Education News: ವಿದ್ಯಾರ್ಥಿಗಳಿಗಾಗಿ ಹೊಸ ಪ್ರಿಸ್ಕೂಲ್ ವಿಭಾಗ ಆರಂಭ! ಸರ್ಕಾರದ ನಿರ್ಧಾರ

Education Rules : ಈಗಾಗಲೇ ಜುಲೈ 2022 ರಲ್ಲಿ, ರಾಜ್ಯವು ಗ್ರೇಡ್ 1 ಗೆ ದಾಖಲಾತಿಗೆ ಕನಿಷ್ಠ ಆರು ವರ್ಷ ವಯಸ್ಸನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ (Education Rules) ನಿಯಮಕ್ಕೆ ಪ್ರತಿಯಾಗಿ ಕೆಲವು ಪ್ರಿಸ್ಕೂಲ್‌ಗಳು (preschool) 1ನೇ ತರಗತಿ ಪ್ರವೇಶಕ್ಕೆ ಅನರ್ಹರಾಗಿರುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಪೂರ್ವಸಿದ್ಧತಾ ವಿಭಾಗ ಆರಂಭಿಸಲು ಮುಂದಾಗಿವೆ.

 

ಸದ್ಯ ಪೂರ್ವಸಿದ್ಧತಾ ವಿಭಾಗಗಳಿಗೆ ವಯಸ್ಸಿನ ಮಾನದಂಡಗಳನ್ನು ಆಧರಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗುತ್ತದೆ. ಅಂದರೆ ಶಿಶುವಿಹಾರವನ್ನು ಪೂರ್ಣಗೊಳಿಸಿದ, ಆದರೆ ಇನ್ನೂ ಗ್ರೇಡ್ 1 ಪ್ರವೇಶಕ್ಕೆ ಅರ್ಹರೆಂದು ಪರಿಗಣಿಸುವ ವಯಸ್ಸನ್ನು ತಲುಪದ ಮಕ್ಕಳಿಗಾಗಿ ಇದನ್ನು ಯೋಜಿಸಲಾಗಿದೆ.
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕಲಿಕೆಯ ಪೂರಕ ಅಂಶವಾಗಿ ಈ ಪ್ರೀ ಸ್ಕೂಲ್​ ಇರುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಈ ವಿಭಾಗಕ್ಕಿ ಸೇರಿಸಬಹುದು.

ಮೊದಲು ವಯಸ್ಸಿನ ಮಿತಿ ಐದು ವರ್ಷ 10 ತಿಂಗಳುಗಳಾಗಿತ್ತು. ನಂತರ ಜುಲೈ 2022 ರಲ್ಲಿ, ರಾಜ್ಯವು ಗ್ರೇಡ್ 1 ಗೆ ದಾಖಲಾತಿಗೆ ಕನಿಷ್ಠ ಆರು ವರ್ಷ ವಯಸ್ಸನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದ್ದು, ಈ ನಡುವಿನ ವಯಸ್ಸಿನ ಮಕ್ಕಳ ವಿಭಾಗವನ್ನು ಶಿಶುವಿಹಾರ ಹಾಗೂ ಪೂರ್ವ ಸಿದ್ದತಾ ಹಂತ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಪೋಷಕರು ತಮ್ಮ ಮಕ್ಕಳನ್ನು ಒಂದೇ ತರಗತಿಯಲ್ಲಿ ಹೆಚ್ಚುವರಿ ವರ್ಷ ಇರಿಸಿಕೊಳ್ಳಲು ಇಷ್ಟಪಡುವುದಿಲ್ಲ ಆ ಕಾರಣಕ್ಕಾಗಿ ಈ ರೀತಿ ವಿಭಾಗ ಮಾಡಲಾಗಿದೆ. ಆದರೆ ಶಾಲಾ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ‘ಬ್ರಿಡ್ಜ್’ ಕೋರ್ಸ್ ಅನ್ನು ಸಮರ್ಥಿಸುತ್ತಾ, ಹೊಸ ವಯಸ್ಸಿನ ಮಿತಿಯು 2025 ರಿಂದ ಜಾರಿಗೆ ಬಂದರೂ ಗೊಂದಲ ಬೇಡ ಎಂದು ಇಲಾಖೆಯಿಂದ ತಿಳಿಸಲಾಗಿದೆ.

Leave A Reply

Your email address will not be published.