Rakhi Sawant : ಯಾರೀ ಕೆ ಎಲ್ ರಾಹುಲ್? ನಟಿ ರಾಖಿ ಸಾವಂತ್ ಹೀಗ್ಯಾಕೆ ಹೇಳಿದ್ದು?

Actress Rakhi Sawant : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಅಂದರೆ ಯಾರಿಗೆ ಗೊತ್ತಿಲ್ಲಾ ಹೇಳಿ. ಆದರೆ ಇಲ್ಲೊಂದು ಆಶ್ಚರ್ಯ ಕಾದಿದೆ ಏನಿದು ನೋಡೋಣ.

ನಟಿ ರಾಖಿ ಸಾವಂತ್ (Actress Rakhi Sawant) ಪ್ರತೀ ಬಾರಿ ಒಂದಲ್ಲ ಒಂದು ಬೋಲ್ಡ್ ಹೇಳಿಕೆಗಳಿಂದ ತಮ್ಮ ವೈಯುಕ್ತಿಕ ಜೀವನದಲ್ಲಾಗುವ ಘಟನೆಗಳಿಂದ ಮತ್ತು ತಮ್ಮ ಸ್ಟೈಲ್ ನಿಂದಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಆಗಿದ್ದಾರೆ. ಈಗ ಮತ್ತೊಮ್ಮೆ ರಾಖಿ ಸಾವಂತ್ ಅವರು ಸುದ್ದಿಯಲ್ಲಿದ್ದಾರೆ ನೋಡಿ, ಅದು ಏನಕ್ಕೆ ಅಂತ ಅಂದುಕೊಂಡಿದ್ದೀರಿ? ಒಬ್ಬ ಜನಪ್ರಿಯ ಕ್ರಿಕೆಟ್ ಆಟಗಾರನನ್ನು ಗುರುತಿಸದೆ ಯಾರು ಅಂತ ಕೇಳಿದ್ರಂತೆ ರಾಖಿ ಸಾವಂತ್.

ಸದ್ಯ ಲಂಡನ್ ಪ್ರವಾಸ ಮುಗಿಸಿಕೊಂಡು ಗುರುವಾರದಂದು ಮುಂಬೈಗೆ ರಾಖಿ ಸಾವಂತ್ ಮರಳಿದ್ದಾರೆ. ಅದೇ ಸಮಯದಲ್ಲಿ, ಕ್ರಿಕೆಟಿಗ ಕೆ ಎಲ್ ರಾಹುಲ್ (KL Rahul) ಕೂಡ ಅದೇ ಸ್ಥಳಕ್ಕೆ ಬಂದರು. ಆದರೆ ರಾಖಿ ಸಾವಂತ್ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲವಂತೆ. ನಂತರ ಏನಾಯಿತು ನೋಡೋಣ.

ರಾಖಿ ಸಾವಂತ್ ಅವರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಪ್ರದೇಶದ ಮೂಲಕ ನಿರ್ಗಮನದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಕ್ರಿಕೆಟಿಗ ಕೆ ಎಲ್ ರಾಹುಲ್ ತನ್ನ ಪಕ್ಕದಲ್ಲಿ ಇರುವ ಕಾರಿನಲ್ಲಿ ಕುಳಿತಿದ್ದಾರೆ ಎಂದು ಪಾಪರಾಜಿಗಳು ಹೇಳಿದರು. ಆಗ ರಾಖಿ ಆ ಕಾರನ್ನು ನೋಡಿದರು, ನಂತರ ಮತ್ತೆ ಶಟರ್ ಬಗ್ಸ್ ಕಡೆಗೆ ತಿರುಗಿ “ಯಾರು ಈ ಕೆ ಎಲ್ ರಾಹುಲ್?” ಎಂದು ಕೇಳಿದರಂತೆ.

ನಂತರ ಅಲ್ಲಿಯೇ ಇದ್ದಂತಹ ಫೋಟೋಗ್ರಾಫರ್ ಕೆ ಎಲ್ ರಾಹುಲ್ ಒಬ್ಬ ಕ್ರಿಕೆಟಿಗ ಅಂತ ಹೇಳುವುದರೊಂದಿಗೆರಾಖಿಗೆ ರಾಹುಲ್ ಅವರನ್ನು ಗುರುತಿಸಲು ಸಹಾಯ ಮಾಡಿದರು.ಇಷ್ಟೇ ಅಲ್ಲದೆ, ಅವರು ರಾಖಿ ಅವರಿಗೆ ಬೇಗನೆ ಅರ್ಥವಾಗಲಿ ಅಂತ ರಾಹುಲ್ ಅವರು ನಟ ಸುನೀಲ್ ಶೆಟ್ಟಿ ಅವರ ಅಳಿಯ ಅಂತ ಸಹ ಹೇಳಿದರಂತೆ ಎಂದು ಹೇಳಲಾಗುತ್ತಿದೆ.

ಕೊನೆಗೆ ಇಷ್ಟೆಲ್ಲಾ ಕೇಳಿಸಿಕೊಂಡ ರಾಖಿಗೆ ರಾಹುಲ್ ಯಾರು ಅಂತ ನೆನಪಾದರಂತೆ. ಆಗ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರೊಂದಿಗೆ ಮದುವೆಯಾಗಿದ್ದಕ್ಕೆ ಅವರಿಬ್ಬರಿಗೂ ಮದುವೆಯ ಶುಭಾಶಯಗಳನ್ನು ಸಹ ತಿಳಿಸಿದರು.ರಾಹುಲ್ ತನ್ನ ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸಿದ್ದರೆ, ವೈಯಕ್ತಿಕವಾಗಿ ಅವರಿಗೆ ಮದುವೆಯ ಅಭಿನಂದನೆಗಳನ್ನು ಹೇಳುತ್ತಿದ್ದೆ ಅಂತ ಸಹ ರಾಖಿ ಹೇಳಿದರು. ಈ ಸಂಭಾಷಣೆಯ ವೀಡಿಯೋವನ್ನು ಪಾಪರಾಜಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗಷ್ಟೇ ತಮ್ಮ ತಾಯಿಯ ನಿಧನ ಬಗ್ಗೆ ಮತ್ತು ತಮ್ಮ ವೈವಾಹಿಕ ಜೀವನದಲ್ಲಿ ಆದ ಘಟನೆಗಳ ಬಗ್ಗೆ ತಮ್ಮ ಅಭಿಮಾನಿಗಳ ಜೊತೆಗೆ ಮುಕ್ತವಾಗಿ ಹಂಚಿಕೊಂಡ ರಾಖಿ ಸಾವಂತ್ ಜೀವನದಲ್ಲಿ ಇದುವರೆಗೆ ನಡೆದ ಎಲ್ಲಾ ಕಹಿ ಘಟನೆಗಳನ್ನು ಮತ್ತು ನೋವು ತಂದಿರುವ ಘಟನೆಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗುವುದಾಗಿ ಹೇಳಿಕೊಂಡಿದ್ದರು. ಇದೀಗ ಯಾರು ಈ ಕೆ ಎಲ್ ರಾಹುಲ್?” ಮತ್ತೇ ಸುದ್ದಿ ಆಗಿದ್ದಾರೆ.

ಇದನ್ನೂ ಓದಿ: Eye Dark Circles: ಕಣ್ಣಿನ ಕೆಳಭಾಗದ ವರ್ತುಲ ಕಪ್ಪಾಗಿದೆಯೇ? ಇದಕ್ಕೆ ಮುಖ್ಯ ಕಾರಣವೇನು? ಸರಿಪಡಿಸುವ ರೀತಿ ಹೇಗೆ?

Leave A Reply

Your email address will not be published.