CPRI Recruitment 2023 : ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಕೇಂದ್ರೀಯ ಶಕ್ತಿ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ : ಏ.14
CPRI Recruitment 2023 :ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಉದ್ಯೋಗವಕಾಶವಿದ್ದು (CPRI Recruitment 2023), ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು: ಕೇಂದ್ರೀಯ ಶಕ್ತಿ ಸಂಶೋಧನಾ ಸಂಸ್ಥೆ (CPRI)
ಹುದ್ದೆಗಳ ಸಂಖ್ಯೆ: 99 ಹುದ್ದೆ
ಇಂಜಿನಿಯರಿಂಗ್ ಅಧಿಕಾರಿ: 40 ಹುದ್ದೆ
ವೈಜ್ಞಾನಿಕ ಸಹಾಯಕ : 4 ಹುದ್ದೆ
ಇಂಜಿನಿಯರಿಂಗ್ ಸಹಾಯಕ : 13 ಹುದ್ದೆ
ತಂತ್ರಜ್ಞ : 24 ಹುದ್ದೆ
ಸಹಾಯಕ : 18 ಹುದ್ದೆ
ಹುದ್ದೆಯ ಹೆಸರು: ಇಂಜಿನಿಯರಿಂಗ್ ಅಧಿಕಾರಿ, ತಂತ್ರಜ್ಞ
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ:
ಆಸಕ್ತ ಅಭ್ಯರ್ಥಿಗಳು CPRI ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ಮಿತಿಯನ್ನು ಹೊಂದಿರಬೇಕು
ವಯೋಮಿತಿ ಸಡಿಲಿಕೆ:
ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ:
ಪ್ರಸ್ತುತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ :
ಇಂಜಿನಿಯರಿಂಗ್ ಅಧಿಕಾರಿ ಹುದ್ದೆಗಳಿಗೆ : 44900 ರೂ.
ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ : 35400 ರೂ.
ಇಂಜಿನಿಯರಿಂಗ್ ಸಹಾಯಕ, ತಂತ್ರಜ್ಞ ಹುದ್ದೆಗಳಿಗೆ : 19900 ರೂ.
ಸಹಾಯಕ ಹುದ್ದೆಗಳಿಗೆ : 25500 ರೂ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25-ಮಾರ್ಚ್-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-ಏಪ್ರಿಲ್-2023.
CPRI ನೇಮಕಾತಿ 2023 ಕ್ಕೆ ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಬೇಕು. ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಹಾಗೆಯೇ ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕು.