Akansha Dubey Suicide : ಚಿತ್ರರಂಗಕ್ಕೆ ಮತ್ತೊಂದು ಹೊಡೆತ! ನಟಿ ಆಕಾಂಕ್ಷ ಆತ್ಮಹತ್ಯೆ !

Bhojpuri Actress Akansha Dubey : ಭೋಜ್‌ಪುರಿ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ಆಕಾಂಕ್ಷಾ ದುಬೆ (Bhojpuri Actress Akansha Dubey) ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಇಂದು ಅಂದರೆ ಮಾರ್ಚ್ 26 ರಂದು ಅವರ ಸಾವಿನ ಸುದ್ದಿ ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಮೃತದೇಹ ವಾರಣಾಸಿಯ ಹೋಟೆಲ್‌ನಲ್ಲಿ ಪತ್ತೆಯಾಗಿದೆ. ಕೇವಲ 25 ವರ್ಷದ ಈ ನಟಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.

 

ಈ ಸುದ್ದಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಭೋಜ್‌ಪುರಿ ಇಂಡಸ್ಟ್ರಿಯ ಸುಪ್ರಸಿದ್ಧ ಹಾಗೂ ಖ್ಯಾತ ನಟಿ ಆಕಾಂಕ್ಷಾ ದುಬೆ ವಾರಣಾಸಿಯ ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೂಪದರ್ಶಿ ಮತ್ತು ನಟಿ ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮೇಂದ್ರ ಹೋಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಕಾಂಕ್ಷಾ ಭದೋಹಿ ಜಿಲ್ಲೆಯ ಚೌರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಸಿಪುರದ ನಿವಾಸಿ.

ಆಕಾಂಕ್ಷಾ ದುಬೆ (Actress Akansha Dubey) ಬಗ್ಗೆ ಹೇಳುವುದಾದರೆ, ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ ಆಕಾಂಕ್ಷಾ ಭೋಜ್‌ಪುರಿ ಚಿತ್ರರಂಗದಲ್ಲಿ ತನ್ನ ಕಠಿಣ ಪರಿಶ್ರಮದಿಂದ ಕಡಿಮೆ ಸಮಯದಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಮೊದಲು ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಈಕೆ, ತದನಂತರ 2019 ರಲ್ಲಿ, ಮೇರಿ ಜಂಗ್ ಮೇರಾ ಫೈಸ್ಲಾ ಚಿತ್ರದ ಮೂಲಕ ಭೋಜ್‌ಪುರಿ ಚಿತ್ರರಂಗದಲ್ಲಿ ಒಳ್ಳೆ ಬ್ರೇಕ್ ಪಡೆದರು. ಈ ಚಿತ್ರದಲ್ಲಿ, ಆಕಾಂಕ್ಷ ಖೇಸರಿ ಲಾಲ್ ಯಾದವ್ ಅವರ ಜೊತೆ ನಟನೆ ಮಾಡಿದ್ದರು. ಅದರ ನಂತರ ಅವರು ನಿರ್ಹುವಾ-ಪವನ್ ಸಿಂಗ್ ಅವರಂತಹ ಅನೇಕ ದೊಡ್ಡ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದರು.

ಒಂದು ಕಡೆ ಇಂದು ಅವರ ಆತ್ಮಹತ್ಯೆಯ ಸುದ್ದಿ ಬಂದರೆ, ಮತ್ತೊಂದೆಡೆ ಪವನ್ ಸಿಂಗ್ ಜೊತೆಗಿನ ಅವರ ಹೊಸ ಹಾಡು ಕೂಡ ಇಂದು ಬಿಡುಗಡೆಯಾಗಿದೆ. ಹಾಡಿನ ಶೀರ್ಷಿಕೆ ‘ಯೇ ಆರಾ ಕಭಿ ನಹೀ ಹರಾ’. ಅದೇ ಸಮಯದಲ್ಲಿ, ಅವರು ಪ್ರಸ್ತುತ ತನ್ನ ಮುಂಬರುವ ಚಿತ್ರ ‘ಏಕ್ ದಿನ್ ಕಿ ಸಾಸ್’ ನಲ್ಲಿ ನಿರತರಾಗಿದ್ದರು. ಕಾಜಲ್ ರಾಘವಾನಿ, ಜೈ ಯಾದವ್ ಮುಂತಾದ ತಾರೆಯರು ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅದೇ ಸಮಯದಲ್ಲಿ, ಅವರ ಚಿತ್ರ ತಾರಿಖ್ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಇದರಲ್ಲಿ ಅವರು ನಟ ಸಮರ್ ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಆಕಾಂಕ್ಷ ತಮ್ಮ ಕೋ ಸ್ಟಾರ್‌ ಸಮರ್ ಜೊತೆಗಿನ ರಿಲೇಷನ್‌ಶಿಪ್‌ನ್ನು ಕೂಡಾ ಹೇಳಿದ್ದರು. ಚಲನಚಿತ್ರಗಳ ಜೊತೆಗೆ, ಅವರು ಅನೇಕ ಸಂಗೀತ ವೀಡಿಯೊಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಆಗಿದ್ದರು.

Leave A Reply

Your email address will not be published.