Reservation: ಮೀಸಲಾತಿಗಳಿಗೆ ಸಂಪುಟ ಅಸ್ತು! SC STಗೆ ಭರ್ಜರಿ ಗಿಫ್ಟ್. ಪಂಚಮಸಾಲಿ, ಒಕ್ಕಲಿಗರಿಗೆ ಒಲಿಯಿತು ಅದೃಷ್ಟ! ಮುಸ್ಲಿಂ ಮೀಸಲಾತಿಗೆ ಮಾತ್ರ ಕೊಕ್!
Reservation :ವಿಧಾನಸಭೆ ಚುನಾವಣೆ(Assembly Election)ಮುನ್ನ ರಾಜ್ಯ ಬಿಜೆಪಿ(BJP) ಸರ್ಕಾರವು ಸಮುದಾಯಗಳ ಓಲೈಕೆಗಾಗಿ ಮೀಸಲಾತಿ ಅಸ್ತ್ರಗಳನ್ನು ಬಳಸಿದೆ. ಎಸ್ಸಿ, ಎಸ್ಟಿ, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಮುಸ್ಲಿಂ ಸಮುದಾಯಕ್ಕೆ ಮಾತ್ರ ಕೊಕ್ ನೀಡಿದೆ.
ಹೌದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(CM Bommai) ಅವರ ಕೊನೆಯ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಬೊಮ್ಮಾಯಿ ಸರ್ಕಾರ ಎಸ್ಸಿ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿದೆ. ಈ ಹಿಂದೆ ಘೋಷಣೆ ಮಾಡಿದಂತೆ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ, 2 ಡಿ ಪ್ರವರ್ಗದ ಮೂಲಕ 7% ಮೀಸಲಾತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಒಕ್ಕಲಿಗರಿಗೆ 6% ಮೀಸಲಾತಿ ನೀಡಲಾಗಿದೆ. ಆದರೆ ಹಿಂದುಳಿದ ವರ್ಗದಿಂದ ಮುಸ್ಲಿಂ ಮೀಸಲಾತಿಗೆ ಕೋಕ್ ನೀಡಲಾಗಿದೆ.
ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ಮುಸ್ಲಿಮರಿಗೆ 2ಬಿ ಅಡಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದೆ. ಆದರೆ ಅವರಿಗೆ ಆರ್ಥಿಕವಾಗಿ ಹಿಂದುಳಿದವರ ವರ್ಗದಲ್ಲಿ (EWS) ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಎರಡು ಬೃಹತ್ ಸಮುದಾಯಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಸರ್ಕಾರ ಮಾಡಿದೆ.
ಮುಸ್ಲಿಂ ಮೀಸಲಾತಿಗೆ ಕೊಕ್ ಕೊಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ (EWS) ಮಾಡಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಜಯಪ್ರಕಾಶ್ ಹೆಗಡೆ(Jayaprakash Hegde) ವರದಿ ಪ್ರಕಾರ ಬೆಳಗಾವಿ(Belagavi) ಅಧಿವೇಶನದಲ್ಲೇ ಇದನ್ನ ನಾವು ತಂದಿದ್ದೇವೆ ಎಂದು ಮಾಹಿತಿ ನೀಡಿದರು. 2 d ಯನ್ನು 2 c ಮಾಡಿದ್ದೇವೆ, 2b ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಇಲ್ಲ. ಆಂದ್ರಪ್ರದೇಶ ಅದನ್ನ ವಜಾ ಗೊಳಿಸಲಾಗಿತ್ತು. ಅದ್ರೆ ಅವರಿಗೆ ಅನ್ಯಾಯವಾಗದಂತೆ Ews ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ. ಎಸ್ಸಿ ಮೀಸಲಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಗುಂಪು ಒಂದರಲ್ಲಿ ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ (Reservation), ಗುಂಪು 2 ರಲ್ಲಿ ಆದಿಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3ರಲ್ಲಿ ಬಂಜಾರ, ಬೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಕಾಡು ಗೊಲ್ಲರ ಬಗ್ಗೆ ಅಭಿಪ್ರಾಯ ತಿಳಿಸಲು ಕೇಂದ್ರ ಸೂಚಿಸಿದೆ. ಕೋಲಿ ಸಮುದಾಯದ್ದೂ ಕೂಡ ಕೇಂದ್ರದಲ್ಲಿ ಬಾಕಿ ಇದೆ. ಮುಂದಿನ ನಿರ್ಣಯ ಕೈಗೊಳ್ಳಲಾಗಿದೆ. ST ಗೆ ಕಾಡು ಕುರುಬ, ಗೊಂಡ ಕುರುಬ ಸೇರಿಸೋ ಬಗ್ಗೆ ಚರ್ಚೆಯಾಗಿದೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಶಿಫಾರಸ್ಸು ಮಾಡಿ ಕ್ರೈಟೀರಿಯಾಗೆ ಇಲಾಖೆಗೆ ನೀಡಲಾಗಿದೆ. ಒಳ ಮೀಸಲಾತಿ ನೀಡಲು ರೆಕಮೆಂಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೀಸಲಾತಿಯ ಸಂಕ್ಷಿಪ್ತ ವಿವರ ಇಲ್ಲಿದೆ:
ಇತರ ಸಮುದಾಯದಗಳಿಗೆ 32% ಮೀಸಲಾತಿ ಹಂಚಿಕೆ
ಪ್ರವರ್ಗ 2Aಗೆ 15% ಮೀಸಲಾತಿ, ಲಿಂಗಾಯಿತ ಸಮುದಾಯಕ್ಕೆ ( 2D ) 7% ಮೀಸಲಾತಿ, ಒಕ್ಕಲಿಗ ಸಮುದಾಯಕ್ಕೆ (ಪ್ರವರ್ಗ 2ಸಿ) 6 % ಮೀಸಲಾತಿ, ಪ್ರವರ್ಗ 1ಕ್ಕೆ 4 % ಮೀಸಲಾತಿ
ದಲಿತ ಒಳ ಮೀಸಲಾತಿ ಒಟ್ಟು 17% ಹಂಚಿಕೆ:
ದಲಿತ ಎಡ ಸಮುದಾಯಕ್ಕೆ (ಮಾದಿಗ + ) 6% ಮೀಸಲಾತಿ
ದಲಿತ ಬಲ ಸಮುದಾಯಕ್ಕೆ ( ಹೊಲೆಯ + ) 5.5% ಮೀಸಲಾತಿ, ಬೋವಿ, ಲಂಬಾಣಿ ಸಮುದಾಯಕ್ಕೆ (sc) 4.5% ಮೀಸಲಾತಿ, ಅಲೆಮಾರಿ ಸಣ್ಣ ಜಾತಿಗಳಿಗೆ 1% ಮೀಸಲಾತಿ
ಇನ್ನು ಮೀಸಲಾತಿ ವಿಚಾರವಾಗಿ ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥಶ್ರೀ(NirmalanandaNatha Shree) ಹೇಳಿಕೆ ನೀಡಿದ್ದು, 2ಸಿ ಅಡಿ ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ ನೀಡಿದ್ದನ್ನು ಸ್ವಾಗತಿಸುವೆ. ಜನಸಂಖ್ಯೆಗೆ ಅನುಗುಣವಾಗಿ ಶೇಕಡಾ 12ರಷ್ಟು ಮೀಸಲಾತಿ (reservation) ಬೇಕಿತ್ತು. ಆದರೆ ಸರ್ಕಾರ 2ಸಿ ಅಡಿ ಶೇಕಡಾ 6ರಷ್ಟು ಮೀಸಲಾತಿ ನೀಡಿದೆ. ಶೇಕಡಾ 2ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದನ್ನು ಸ್ವಾಗತಿಸುತ್ತೇವೆ. ಕಾನೂನು, ಸಂವಿಧಾನದ ಚೌಕಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದೆ. ಆದಷ್ಟು ಬೇಗ ಮೀಸಲಾತಿ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದರು.