Post office Saving scheme : ಕೇವಲ 333 ರೂಪಾಯಿ ಹೂಡಿಕೆ ಮಾಡಿ ಪಡೆಯಿರಿ 16ಲಕ್ಷದವರೆಗೆ ಉಳಿತಾಯ!

Post office Saving scheme : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಗೆ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಪೋಸ್ಟ್ ಆಫೀಸ್ (Post office Saving scheme)ನಲ್ಲಿದೆ.

ಹಾಗಿದ್ರೆ ಇನ್ಯಾಕೆ ತಡ ಬನ್ನಿ ಪೋಸ್ಟ್ ಆಫೀಸ್ನಲ್ಲಿರೋ ಉತ್ತಮ ಯೋಜನೆ ಬಗ್ಗೆ ತಿಳಿಯೋಣ. ಹೌದು. ಪೋಸ್ಟ್ ಆಫೀಸ್ ಆರ್ಡಿ ಖಾತೆಯನ್ನು ಸುಲಭವಾಗಿ ತೆರೆಯಬಹುದು. 10 ವರ್ಷ ತುಂಬಿದ ಯಾರಾದರೂ ಪೋಸ್ಟಲ್ ಆರ್ಡಿ ಖಾತೆಯನ್ನ ಸಹ ತೆರೆಯಬಹುದು. ಇದಕ್ಕೆ ಸರ್ಕಾರದ ಬೆಂಬಲವೂ ಇದ್ದು, ಠೇವಣಿಗಳು ಮತ್ತು ಅವುಗಳ ಮೇಲಿನ ಬಡ್ಡಿ ಆದಾಯವನ್ನ ಸರ್ಕಾರವು ಖಾತರಿಪಡಿಸುತ್ತದೆ. ಈ ಕಾರಣದಿಂದಾಗಿ ಅಪಾಯವೂ ಕಡಿಮೆ ಇರುತ್ತದೆ.

ಇಂತಹ ಕಡಿಮೆ ಹೂಡಿಕೆ ಜೊತೆಗೆ ಹೆಚ್ಚು ಲಾಭಗಳಿಸುವ ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿದೆ. ಅದರಂತೆ ಇರುವ ಒಂದು ಉತ್ತಮ ಯೋಜನೆ ಬಗ್ಗೆ ತಿಳಿಯೋಣ. ಈ ಯೋಜನೆಯಲ್ಲಿ ಪ್ರತಿ ತಿಂಗಳು 10,000 ರೂಪಾಯಿ ಅಥವಾ 333 ರೂಪಾಯಿ ಹೂಡಿಕೆ ಮಾಡಿದರೆ, ನೀವು ಉತ್ತಮ ಲಾಭವನ್ನ ಪಡೆಯಬಹುದಲ್ಲದೆ, ಅಂಚೆ ಆರ್ಡಿಗಳ ಮೇಲೆ ಚಕ್ರಬಡ್ಡಿ ಕೂಡ ಬರುತ್ತದೆ.

ಈ ಯೋಜನೆಯೊಂದಿಗೆ ಹೂಡಿಕೆದಾರರು 10 ವರ್ಷಗಳ ನಂತರ ಸುಮಾರು 16 ಲಕ್ಷ ರೂ.ಗಳ ಆದಾಯವನ್ನು ಪಡೆಯಬಹುದು. 10 ವರ್ಷಗಳವರೆಗೆ 12 ಲಕ್ಷ ರೂ.ಗಳನ್ನ ನೀಡಿದರೆ, ಈ ಯೋಜನೆಯ ರಿಟರ್ನ್ ರೂ. 4.26 ಲಕ್ಷ ರೂಪಾಯಿಯಾಗುತ್ತದೆ. ಒಟ್ಟಾರೇ, 16 ಲಕ್ಷ ಸಿಗುತ್ತದೆ. ಹೀಗಾಗಿ, ಪೋಸ್ಟ್ ಆಫೀಸ್ ನಾ ಉತ್ತಮ ಸೇವಿಂಗ್ ಸ್ಕೀಮ್ ನಲ್ಲಿ ಉಳಿತಾಯ ಮಾಡಿ ಜೀವನ ಸುಮಧುರಗೊಳಿಸುವುದು ಉತ್ತಮ.

Leave A Reply

Your email address will not be published.