Sullia : ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪ ಆಯ್ಕೆ

G Krishnappa :ಕಡಬ ಬ್ಲಾಕ್ ನಲ್ಲಿ ಭುಗಿಲೆದ್ದ ಅಸಮಾಧಾನ
ಅಭ್ಯರ್ಥಿಯನ್ನು ನಾಯಕರು ತೀರ್ಮಾನಿಸುವುದು ಅಲ್ಲ..ಕಾರ್ಯಕರ್ತರು ಆಯ್ಕೆ ಮಾಡುವುದು…ಆಕ್ರೋಶ

 

ಡಿಕೆಶಿ,ಸಿದ್ದರಾಮಯ್ಯ ಭೇಟಿಗೆ ನಂದಕುಮಾರ್ ಅಭಿಮಾನಿ ಬಳಗ ನಿರ್ಧಾರ

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣಪ್ಪರವರನ್ನು (G Krishnappa) ಹೈಕಮಾಂಡ್ ಘೋಷಿಸಿರುವ ಬೆನ್ನಲ್ಲೇ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅಭಿಮಾನಿಗಳು ಕಡಬದಲ್ಲಿ ಸಭೆ ನಡೆಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ನಂದ ಕುಮಾರ್ ಕಳೆದ ಹಲವು ಸಮಯಗಳಿಂದ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿರುವುದರಿಂದ ನಂದಕುಮಾರ್ ರವರಿಗೆ ಟಿಕೆಟ್ ನೀಡಬೇಕೆಂದು ಅಭಿಮಾನಿಗಳು ಭಾನುವಾರದಂದು ಕಡಬದ ಅನುಗ್ರಹ ಸಭಾ ಭವನದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನಂದಕುಮಾರ್ ರವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಸುಳ್ಯ ಹಾಗೂ ಕಡಬ ತಾಲೂಕಿನಿಂದ 500 ಮಂದಿ ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಪ್ರತಿನಿಧಿಯಾಗಿ ಪ್ರಿಯಾಂಕ್ ಖರ್ಗೆಯರವನ್ನು ಭೇಟಿ ಮಾಡುವುದಾಗಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಕಡಬ ಬ್ಲಾಕ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಬಳ್ಳೇರಿ, ಗಣೇಶ್ ಕೈಕುರೆ, ವಿಜಯ ಕುಮಾರ್ ರೈ, ತಾ.ಪಂ. ಮಾಜಿ‌ ಸದಸ್ಯೆಯರಾದ ಆಶಾ ಲಕ್ಷಣ್, ಉಷಾ ಅಂಚನ್, ಪ್ರಮುಖರಾದ ಪ್ರವೀಣ್ ಕೆಡೆಂಜಿ, ರವಿ ರುದ್ರಪಾದ, ಗೋಪಾಲಕೃಷ್ಣ ಭಟ್, ಅನಿಲ್, ಜಗನ್ನಾಥ್ ಪೂಜಾರಿ, ಗೋಕುಲ್ ದಾಸ್, ಸಿ.ಜೆ.ಸೈಮನ್, ರಮೇಶ್ ಕೋಟೆ ಎಣ್ಮೂರು, ಇಸ್ಮಾಯಿಲ್ ಕೋಲ್ಪೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.