Aryavardhan Guruji : Bigg Boss ನಿಂದ ನನಗೆ ಮೋಸ ಆಗಿದೆ!! ಗುರುಜಿ ಬಾಳಲ್ಲಿ ಅಂತದೇನಾಯ್ತು?

Aryavardhan Guruji: ‘ಬಿಗ್ ಬಾಸ್ ಕನ್ನಡ ಓಟಿಟಿ 1’ (bigg boss kannada OTT) ಕಾರ್ಯಕ್ರಮದಲ್ಲಿ ಪ್ರಪ್ರಥಮ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ (Aryavardhan Guruji) ಶೋ ಗೆ ಕಾಲಿಟ್ಟರು. ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಶೋನಲ್ಲಿ ಟಾಪ್ 4 ಹಂತ ತಲುಪಿ ನೇರವಾಗಿ ‘ಬಿಗ್ ಬಾಸ್ ಕನ್ನಡ 9’ (Bigg Boss Kannada Season 9) ಕಾರ್ಯಕ್ರಮಕ್ಕೆ ಕಾಲಿಟ್ಟರು. ಗುರೂಜಿ ಎರಡೂ ಶೋಗಳಲ್ಲಿ ‘ಕಂಟೆಂಟ್ ಕಿಂಗ್’ ಆಗಿದ್ದರು. ಘಟಾನುಘಟಿ ಸ್ಪರ್ಧಿಗಳೊಡನೆ ಸ್ಪರ್ಧಿಸಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಟಾಪ್ 6 ಹಂತಕ್ಕೆ ಬರುವಲ್ಲಿ ಮಾತ್ರ ಯಶಸ್ವಿಯಾದರು. ಆ ನಂತರ ಎಲಿಮಿನೇಟ್ ಆಗಿದ್ದು, ಇದೀಗ ಗುರೂಜಿ ಹೊಸ ಬಾಂಬ್ ಸಿಡಿಸಿದ್ದಾರೆ.

 

ಬಿಗ್ ಬಾಸ್ ನನಗೆ ಮೋಸ ಮಾಡಿದೆ, ಬಿಗ್ ಬಾಸ್ ನಿಂದಾಗಿ ನನಗೆ ಅದೆಷ್ಟೋ ಹಣ ಲಾಸ್ ಆಗಿದೆ. ಹೇಗೋ ಆರಾಮ್ ಆಗಿ ಇದ್ದೆ. ಸುಮ್ನೆ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ನಾನು ಕೆಲಸದಾಳುವಿನ ಹಾಗೇ ಮನೆಕೆಲಸ ಮಾಡಿದ್ದೀನಿ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.

ಯುಗಾದಿ ಹಬ್ಬದ (ugadi festival) ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಗುರೂಜಿ, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಿಗ್ ಬಾಸ್ ಬಗ್ಗೆ ಹರಿಹಾಯ್ದಿದ್ದಾರೆ. ಬಿಗ್ ಬಾಸ್ ಮನೆಗೆ ನಾನು ಹೋಗಲೇಬಾರದಿತ್ತು. ಹೋಗಿ ತಪ್ಪು ಮಾಡಿದೆ. ನಾನು ಪರಮೇಶ್ವರ್ ಗುಂಡ್ಕಲ್ ಅವರಿಗೋಸ್ಕರ ಹೋದೆ. ಆದರೆ, ನನಗೆ ಬಿಗ್ ಬಾಸ್ ಮೋಸ ಮಾಡಿದೆ. ನಾನೇ ಗೆಲ್ಲಬೇಕು ಅಂತ ಎಲ್ಲಾರು ಅಂದುಕೊಂಡಿದ್ದರು. ನಾನು ದೊಡ್ಮನೆಯಲ್ಲಿ ತುಂಬಾ ಚೆನ್ನಾಗಿ ಆಟ ಆಡಿದ್ದೀನಿ ಆದ್ರೆ ಏನು ಯೂಸ್ ಇಲ್ಲ ಅಂತ ತುಂಬಾ ನೋವಿನಿಂದಲೇ ಹೇಳಿಕೊಂಡಿದ್ದಾರೆ.

ವೀಕೆಂಡ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಕರೇ (anchor) ಇರಬಾರದು. ಯಾಕೆ ಸುಮ್ಮನೇ ನಿರೂಪಕರು ಎಂದು ಗುರೂಜಿ ಹೇಳಿದರು. ನಂತರ ಸಿನಿರಂಗಕ್ಕೆ ಎಂಟ್ರಿ ಕೊಡುವ ಆಸೆ ಇದೆ ಎಂದು ಹೇಳಿದ್ದಾರೆ. ಒಳ್ಳೆ ಸಂದೇಶ ಸಾರುವ ಸಿನಿಮಾಗಳು ಸಿಕ್ಕರೆ ನಟಿಸ್ತೀನಿ. ರಾಜಕೀಯವಾಗಿ ಎಂಟ್ರಿ ಕೊಡೋ ಆಸೆ ಇದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದರು.

Leave A Reply

Your email address will not be published.