Eye Dark Circles: ಕಣ್ಣಿನ ಕೆಳಭಾಗದ ವರ್ತುಲ ಕಪ್ಪಾಗಿದೆಯೇ? ಇದಕ್ಕೆ ಮುಖ್ಯ ಕಾರಣವೇನು? ಸರಿಪಡಿಸುವ ರೀತಿ ಹೇಗೆ?
Eye Dark Circles : ಕಣ್ಣುಗಳ (Eyes ) ಗಳ ಕೆಳಗಿರುವ ಕಪ್ಪು ವಲಯಗಳು ಒಂದು ದೊಡ್ಡ ಸಮಸ್ಯೆ (problems ) ಆಗಿದೆ . ಏಕೆಂದರೆ ಅವುಗಳು ನಿಮ್ಮ ಮುಖದ ಅಂದವನ್ನು ಕೆಡಿಸುತ್ತದೆ ಮತ್ತು ದಣಿದಂತೆ ಕಾಣುವಂತೆ ಮಾಡುತ್ತದೆ. ಕಣ್ಣುಗಳ ಕೆಳಗಿರುವ ಚರ್ಮವು ಕಪ್ಪಾಗುವುದು, ರಕ್ತನಾಳಗಳು ಹೆಚ್ಚು ಗೋಚರವಾಗುವುದು ಅಥವಾ ಕಣ್ಣುಗಳ ಉಬ್ಬುವಿಕೆಯಿಂದ ಕಣ್ಣುಗಳ ಕೆಳಗೆ ಕಪ್ಪು(Eye Dark Circles) ನೆರಳುಗಳು ಗೋಚರಿಸುವುದನ್ನು ಡಾರ್ಕ್ ಸರ್ಕಲ್ (Dark Circles) ಎನ್ನುತ್ತಾರೆ.
ಸದ್ಯ ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಸೌಂದರ್ಯವರ್ಧಕ ಚಿಕಿತ್ಸೆಗಳು ಲಭ್ಯವಿದ್ದರೂ, ಮೊದಲು ಅವುಗಳಿಗೆ ಕಾರಣ ಏನು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು . ಜೀವನಶೈಲಿ, ಆರೋಗ್ಯದ ಪರಿಸ್ಥಿತಿಗಳು ಮುಂತಾದ ಕಾರಣಗಳಿಂದ ಡಾರ್ಕ್ ಸರ್ಕಲ್‌ಗಳು ಉಂಟಾಗಬಹುದು. ಈ ಕಣ್ಣಿನ ಕೆಳಭಾಗದ ಕಪ್ಪು ವರ್ತುಲಗಳು ಸಾಮಾನ್ಯವಾಗಿ ಗಂಭೀರವಾದ ವೈದ್ಯಕೀಯ ಸಮಸ್ಯೆಯಲ್ಲದಿದ್ದರೂ, ಅದು ನಮ್ಮ ನೋಟವನ್ನು ಕುಗ್ಗಿಸುವಂತೆ ಮಾಡುತ್ತದೆ. ಈ ಡಾರ್ಕ್ ಸರ್ಕಲ್‌ಗಳಿಗೆ ಕಾರಣಗಳು ಏನೆಂಬುವುದನ್ನು ತಿಳಿದುಕೊಳ್ಳುವ ಮೂಲಕ ಅವುಗಳಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಸೌಂದರ್ಯಶಾಸ್ತ್ರಜ್ಞೆ ಹಾಗೂ ಕಾಮೆಟಾಲಜಿಸ್ಟ್ ಮೇಧಾ ಸಿಂಗ್ ಪ್ರಕಾರ ಡಾರ್ಕ್ ಸರ್ಕಲ್‌ಗಳಿಗೆ ಕಾರಣಗಳು ಇಂತಿವೆ:
ನಿದ್ರಾಹೀನತೆಯು ನಿಮ್ಮ ಚರ್ಮವನ್ನು ಮಂದ ಮತ್ತು ತೆಳುವಾಗಿಸಲು ಕಾರಣವಾಗಬಹುದು.ಇನ್ನು ನೀವು ರಕ್ತಹೀನತೆ ಅಥವಾ ಕಬ್ಬಿಣದ ಕೊರತೆಯನ್ನು ಹೊಂದಿದ್ದರೆ, ನೀವು ಡಾರ್ಕ್ ಸರ್ಕಲ್ ಮತ್ತು ನಿಮ್ಮ ಕಣ್ಣುಗಳ ಕೆಳಗೆ ಊತವನ್ನು ಹೊಂದುವ ಉತ್ತಮ ಅವಕಾಶವಿದೆ. ನಿಮ್ಮಲ್ಲಿ ಕಬ್ಬಿಣದ ಕೊರತೆಯಿದ್ದರೆ, ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯು ಕಡಿಮೆಯಾಗುತ್ತದೆ, ಇದು ಕಣ್ಣಿನ ಪ್ರದೇಶದಲ್ಲಿ ಇರುವ ರಕ್ತನಾಳಗಳು ಹೆಚ್ಚು ಗೋಚರಿಸುವಂತೆ ಮಾಡುತ್ತದೆ. ಇನ್ನು ವಿಟಮಿನ್ ಬಿ 12 ನಂತಹ ಕೆಲವು ಜೀವಸತ್ವಗಳು ದೇಹದಲ್ಲಿ ಕಡಿಮೆಯಾದಾಗ, ನೀವು ಕಬ್ಬಿಣದ ಕೊರತೆಯನ್ನು ಹೊಂದುವ ಸಾಧ್ಯತೆಯಿದೆ.
ಅದಲ್ಲದೆ ಹೆಚ್ಚು ಮೊಬೈಲ್, ಟಿವಿಗಳನ್ನು ನೋಡುವುದು, ಮಾನಸಿಕ ಒತ್ತಡ ಹಾಗೂ ಕಣ್ಣುಗಳನ್ನು ಸರಿಯಾಗಿ ತೊಳೆಯದಿದ್ದರೂ ಈ ಡಾರ್ಕ್ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿದಿನ ರಾತ್ರಿ ಕಣ್ಣುಗಳಿಗೆ ಆರ್ಗನ್ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದು, ವಾರಕ್ಕೆ ಒಂದು ಬಾರಿ ಫೇಸ್ ಮಾಸ್ಕ್ ಹಾಕುವುದು, ಪ್ರತಿನಿತ್ಯ ಒಳ್ಳೆಯ ನಿದ್ರೆಯನ್ನು ಮಾಡುವ ಮೂಲಕ ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಬಹುದು.”
ಇನ್ನು ಉತ್ತಮವಾದ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸುಲಭವಾದ ಕ್ರಮಗಳನ್ನು ಅನುಸರಿಸಬೇಕು. ಅಲೋವೆರಾ ಪ್ಯಾಕ್‌ಗಳನ್ನು ಪ್ರತಿದಿನ ಹದಿನೈದು ನಿಮಿಷಗಳ ಕಾಲ ಕಣ್ಣುಗಳ ಕೆಳಭಾಗ ಮತ್ತು ಕಣ್ಣಿನ ಮೇಲೆ ಹಚ್ಚಬೇಕು. ನಂತರ ಸೀರಮ್‌ನ್ನು ಹಾಗೂ ಮಾಯಿಶ್ಚರೈಸರ್‌ಗಳನ್ನು ಹಚ್ಚಬೇಕು. ಈ ಕಟ್ಟುಪಾಡುಗಳನ್ನು ಅನುಸರಿಸುವ ಮೂಲಕ ಮುಖದ ಡಾರ್ಕ್ ಸರ್ಕಲ್‌ಗಳನ್ನು ಗುಣಪಡಿಸಬಹುದು.
ಇತರ ಪರಿಹಾರಗಳು :
ಪುಡಿಮಾಡಿದ ಪುದಿನಾ ಎಲೆಗಳನ್ನು ಕೆಲವು ಹನಿ ನೀರಿನೊಂದಿಗೆ ಮಿಶ್ರಣ ಮಾಡಿ. ನಿಮ್ಮ ಕಣ್ಣಿನ ಕೆಳಗಿನ ಪ್ರದೇಶಕ್ಕೆ ಪೇಸ್ಟ್ ಅನ್ನು ಅನ್ವಯಿಸಿ. 10 ನಿಮಿಷಗಳ ಕಾಲ ಅದನ್ನು ಇರಿಸಿ. ರಾತ್ರಿ ಪ್ರತಿ ಮಲಗುವ ಮುನ್ನ ಇದನ್ನು ಮಾಡಿ.
ಎರಡು ತಾಜಾ ಹತ್ತಿ ಉಂಡೆಗಳನ್ನು ತೆಗೆದುಕೊಂಡು ರೋಸ್ ವಾಟರ್‌ನಲ್ಲಿ ನೆನೆಸಿ. ನೆನೆಸಿದ ಹತ್ತಿ ಉಂಡೆಗಳನ್ನು ತೆಗೆದುಕೊಂಡು ನಿಮ್ಮ ಕಣ್ಣುಗಳ ಕೆಳಗೆ ಇರಿಸಿ. ಸುಮಾರು 15 ನಿಮಿಷಗಳ ಕಾಲ ಇರಿಸಿ.
ಹಸಿ ಸೌತೆಕಾಯಿ ಟೊಮೇಟೊವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ನಂತರ ಚೂರುಗಳಾಗಿ ಕತ್ತರಿಸಿ. ಚೂರುಗಳನ್ನು ಪ್ರತಿದಿನ 10-15 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ.
ಇನ್ನುಳಿದಂತೆ ಸರಿಯಾದ ನಿದ್ದೆ, ಪೌಷ್ಟಿಕ ಆಹಾರ ಸೇವನೆ, ಬಿಸಿ ನೀರಿನಿಂದ ಮುಖದ ರಕ್ಷಣೆ ಮಾಡುವುದು ಸೂಕ್ತ.
ಇದನ್ನೂ ಓದಿ: back pain: ಬೆನ್ನುನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲವೇ? ಈ ಮನೆಮದ್ದುಗಳ ಸಲಹೆಗಳನ್ನು ಪಾಲಿಸಿ