Jio and Cricket : ಜಿಯೋ ಕ್ರಿಕೆಟ್ ಪ್ರಿಯರಿಗೆ ಇಲ್ಲಿದೆ ಇಂಟೆರೆಸ್ಟಿಂಗ್ ನ್ಯೂಸ್!!

Jio and Cricket : ರಿಲಯನ್ಸ್‌ ಜಿಯೋ ತನ್ನ ಬಳಕೆದಾರರಿಗೆ ಹೊಸ ಕ್ರಿಕೆಟ್ ಯೋಜನೆಗಳನ್ನು (Jio and Cricket) ಲಾಂಚ್‌ ಮಾಡಿದ್ದು, ಕ್ರಿಕೆಟ್ ಪ್ರಿಯರಿಗೆ ಇನ್ನಷ್ಟು ಹುರುಪು ತಂದಿದೆ. ಅಂತೆಯೇ, ಜಿಯೋ ಬಳಕೆದಾರರು ಎಲ್ಲಾ ಕ್ರಿಕೆಟ್ (Cricket) ಪ್ಲ್ಯಾನ್‌ಗಳು ಟ್ರೂಲಿ ಅನಿಯಮಿತ TRUE-5G ಡೇಟಾದೊಂದಿಗೆ ಪೋನಿನಲ್ಲಿ 4K ಸ್ಪಷ್ಟತೆಯಲ್ಲಿ ಬಹು ಕ್ಯಾಮೆರಾ ಕೋನಗಳ ಮೂಲಕ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

 

ಹೊಸ ರಿಚಾರ್ಜ್ ಯೋಜನೆಯಿಂದ ಗ್ರಾಹಕರಿಗೆ 3 GB/ದಿನ ಜೊತೆಗೆ ಹೆಚ್ಚುವರಿ ಉಚಿತ ಡೇಟಾ ವೋಚರ್ಗಳು ಜಿಯೋ ಬಳಕೆದಾರರಿಗೆ ಅಡೆತಡೆಯಿಲ್ಲದ ಕ್ರಿಕೆಟ್ ವೀಕ್ಷಣೆಯ ಅನುಭವ ನೀಡಲಿದೆ.

ಕ್ರಿಕೆಟ್-ಯೋಜನೆಗಳ ಕುರಿತು ಮಾತನಾಡಿದ ಜಿಯೋ (Jio offers) ಕಂಪನಿ ‘ಜಿಯೋದಲ್ಲಿ, ನಮ್ಮ ಗ್ರಾಹಕರಿಗೆ ಅತ್ಯುತ್ತಮ ಕ್ರೀಡಾ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಭಾರತದಲ್ಲಿ ಕ್ರಿಕೆಟ್ ಉತ್ಸಾಹವನ್ನು ನಾವು ಅರ್ಥಮಾಡಿಕೊಂಡು ಈ ವಿಶೇಷ ಯೋಜನೆಗಳು ಮತ್ತು ಕೊಡುಗೆಗಳನ್ನು ವಿನ್ಯಾಸಗೊಳಿಸಿದ್ದೇವೆ. ನಮ್ಮ ಗ್ರಾಹಕರು ಯಾವುದೇ ತೊಂದರೆಯಿಲ್ಲದೆ ಪಂದ್ಯಗಳನ್ನು ಪೂರ್ಣವಾಗಿ ಆನಂದಿಸಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ರಿಲಯನ್ಸ್‌ ಜಿಯೋ ಪ್ಲ್ಯಾನ್‌ಗಳ ವಿವರ ಇಂತಿವೆ :

ರೂ.999 ಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ವನ್ನು ಬಳಕೆ ಮಾಡಬಹುದಾಗಿದೆ. ಇದೊರೊಂದಿಗೆ 40 ಜಿಬಿ ಡೇಟಾ ಲಾಭವನ್ನು ನೀಡುವ 241 ರೂಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ.

ರೂ.399 ಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ವನ್ನು ಬಳಕೆ ಮಾಡಬಹುದಾಗಿದೆ. ಇರೊಂದಿಗೆ 6 ಜಿಬಿ ಡೇಟಾ ಲಾಭವನ್ನು ನೀಡುವ 61 ರೂಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ. ಇದೊರೊಂದಿಗೆ 40 ಜಿಬಿ ಡೇಟಾ ಲಾಭವನ್ನು ನೀಡುವ 241 ರೂಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ.

219ರೂ. ಗೆ 14 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ವನ್ನು ಬಳಕೆ ಮಾಡಬಹುದಾಗಿದೆ. ಜೊತೆಗೆ 2 ಜಿಬಿ ಡೇಟಾ ಲಾಭವನ್ನು ನೀಡುವ 25 ರೂ. ಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ. ಅಲ್ಲದೆ 40 ಜಿಬಿ ಡೇಟಾ ಲಾಭವನ್ನು ನೀಡುವ 241 ರೂ. ಗಳ ವೂಚರ್ ಸಹ ಉಚಿತವಾಗಿ ದೊರೆಯಲಿದೆ.

ಇನ್ನು ಡೇಟಾ ಆಡ್ ಆನ್ ಪ್ಲಾನ್ ಗಳು ಸಹ ಲಾಂಚ್ ಆಗಿದೆ. ಜಿಯೋ 222ರೂ, 50 ಜಿಬಿ ಡೇಟಾವನ್ನು ಬಳಕೆ ನೀಡಲಿದೆ. ಆದರೆ ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಪ್ಲಾನ್ ಮೇಲೆ ವ್ಯಾಲಿಡಿಟಿ ನಿರ್ಧಾರವಾಗಲಿದೆ.

ಜಿಯೋ 444ರೂ. ಗೆ 60 ದಿನಗಳ ವ್ಯಾಲಿಡಿಟಿಗೆ 100 ಜಿಬಿ ಡೇಟಾವನ್ನು ನೀಡಲಿದೆ.

ಹಾಗೆಯೇ 667ರೂ. ಗೆ 90 ದಿನಗಳ ವ್ಯಾಲಿಡಿಟಿಗೆ 150 ಜಿಬಿ ಡೇಟಾ ನೀಡಲಿದೆ. ಈ ಪ್ಲಾನ್ ಗಳು ಮಾರ್ಚ್ 24 ರಿಂದ ಗ್ರಾಹಕರಿಗೆ ಲಭ್ಯವಿರುತ್ತದೆ.

ಜಿಯೋ ಟೆಲಿಕಾಂ 2999ರೂ. ವಾರ್ಷಿಕ ಪ್ಲಾನ್ ಪ್ರಯೋಜನಗಳು :
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಆದರೆ ಈ ಪ್ಲ್ಯಾನ್‌ನಲ್ಲಿ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ಲಭ್ಯವಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2.5GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದೆ.

ಒಟ್ಟಿನಲ್ಲಿ ಕ್ರಿಕೆಟ್ ಪ್ರಿಯರನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಗಳನ್ನು ಜಿಯೋ ವಿನ್ಯಾಸಗೊಳಿಸಿರುವುದಾಗಿದೆ.

Leave A Reply

Your email address will not be published.