UPI Payment: ಈ ಬ್ಯಾಂಕ್‌ಗಳಲ್ಲಿ ಪಿನ್ ಇಲ್ಲದೆಯೇ ಯುಪಿಐ ಪಾವತಿ ಮಾಡಬಹುದು!!

UPI Payment: ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಯುಪಿಐ (UPI Payment) ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಇದು ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್‌ ಪೇ (Google Pay), ಪೇಟಿಎಂ (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ. ಹೇಳಿ ಕೇಳಿ ಡಿಜಿಟಲ್ ಯುಗ ಎಲ್ಲದರಲ್ಲೂ ಬದಲಾವಣೆಯಾಗಿದ್ದು, ಹಿಂದಿನಂತೆ ಬ್ಯಾಂಕ್ಗಳ (bank) ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ (smartphone) ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲಾ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ.

 

ಭಾರತ ಮೂಲದ ಪೇಟಿಎಂ ಪೇಮೆಂಟ್ ಬ್ಯಾಂಕ್ ರಿಯಲ್ ಟೈಮ್ ಯುಪಿಐ ಪೇಮೆಂಟ್ಸ್ ಅನ್ನು ಆರಂಭಿಸಿದ್ದು, ಇದರಲ್ಲಿ ಒಂದು-ಟ್ಯಾಪ್‌ನಲ್ಲಿ ಯುಪಿಐ ಪಾವತಿಗಳನ್ನು ಸಕ್ರಿಯಗೊಳಿಸಬಹುದು. ಹೆಚ್ಚಿನ ಹಣ ವರ್ಗಾವಣೆ ಇದ್ದರೂ ಯಾವುದೇ ಸಮಸ್ಯೆ ಇಲ್ಲದೆ ಯಶಸ್ವಿಯಾಗಿ ಮಾಡಬಹುದಾಗಿದೆ.
ಯುಪಿಐ ಲೈಟ್ ಆಪ್‌ನಲ್ಲಿ ಮಾಡುವ ವಹಿವಾಟು ಪೇಟಿಎಂ ಬ್ಯಾಲೆನ್ಸ್‌ ಮತ್ತು ಹಿಸ್ಟರಿಯಲ್ಲಿ ಸಿಗುತ್ತದೆ. ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಲಭ್ಯವಾಗುವುದಿಲ್ಲ. ಯುಪಿಐ ಲೈಟ್‌ನಲ್ಲಿ ಹಣದ ವಹಿವಾಟನ್ನು ಆನ್‌ಲೈನ್ ಮೋಡ್‌ನಲ್ಲಿ ಎಎಫ್‌ಎ ಅಥವಾ ಯುಪಿಐ ಆಟೋಪೇನಲ್ಲಿ ಮಾತ್ರ ಅನುಮತಿಸಲಾಗುತ್ತದೆ.

ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಬಹುದಾಗಿದೆ. ಇದು ಶೀಘ್ರವಾಗಿ ನಡೆಸಬಹುದಾದ ವಹಿವಾಟಾಗಿದೆ. ಸದ್ಯ ಈ ಬ್ಯಾಂಕ್‌ಗಳಲ್ಲಿ ಪಿನ್ ಇಲ್ಲದೆಯೇ ಯುಪಿಐ ಪಾವತಿಗೆ ಅವಕಾಶವಿದೆ. ಯಾವ ಬ್ಯಾಂಕ್? ಮಾಹಿತಿ ತಿಳಿಯೋಣ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಕೆನರಾ ಬ್ಯಾಂಕ್ (canara bank), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC), ಇಂಡಿಯನ್ ಬ್ಯಾಂಕ್ ,ಕೋಟಕ್ ಮಹೀಂದ್ರಾ ಬ್ಯಾಂಕ್ (kotak mahindra bank), ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) , ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಇವುಗಳು ಪೇಟಿಎಂ ಯುಪಿಐ ಲೈಟ್‌ಗೆ ಸಹಕಾರಿಯಾದ 10 ಬ್ಯಾಂಕುಗಳು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಯುಪಿಐ ಲೈಟ್ (UPI-LITE) ಫೀಚರ್ ಅನ್ನು ಜಾರಿ ಮಾಡಿದ್ದು, ಈ ಫೀಚರ್ ಮೂಲಕ ಯುಪಿಐ ಆಪ್‌ನಲ್ಲಿ 200 ರೂಪಾಯಿವರೆಗೆ ಯಾವುದೇ ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಬಹುದು. ಕಳೆದ ವರ್ಷ ಆರ್‌ಬಿಐ ಈ ಫೀಚರ್‌ ಅನ್ನು ಘೋಷಿಸಿದೆ. ಆದರೆ ಈವರೆಗೆ ಯಾವುದೇ ಯುಪಿಐ ವಹಿವಾಟು ಆಪ್‌ಗಳಲ್ಲಿ ಈ ಫೀಚರ್‌ ಅಳವಡಿಕೆ ಮಾಡಲಾಗಿಲ್ಲ. ಆದರೆ ಈಗ ಪೇಟಿಎಂ ಈ ಫೀಚರ್ ಅನ್ನು ಆರಂಭಿಸಿದೆ ಎನ್ನಲಾಗಿದೆ.

Leave A Reply

Your email address will not be published.