TATA ನೆಕ್ಸಾನ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿವೆ ಬರೋಬ್ಬರಿ ನಾಲ್ಕು ಕಾರುಗಳು! ಯಾವುದೆಲ್ಲ?
Tata nexon: ದೇಶದ ಬಹುತೇಕ ವಾಹನ ತಯಾರಿಕಾ ಕಂಪನಿಗಳು ವಿಭಿನ್ನ ವಾಹನಗಳ ಉತ್ಪಾದನೆಯತ್ತ ಮುಖ ಮಾಡಿದ್ದು, ಅದರಲ್ಲೂ ವಾಹನದ ಬೆಲೆಯಲ್ಲಿ ಪೈಪೋಟಿ ನಡೆಯುತ್ತಿದೆ. ಹೊಸ ವಾಹನಗಳನ್ನು ಪರಿಚಯಿಸಲು ಹಲವು ಹೊಸ ಕಂಪೆನಿಗಳು ಮುಂದಾಗುತ್ತಿವೆ.
ಇನ್ನು ಟಾಟಾ ನೆಕ್ಸಾನ್ (Tata nexon) ಕಾಂಪ್ಯಾಕ್ಟ್ ಎಸ್‌ಯುವಿ (SUV Car)ವಿಭಾಗದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದ್ದು, ಇದರ ಕೈಗೆಟುಕುವ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಪ್ರತಿಯೊಬ್ಬ ಗ್ರಾಹಕರ ಮನಸ್ಸಿಗೆ ಹಿಡಿಸುತ್ತದೆ. ಆದರೆ ಇದೀಗ ನೆಕ್ಸಾನ್‌ಗೆ ಭಾರತದ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡಲು ಹ್ಯುಂಡೈ, ಕಿಯಾ, ಟೊಯೊಟಾ ಹಾಗೂ ಮಾರುತಿ ಸುಜುಕಿ ಎಸ್‌ಯುವಿಗಳು ಬಿಡುಗಡೆಯಾಗಲು ಸಿದ್ಧವಾಗುತ್ತಿವೆ.
ಇನ್ನು ಕಿಯಾ, ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮಾರಾಟ ಮಾಡುತ್ತಿದೆ. ಮುಂಬರುವ ವರ್ಷಗಳಲ್ಲಿ ಅಂದರೆ, 2025ರೊಳಗೆ ‘AY’ ಎಸ್‌ಯುವಿಯನ್ನು ಬಿಡುಗಡೆಗಳಿಸಲು ಸಿದ್ಧತೆ ನಡೆದಿದೆ. ಇದು ಆಫ್-ರೋಡ್ ಕಾರಿನ ಲುಕ್ ಹೊಂದಿರಲಿದ್ದು, ಹೊರಭಾಗ ಹಾಗೂ ಒಳಭಾಗವು ಆಕರ್ಷಕ ವಿನ್ಯಾಸವನ್ನು ಪಡೆದಿರಲಿದೆ. ಈ ಕಿಯಾ ‘AY’ ಎಸ್‌ಯುವಿ ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಪವರ್ ಟ್ರೈನ್ ಆಯ್ಕೆಯಲ್ಲಿ ಬರಬಹುದು.
ಅದಲ್ಲದೆ ಹ್ಯುಂಡೈ (Hyundai) , ಜಾಗತಿಕವಾಗಿ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಂಪನಿಯು ಗ್ರ್ಯಾಂಡ್ ಐ10 ನಿಯೋಸ್ ಹಾಗೂ ಔರಾ ಪ್ಲಾಟ್‌ಫಾರ್ಮ್ ಆಧರಿಸಿ, ತಯಾರಿಸುತ್ತಿರುವ ಹೊಸ ಮೈಕ್ರೋ ಎಸ್‌ಯುವಿ, ಇದು 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 ಸ್ವೀಡ್ MT ಅಥವಾ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.
ಅದಲ್ಲದೆ ಜಪಾನಿನ ಪ್ರಮುಖ ವಾಹನ ತಯಾರಕ ಟೊಯೊಟಾ, ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದೆ. ಅದರ ಜಾಗವನ್ನು ತುಂಬಲು ಮುಂದಿನ ವರ್ಷದ (2024) ಪ್ರಾರಂಭದಲ್ಲಿ ಕಂಪನಿಯು ತನ್ನೊಂದಿಗೆ ಸಹಭಾಗಿತ್ವ ಹೊಂದಿರುವ ಮಾರುತಿ ಸುಜುಕಿಯ ಬಹುಬೇಡಿಕೆಯ ಫ್ರಾಂಕ್ಸ್ ಆಧಾರಿತ ‘ಕೂಪ್’ ಎಸ್‌ಯುವಿಯನ್ನು ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇದು ಕೂಡ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಟಾಟಾ ನೆಕ್ಸಾನ್‌ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಮಾರುತಿ ಸುಜುಕಿಯ ಬಹುನೀರಿಕ್ಷಿತ ಫ್ರಾಂಕ್ಸ್ ಎಸ್‌ಯುವಿ ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ 15,500ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಆಸಕ್ತ ಗ್ರಾಹಕರು ರೂ.11,000 ಪಾವತಿಸಿ, ಬುಕ್ ಮಾಡಬಹುದು. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್. 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಹ್ಯುಂಡೈ, ಕಿಯಾ, ಟೊಯೊಟಾ ಹಾಗೂ ಮಾರುತಿ ಸುಜುಕಿಯ ಪ್ರತಿಸ್ಪರ್ಧಿಯಾಗಿರುವ ಟಾಟಾ ನೆಕ್ಸಾನ್ ಬಗ್ಗೆ ಮಾತನಾಡುವುದಾದರೆ, ಇದು ರೂ.7.80 ಲಕ್ಷದಿಂದ ರೂ.14.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.2-ಲೀಟರ್, ಥ್ರೀ-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 120 PS ಪವರ್ ಹಾಗೂ 170 Nm ಪೀಕ್ ಟಾರ್ಕ್, 1.5-ಲೀಟರ್, ಫೋರ್ ಸಿಲಿಂಡರ್ ಡಿಸೇಲ್ ಎಂಜಿನ್ 110 PS ಪವರ್, 260 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ
ಇನ್ನು 6-ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 6-ಸ್ವೀಡ್ AMT ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಟಾಟಾ ನೆಕ್ಸಾನ್ ಇದು 24.07 kmpl ಮೈಲೇಜ್ ನೀಡಲಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯೂಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಇನ್ನು, ಟಾಟಾ ನೆಕ್ಸಾನ್ ಇವಿ ಬಗ್ಗೆ ಮಾತನಾಡುವುದಾದರೆ, ರೂ.14.49 ಲಕ್ಷದಿಂದ ರೂ.17.19 ಲಕ್ಷ ಬೆಲೆಯಲ್ಲಿ ಸಿಗಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್ ನೀಡಲಿದೆ.
ಒಟ್ಟಾರೆ, ಮುಂದಿನ ಒಂದೆರಡು ವರ್ಷದಲ್ಲಿ ಟಾಟಾದ ನೆಕ್ಸಾನ್ ಪ್ರತಿಸ್ಪರ್ಧಿಯಾಗಿ ವಿವಿಧ ಕಾರುಗಳು ಬರಲಿದ್ದು, ಮುಂದೆ ಜಾಗತಿಕ ಮಾರುಕಟ್ಟೆಯಲ್ಲಿ ಕಾರುಗಳ ಆಯ್ಕೆಗೆ ಸಾಕಷ್ಟು ಅವಕಾಶಗಳಿದ್ದು, ಕಂಪನಿ ನೀಡುವ ಉತ್ಪನ್ನದ ಆಧಾರದ ಮೇಲೆ ಕಂಪನಿ ಗೆಲುವು ನಿರ್ಧಾರ ಆಗಲಿರುವುದು ಖಚಿತ.
ಇದನ್ನೂ ಓದಿ: 2024 Hero Karizma : ಅತ್ಯಧಿಕ ಪವರ್, 210cc ಎಂಜಿನ್ ನೊಂದಿಗೆ Karizma ಪುನರಾಗಮನ !!