Ration Card Rules : ಪಡಿತರ ಚೀಟಿದಾರರೇ ಗಮನಿಸಿ, ಈ ನಾಲ್ಕು ಕಾರಣ ನಿಮ್ಮ ಕಾರ್ಡನ್ನು ರದ್ದು ಮಾಡಿಸುತ್ತೆ!

Ration Card Rules : ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಕೇಂದ್ರ ಸರ್ಕಾರ (Central Government) ಪಡಿತರ ವಿತರಣೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮ ಜಾರಿಗೆ(Ration Card Big Update) ತಂದಿದ್ದು, ಈ ನಡುವೆ ಪಡಿತರ ಚೀಟಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ.

 

ಕೇಂದ್ರ ಸರ್ಕಾರದಿಂದ ಲಕ್ಷಾಂತರ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೌಲಭ್ಯ ಲಭ್ಯವಾಗುತ್ತಿದೆ. 2023ರಲ್ಲಿಯೂ ಪಡಿತರ ಚೀಟಿದಾರರಿಗೆ ಉಚಿತ ಪಡಿತರ(Free Ration) ಸೌಲಭ್ಯ ಲಭ್ಯವಾಗುವ ಕುರಿತು ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಇದರ ನಡುವೆ, ಪಡಿತರ ಚೀಟಿಯ ಸೌಲಭ್ಯವನ್ನು ಅನರ್ಹರು ಕೂಡ ಪಡೆಯುವುದನ್ನು ಗಮನದಲ್ಲಿರಿಸಿಕೊಂಡು ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ (Government) ಕ್ರಮ ಕೈಗೊಳ್ಳುತ್ತಿದೆ. ಹೀಗಿದ್ದರೂ ಕೂಡ ಕೆಲವರು ಅಕ್ರಮವಾಗಿ ಉಚಿತ ಪಡಿತರದ ಪ್ರಯೋಜನ ಪಡೆಯುತ್ತಿದ್ದು, ಇವರ ವಿರುದ್ದ ಕಠಿಣ ಕ್ರಮ(Ration Card Rules) ಕೈಗೊಳ್ಳುವ ಕುರಿತು ಸರ್ಕಾರ ಎಚ್ಚರಿಕೆ ನೀಡಿದೆ.

ಸರಕಾರದ ನಿಯಮದ ಅನ್ವಯ ಇವರನ್ನು ಪಡಿತರ ಚೀಟಿಗೆ ಅನರ್ಹರು ಎಂದು ಪರಿಗಣಿಸಲಾಗುತ್ತದೆ. ಪಡಿತರ ಕಾರ್ಡ್ ಹೊಂದಿರುವವರು 100 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್/ಫ್ಲಾಟ್ ಅಥವಾ ಮನೆಯನ್ನು ಹೊಂದಿದ್ದರೆ, ಇಲ್ಲವೇ ನಾಲ್ಕು ಚಕ್ರದ ವಾಹನ/ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ, ಕುಟುಂಬದ ಆದಾಯವು ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಉಚಿತ ಪಡಿತರ ಸೌಲಭ್ಯ ಪಡೆಯಲು ಅರ್ಹರಲ್ಲ. ಇದರ ಜೊತೆಗೆ ನಗರದಲ್ಲಿ ಮೂರು ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಸ್ವಂತ ಆದಾಯದಿಂದ ಗಳಿಸಿದವರು ಪಡಿತರ ಚೀಟಿಯನ್ನು ಪಡೆಯಲು ತಹಸಿಲ್ ಮತ್ತು ಡಿಎಸ್ಒ ಕಚೇರಿಯಲ್ಲಿ ಸರೆಂಡರ್ ಮಾಡಬೇಕಾಗುತ್ತದೆ.

ಸರ್ಕಾರದ ನಿಯಮಗಳ ಅನುಸಾರ, ಪಡಿತರ ಚೀಟಿದಾರರು ಕಾರ್ಡ್ ಅನ್ನು ಸರೆಂಡರ್ (Surrender) ಇಲ್ಲವೇ ಒಪ್ಪಿಸದೆ ಇದ್ದಲ್ಲಿ ತನಿಖೆಯ ನಂತರ ಅಂತಹ ಜನರ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಇದಲ್ಲದೆ, ಇಂತಹವರ ಕುಟುಂಬದ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಅಕ್ರಮವಾಗಿ ಉಚಿತ ಪಡಿತರ ಸೌಲಭ್ಯ ಪಡೆಯುತ್ತಿದ್ದ ಮಂದಿಯಿಂದ ಪಡಿತರವನ್ನೂ ಕೂಡ ವಸೂಲಿ ಮಾಡಲಾಗುತ್ತದೆ.ಹೀಗಾಗಿ, ಅಕ್ರಮವಾಗಿ ಉಚಿತ ಪಡಿತರದ ಸೌಲಭ್ಯ ಪಡೆಯುತ್ತಿದ್ದರೆ, ತಾವಾಗಿಯೇ ಪಡಿತರ ಚೀಟಿಯನ್ನು ರದ್ದುಪಡಿಸಬೇಕು(Cancel) ಎಂದು ಸರಕಾರದ ವತಿಯಿಂದ ಜನರಲ್ಲಿ ಮನವಿ ಮಾಡಲಾಗಿದೆ. ಒಂದು ವೇಳೆ, ಪಡಿತರ ಚೀಟಿ ರದ್ದುಪಡಿಸದಿದ್ದರೆ ಆಹಾರ ಇಲಾಖೆ ತಂಡ ಪರಿಶೀಲನೆ ಬಳಿಕ ರದ್ದು ಮಾಡಿ ಇವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.

Leave A Reply

Your email address will not be published.