Veerappan Daughter : ವೀರಪ್ಪನ್‌ ಮಗಳು ಸಿನಿರಂಗದಲ್ಲಿ ಮಿಂಚಲು ರೆಡಿ! ʼಮಾವೀರನ್‌ ಪಿಳ್ಳೈʼ ಸಿನಿಮಾ ಮೂಲಕ ದೊಡ್ಡ ತೆರೆಗೆ ಪಾದಾರ್ಪಣೆ

Veerappan Daughter : ಕಾಡಿನ ವೀರಪ್ಪನ್‌ನ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಇಡೀ ನಮ್ಮ ದೇಶದಲ್ಲಿ ಕೇಳಿಬರುತ್ತಿದ್ದ ಹೆಸರು ಇವರದ್ದೇ. ದೇಶವನ್ನೆ ನಡುಗಿಸಿದ ವ್ಯಕ್ತಿ ವೀರಪ್ಪನ್. ಇದೀಗ ವೀರಪ್ಪನ್‌ನ ಪುತ್ರಿ ಆದ ವಿಜಯಲಕ್ಷ್ಮಿ (Veerappan Daughter) ಸಿನಿಮಾರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇವರು ʼಮಾವೀರನ್‌ ಪಿಳ್ಳೈʼ ಎಂಬ ಚಿತ್ರಕ್ಕೆ ಇವರೆ ನಾಯಕಿಯಾಗಿ ನಟಿಸಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ವು ಈಗ ಪೂರ್ಣಗೊಂಡಿದೆ, ಚಿತ್ರದ ಹಾಡುಗಳು ಕೂಡ ಬಿಡುಗಡೆಯಾಗಿದೆ.

 

ವಿಜಯಲಕ್ಷ್ಮಿ ಅವರು ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿದ್ದರು, ಇದೀಗ ರಾಜಕೀಯಾದಿಂದ ಸಿನಿಮಾರಂಗದಲ್ಲಿ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಚೆನ್ನೈ ನ ಪ್ರಸಾದ್ ಲ್ಯಾಬ್ ನಲ್ಲಿ ಸಿನೆಮಾದಹಾಡುಗಳು ಬಿಡುಗಡೆ ಆಯಿತು. ಈ ಬಿಡುಗಡೆ ಸಮಾರಂಭಕ್ಕೆ ಚಿತ್ರದ ನಿರ್ದೆಶಕರಾದ ಪೇರರಸು, ನಿರ್ಮಾಪಕ ಕೆ. ಎನ್.ಅರ್. ರಾಜ, ಹಾಗೂ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ , ನಟ ಕೂಲ್ ಸುರೇಶ್, ಆಲ್ ಪೀಪಲ್ಸ್ ಪೊಲಿಟಿಕಲ್ ಪಾರ್ಟಿಯ ಅಧ್ಯಕ್ಷೆ ರಾಜೇಶ್ವರಿ ಪ್ರಿಯ ಕೂಡ ಭಾಗವಹಿಸಿದ್ದರು.

ಸಿನಿಮಾ ಕುರಿತು ಮಾತನಾಡಿದ ವಿಜಯಲಕ್ಷ್ಮಿ ‘ನನಗೆ ಮೊದಲಿನಿಂದಲೂ ಸಿನೆಮಾದಲ್ಲಿ ನಟನೆ ಮಡಬೇಕು ಎಂದು ಆಸೆಯಿತ್ತು. ಆದರೆ ಅವಕಾಶ ಹಾಗೂ ಕಾಲ ಕೂಡಿ ಬಂದಿರಲಿಲ್ಲ. ಇದೀಗ ಒಂದೊಳ್ಳೆ ಸಿನಿಮಾಕ್ಕೆ ನಟನೆ ಮಾಡಿದ್ದಿನಿ. ಈ ಸಿನೆಮಾದ ಕಥೆ ‘ಕುಡಿತದ ಪರಿಣಾಮದ ಮೇಲೆ ಬೆಳಕು’ ಚೆಲ್ಲುವುದಾಗಿದೆ. ಗಂಡಸರ ಕುಡಿತದಿಂದ ಹೆಣ್ಣು ಮಕ್ಕಳು ಕಷ್ಟ ನೋವಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಹೆಣ್ಣು ಮಕ್ಕಳು ಕುರಿತು ಚಿತ್ರಿಸಿರುವ ಸಿನೆಮಾ ಇದಾಗಿದೆ. ಇದರಲ್ಲಿ ನಾನು ಹೆಣ್ಣು ಮಕ್ಕಳ ಜೀವನಕ್ಕೆ ಬೆಳಕು ಚೆಲ್ಲುವ ಪಾತ್ರ ವಹಿಸಿದ್ದೇನೆ.

ನಿರ್ಮಾಪಕ ರಾಜ ಅವರು ಚಿತ್ರದ ಕುರಿತು ಮಾತನಾಡಿದರು. ಗಂಡಸರ ಕುಡಿತದಿಂದ ಹೆಣ್ಣು ಮಕ್ಕಳ ಸಂಸಾರದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಅಗುವ ದುಷ್ಪರಿಣಾಮದ ಮೇಲೆ ಜಾಗೃತಿ ಮೂಡಿಸುವುದು ಈ ಚಿತ್ರವಾಗಿದೆ.

ಸಿನಿಮಾಕ್ಕೆ ಬೇಕಾಗಿರುದು ಒಂದೊಳ್ಳೆ ಕಥೆ, ಮತ್ತು ಚಿತ್ರದಲ್ಲಿ ಯಾರೂ ನಟಿಸುತ್ತಾರೆ, ಯಾರೂ ನಿರ್ದೇಶನ ಮಾಡುತ್ತಾರೆ ಎಂಬುವುದು ಮುಖ್ಯವಲ್ಲ ಎಂದರು ಚಿತ್ರದ ನಿರ್ದೇಶಕ ಪೇರರಸು. ವಿಜಯಲಕ್ಷ್ಮಿ ಅವರು ಸಿನಿಮಾಕ್ಕೆ ಬರುತಿರುವ ಕುರಿತು ಮಾತನಾಡಿದ ನಿರ್ದೇಶಕರು ನಮ್ಮ ಮುಖ್ಯಮಂತ್ರಿಯ ಮಗನೂ ಕೂಡ ಸಿನಿಮಾರಂಗಕ್ಕೆ ಹೆಚ್ಚೇ ಹಾಕಿ ಸಕ್ರಿಯರಾಗಿದ್ದಾರೆ. ಇದೀಗ ವೀರಪ್ಪನ್ ಮಗಳು ಕೂಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಾವು ಅವರನ್ನೂ ಸಿನಿಮಾರಂಗಕ್ಕೆ ಬಹಳ ಪ್ರೀತಿಯಿಂದ ಬರಮಾಡಿಕೊಳ್ಳುತಿದ್ದೇವೆ ಎಂದರು.

ಕುಡಿತದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ ಆಗಿದೆ. ಇಂದು ದೊಡ್ಡವರಷ್ಟೇ ಅಲ್ಲ, ಚಿಕ್ಕ ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ಕುಡಿತ ಜೀವನಕ್ಕೆ ದೊಡ್ಡ ಆಘಾತಕಾರಿ ಆಗಿದೆ. ‘ಮಾವೀರನ್​ ಪಿಳ್ಳೈ’ ಚಿತ್ರದಲ್ಲಿ ‘ಸಾರಾಯಂ ಅಭಯಂ’ ಎಂಬ ಹಾಡಿದ್ದು, ಈ ಹಾಡು ಕುಡಿತದ ವಿರುದ್ಧವಾಗಿದೆ. ರಾಜಕಾರಣಿಗಳು ಯಾರೂ ಕೂಡ ಈ ಕುಡಿತದ ನಿಷೇದನೆ ಬಗ್ಗೆ ಮಾತನಾಡುವುದಿಲ್ಲ, ಜನರ ಮತ ದೊರಕುವುದಿಲ್ಲ ಎಂಬ ಭಯಕ್ಕೆ ರಾಜಕಾರಣಿಗಳು ಎಲ್ಲಿಯೂ ಕುಡಿತದ ವಿಚಾರ ಮಾತನಾಡುವುದಿಲ್ಲ. ಕುಡಿತಕ್ಕೆ ಪ್ರತೀದಿನ ನೂರಾರು ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಯಾಕೆ ಯಾರೂ ಕೂಡ ಕುಡಿತವನ್ನು ನಿಷೇಧಿಸಿ ಎಂದು ಹೇಳುವುದಿಲ್ಲ. ಹೆಣ್ಣುಮಕ್ಕಳಿಗೆ ಬೇರೆ ಏನೂ ಬೇಡ ತಮ್ಮ ಗಂಡ ಕುಡಿತವನ್ನು ಬಿಡಬೇಕು, ಹಾಗಾಗೀ ಸಾರಾಯಿ, ಕುಡಿತವನ್ನು ನಿಷೇಧಿಸವೇಕು ಎಂಬುವುದು ಎಲ್ಲಾ ಹೆಣ್ಣು ಮಕ್ಕಳು ಆಸೆಯಾಗಿದೆ ಎಂದರು ನಿರ್ದೇಶಕರು.

ಈ ಚಿತ್ರದಲ್ಲಿ ಮಂಜುನಾಥ ಅವರು ಛಾಯಾಗ್ರಹಣ ಮಾಡಿದ್ದಾರೆ, ಹಾಗೂ ರವಿವರ್ಮ ಸಂಗೀತ ಮಾಡಿದ್ದಾರೆ. ಹಿನ್ನಲೆ ಸಂಗೀತ ಸಂಯೋಜಿಸಿರುವುದು ಪ್ರೇಮ್ ಅವರು. ಒಟ್ಟಾರೆ ಈ ಚಿತ್ರವು ಯಶಸ್ವಿಯಾಗಿ ಮೂಡಿಬರಲಿ ಎಂಬುವುದು ಆಶಯವಾಗಿದೆ.

ಇದನ್ನೂ ಓದಿ  : Katera: ಡಿ ಬಾಸ್ ಅಭಿನಯದ ‘ಕಾಟೇರ’ ಫಸ್ಟ್ ಲುಕ್ ರಿವೀಲ್! ಹಣೇಲಿ ಕುಂಕುಮ, ಕುತ್ತಿಗೇಲಿ ದೇವರ ರಕ್ಷೆ, ಕುರುಚಲು ಗಡ್ಡದ ದರ್ಶನ್ ಖಡಕ್ ಲುಕ್ ಹೇಗಿದೆ ಗೊತ್ತಾ?

Leave A Reply

Your email address will not be published.