗುವುದು ಇವೆಲ್ಲಾ ಸಾಮಾನ್ಯ, ತಿಳಿದಿರುವಂತದ್ದೇ. ಆದರೆ ಜಪಾನ್‌ನಲ್ಲಿ (Japan) ಗಂಡ ಹೆಂಡತಿ ರಾತ್ರಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುತ್ತಾರೆ. ಹೌದು, ಇಲ್ಲಿ ದಂಪತಿಗಳು ಒಟ್ಟಿಗೆ ಮಲಗೋ ಆಗಿಲ್ಲ, ದೂರನೇ ಮಲಗೋ ಸಂಪ್ರದಾಯ. ಈ ವಿಚಿತ್ರ ಸಂಪ್ರದಾಯ (Unique Tradition) ಯಾಕೆ ಇದೆ ಗೊತ್ತಾ?

 

ಜಪಾನ್‌ನಲ್ಲಿರುವ ದಂಪತಿಗಳು ಯಾಕೆ ಒಟ್ಟಿಗೆ ಮಲಗೋದಿಲ್ಲ ಅಂದ್ರೆ, ಇಲ್ಲಿನ ದಂಪತಿಗಳು ಉತ್ತಮ ನಿದ್ರೆಯನ್ನು ಹೆಚ್ಚು ಗೌರವಿಸುತ್ತಾರೆ. ಇಬ್ಬರಲ್ಲಿ ಒಬ್ಬರು ಬೆಳಿಗ್ಗೆ ಬೇಗ ಎದ್ದರೆ ಇನ್ನೋಬ್ಬರಿಗೆ ಎಚ್ಚರವಾಗಿ ನಿದ್ದೆಗೆ ಭಂಗ ಬರುತ್ತದೆ. ಹಾಗಾಗಿ ಇಬ್ಬರೂ ಪ್ರತ್ಯೇಕವಾಗಿ ಮಲಗುತ್ತಾರೆ. ಇಲ್ಲಿನ ದಂಪತಿಗಳು ಪರಸ್ಪರ ನಿದ್ದೆಗೆ ಭಂಗ ತರುವುದಿಲ್ಲ, ಹೆಚ್ಚು ಸಮಯ ನಿದ್ದೆ ಮಾಡಲು ಅವಕಾಶ ಕೊಡುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ನಿದ್ರೆ ತುಂಬಾ ಮುಖ್ಯ ಎಂದು ಅವರು ಹೇಳುತ್ತಾರೆ.

ಜಪಾನ್‌ನಲ್ಲಿ ಮಕ್ಕಳು (children’s) ತಮ್ಮ ತಾಯಂದಿರೊಂದಿಗೆ ಮಲಗುತ್ತಾರೆ. ಯಾಕಂದ್ರೆ ಇದು ತಾಯಿಯ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಮಗುವಿನ ಹೃದಯ ಬಡಿತವನ್ನು ಸಹ ನಿಯಂತ್ರಿಸಲಾಗುತ್ತದೆ. ಅಲ್ಲದೆ, ದಂಪತಿಯ ಮದ್ಯೆ ಮಕ್ಕಳಿಗಾಗಿ ಜಗಳ ಇರುವುದಿಲ್ಲ. ಭಾರತದಲ್ಲಿಯೂ ತಾಯಿ ಮತ್ತು ಮಕ್ಕಳು ಒಟ್ಟಿಗೆ ಮಲಗಬೇಕು. ಆರೋಗ್ಯಕ್ಕೆ ತುಂಬಾ ಒಳಿತು. ಹಾಗೆಯೇ ದೇಹದಲ್ಲಿನ ಸಂತೋಷದ ಹಾರ್ಮೋನುಗಳು ಹೆಚ್ಚಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

Leave A Reply

Your email address will not be published.