Weird Culture : ಮಗು ಕಪ್ಪಾಗಿದ್ರೆ ಬದುಕು, ಬೆಳ್ಳಗಿದ್ದರೆ ಸಾವು ಖಚಿತ! ಈ ವಿಚಿತ್ರ ಆಚರಣೆ ಇರುವುದು ಭಾರತದಲ್ಲೇ! ಎಲ್ಲಿ, ಯಾಕೆ ಎಂಬುವುದರ ಕಂಪ್ಲೀಟ್ ವಿವರ ಇಲ್ಲಿದೆ!
Weird Culture: ಭಾರತದಲ್ಲಿ ಅನೇಕ ಆಚಾರ ವಿಚಾರಗಳನ್ನು(Culture) ಅನುಸರಿಸುವ ಮಂದಿಯಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಶ್ರೀಮಂತ ಸಂಸ್ಕೃತಿ ನಮ್ಮದು. ಕಾಲ ಎಷ್ಟೇ ಬದಲಾದರೂ ಕೂಡ ಇಂದಿಗೂ ಜನರ ಆಚಾರ ವಿಚಾರಗಳು, ಯೋಚನಾ ಲಹರಿ ಕೆಲ ಕಡೆಗಳಲ್ಲಿ ಬದಲಾಗಿಲ್ಲ ಎಂಬುದನ್ನು ರುಜುವಾತು ಮಾಡುವ ಕೆಲ ಸಂಪ್ರದಾಯಗಳು ಈಗಲೂ ರೂಡಿಯಲ್ಲಿದೆ ಎನ್ನುವುದು ಅಷ್ಟೇ ಸತ್ಯ. ನಮ್ಮಲ್ಲಿ ಮನೆಯಲ್ಲಿ ಮಗುವೊಂದು(Child) ಬೆಳ್ಳಗೆ ಹುಟ್ಟಿದರೆ ಸಾಕು!! ಮನೆ ಮಂದಿಯೆಲ್ಲಾ ಖುಶಿ ಸಂಭ್ರಮದಿಂದ ತೇಲಾಡುತ್ತಾರೆ. ಆದರೆ ಇಲ್ಲೊಂದು ಕಡೆ, ಬೆಳ್ಳಗೆ ಮಗು ಹುಟ್ಟಿದರೆ ಮಗು ಸಾವಿನ ಕದ ತಟ್ಟುವುದು ಗ್ಯಾರಂಟಿ!!
ಭಾರತದಲ್ಲಿ ಅನೇಕ ಜಾತಿಗಳು(Cast) ಮತ್ತು ಬುಡಕಟ್ಟು ಸಮುದಾಯದವರು ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಕಾಲ ಬದಲಾದಂತೆ ಜನರು ಬದುಕುವ ಶೈಲಿ(Life Style) ಕೂಡ ಬದಲಾಗುತ್ತದೆ. ಇಂದು ಹೆಚ್ಚಿನವರು ಆಧುನಿಕತೆಗೆ ಒಗ್ಗಿಕೊಂಡಿದ್ದರೆ ಮತ್ತೆ ಕೆಲ ಬುಡಕಟ್ಟು ಸಮುದಾಯ ಶಿಲಾಯುಗದಂತೆ ಜೀವಿಸುತ್ತಿದೆ( Weird Culture)ಎಂದು ಕೇಳಿದಾಗ ಅಚ್ಚರಿಯಾದರೂ ಸತ್ಯ. ಭಾರತದ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ವಾಸಿಸುವ ಜಾರ್ವಾ ಎಂಬ ಬುಡಕಟ್ಟು ಜನಾಂಗ ಈಗಲೂ ಶಿಲಾಯುಗದ ರೀತಿ ಬದುಕುತ್ತಿದ್ದಾರಂತೆ.
ಜಾರ್ವ ಎಂಬ ಬುಡಕಟ್ಟು ಜನಾಂಗದ ಜೀವನ ಶೈಲಿ ಕೇಳಿದರೆ ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಈಗ ಎಲ್ಲರೂ ಆಧುನಿಕತೆಯ (Modernization)ಕಡೆಗೆ ಮುಖ ಮಾಡಿದರೆ, ಈ ಜನಾಂಗ(Religion) ಮಾತ್ರ ಹಳೆ ಆಚರಣೆಯಲ್ಲಿ ಮುಳುಗಿ ಹೋಗಿದೆ. ಮಗು ಎಂದರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ!! ಆದರೆ, ಈ ಬುಡಕಟ್ಟು ಸಮುದಾಯದಲ್ಲಿ ಬೆಳ್ಳಗಿನ ಮಗುವಿಗೆ ಜೀವಿಸುವ ಹಕ್ಕಿಲ್ಲ ಎಂದರೆ ನಂಬಲು ಕಷ್ಟವಾದರೂ ನಿಜ. ಈ ಬುಡಕಟ್ಟಿನಲ್ಲಿ, ಕಪ್ಪು ಮಗು ಅಥವಾ ಮಕ್ಕಳನ್ನು ಹೊಂದುವುದು ಅನಿವಾರ್ಯ.ಇದಕ್ಕಾಗಿ ಗರ್ಭಿಣಿ ಮಹಿಳೆ ಪ್ರಾಣಿಗಳ ರಕ್ತವನ್ನೂ ಸೇವಿಸುತ್ತಾರಂತೆ. ಅಷ್ಟೆ ಅಲ್ಲದೇ ಇವರ ನಂಬಿಕೆ ಕೂಡ ವಿಚಿತ್ರ ಎಂದೆನಿಸದೆ ಇರದು. ಪ್ರಾಣಿಗಳ ರಕ್ತ ಕುಡಿದ ಬಳಿಕ ಹುಟ್ಟಿದ ಮಗುವಿನ ಬಣ್ಣ ಕಪ್ಪಾಗುತ್ತದೆ ಎಂಬುದು ಇವರ ಬಲವಾದ ನಂಬಿಕೆ.
ಈಗ ಕೇವಲ 380 ಜಾರ್ವಾ ಬುಡಕಟ್ಟು ಉಳಿದಿದ್ದು, ಈ ಬುಡಕಟ್ಟಿನ ಜನರು ಇಂದಿಗೂ ಬೇಟೆಯಾಡಿ ಬದುಕಿನ ದಾರಿ ಕಂಡುಕೊಂಡಿದ್ದಾರೆ. ಮೀನು ಅಥವಾ ಏಡಿಗಳನ್ನು ಬಿಲ್ಲು ಮತ್ತು ಬಾಣಗಳನ್ನು ಮೂಲಕ ಬೇಟೆಯಾಡಿದರೆ, ಹಂದಿಗಳನ್ನು ಗುಂಪನ್ನೂ ಗುಂಪು ಗುಂಪಾಗಿ ಬೇಟೆಯಾಡುತ್ತಾರಂತೆ. ಒಂದು ವೇಳೆ, ಈ ಜನಾಂಗದಲ್ಲಿ ಹಾವೋಕ್ ಪದ್ದತಿ ಅನುಸಾರ ಸುಂದರ ಬೆಳ್ಳಗೆ ಇರುವ ಮಗು ಹುಟ್ಟಿದರೆ ಮಗುವಿಗೆ ಜನ್ಮ ನೀಡಿದ ತಂದೆಯಿಂದಲೇ ಸಾವಿನ ಮನೆಗೆ ಆಹ್ವಾನ ಪಡೆದುಕೊಳ್ಳುವ ವಿಚಿತ್ರ ಪದ್ಧತಿಯಿದ್ದು ತಂದೆಯೇ ಮಗುವನ್ನು ಕೊಲ್ಲುತ್ತಾರಂತೆ. ಹೆಣ್ಣೊಬ್ಬಳು ವಿಧವೆ ಯಾದಲ್ಲಿ ಆಕೆಯ ಖುಷಿಗೆ ಕಾರಣವಾಗಿ ಆಸರೆಯಾಗಿ ನಿಲ್ಲುವ ಮಕ್ಕಳೇ ಆಕೆಯೊಂದಿಗೆ ಇರಲು ಅವಕಾಶವೇ ಇಲ್ಲ ಎಂದರೇ ಆಕೆಯ ಜೀವನ ಊಹಿಸಲು ಅಸಾಧ್ಯ!! ಆದರೆ, ಇಲ್ಲಿ ಹೆಣ್ಣು ವಿಧವೆಯಾದರೆ ಆಕೆಯ ಮಕ್ಕಳನ್ನು ಕೂಡ ಕೊಲ್ಲುವ ಕ್ರಮವಿದೆಯಂತೆ. ಅಷ್ಟೆ ಅಲ್ಲದೇ, ಈ ಬುಡಕಟ್ಟಿನ ಜನರು ಇತರ ಜನರೊಂದಿಗೆ ಬೆರೆಯುವ ಅವಕಾಶ ಕೂಡ ಇಲ್ಲ.
ಜಾರ್ವಾ ಬುಡಕಟ್ಟಿನಲ್ಲಿ ಒಂದು ಮಹಿಳೆ ಸುಂದರ, ಬಿಳಿ ಮಗುವಿಗೆ ಜನ್ಮ ನೀಡಿದರೆ, ಆ ಮಗುವನ್ನು ತಕ್ಷಣವೇ ಕೊಲ್ಲಲಾಗುತ್ತದೆ. ಅಷ್ಟಕ್ಕೂ ಈ ರೀತಿ ಮಾಡಲು ಕಾರಣವೇನು ಎಂದು ತಿಳಿಯ ಹೊರಟರೆ, ಜಾರ್ವಾ ಬುಡಕಟ್ಟು ಜನರು ಕಪ್ಪಾಗಿದ್ದು, ಈ ಸಮುದಾಯದವರ ಬಣ್ಣ ಕೂಡ ಕಪ್ಪಂತೆ. ಹೀಗಾಗಿ, ಬಿಳಿ ಚರ್ಮದ ಮಗುವನ್ನು ಬೇರೆ ಬುಡಕಟ್ಟು ಇಲ್ಲವೇ ಸಮುದಾಯಕ್ಕೆ ಸೇರಿದೆ ಎಂದು ಭಾವಿಸಿ ಕೊಲ್ಲಲಾಗುತ್ತದೆ. ಈ ಬುಡಕಟ್ಟಿನಲ್ಲಿ ಮಗು ಜನಿಸಿದರೆ ಆ ಬುಡಕಟ್ಟಿನ ಎಲ್ಲ ಮಹಿಳೆಯರು ಸಹ ಎದೆಹಾಲು ಉಣಿಸುತ್ತಾರಂತೆ. ಇದಕ್ಕೂ ಕಾರಣವಿದೆ. ಇಲ್ಲಿ ಎಲ್ಲರೂ ಒಟ್ಟಾಗಿ ಸಹ ಬಾಳ್ವೆಯಿಂದ ಬಾಳಬೇಕು ಎಂಬುದೇ ಇದರ ಉದ್ದೇಶ. ಇಲ್ಲಿನ ಆಚರಣೆ ಜೀವನ ಶೈಲಿ ಕೇಳಿದಾಗಲೇ ಅಚ್ಚರಿಯಾಗುತ್ತದೆ. ಏನೇ ಆದರೂ ಇವರ ಜೀವನ ಶೈಲಿಯಿಂದ ಲೋಕವನ್ನು ಕಾಣದ ಏನೂ ಅರಿಯದ ಮುಗ್ದ ಕಂದಮ್ಮಗಳು ಸಾವಿನ ಮನೆಗೆ ಯಾತ್ರೆ ಮಾಡುತ್ತಿರುವುದು ಮಾತ್ರ ವಿಪರ್ಯಾಸ.
ಇದನ್ನೂ ಓದಿ: ಹೆಣ್ಣುಮಕ್ಕಳನ್ನು ಬಾಲ್ಯದಿಂದಲೇ ಸ್ವಾವಲಂಬಿಗಳನ್ನಾಗಿ ಮಾಡಿ, ಅಧ್ಯಯನದ ಜೊತೆಗೆ ಈ ಪ್ರಮುಖ ವಿಷಯಗಳನ್ನು ಕಲಿಸಿ