BMW Bike : ಬಿಎಂಡಬ್ಲ್ಯು ಕಂಪನಿಯ ಈ ಬೈಕ್ ಬೆಲೆ 35 ಲಕ್ಷ! ಯಾಕೆ ಇಷ್ಟು ದರ ?
BMW Bike: ಬೈಕ್ ಪ್ರಿಯರು ಯಾರಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಬೈಕ್ ಅಂದ್ರೆ ಭಾರೀ ಇಷ್ಟ. ಮಾರುಕಟ್ಟೆಯಲ್ಲೂ ವಿವಿಧ ವಿನ್ಯಾಸದ ಅತ್ಯುತ್ತಮ ಫೀಚರ್ ಇರೋ ಹಲವು ಬ್ರ್ಯಾಂಡ್ ನ ಬೈಕ್ ಗಳಿವೆ. ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ಬೈಕ್ ಖರೀದಿಗೆ ಹೋದರೆ ಬೆಲೆಯ ಚಿಂತೆ. ಹೌದು, ಬಿಎಂಡಬ್ಲ್ಯು ಕಂಪನಿಯ ಈ ಬೈಕ್ (BMW Bike) ಬೆಲೆ 35 ಲಕ್ಷ. ಯಾಕೆ ಇಷ್ಟು ದರ ಗೊತ್ತಾ?
ಜರ್ಮನಿ (Germany) ಮೂಲದ ಕಂಪನಿ ಬಿಎಮ್ಡಬ್ಲ್ಯು ದುಬಾರಿ ಬೆಲೆಯ ಬೈಕ್ಗಳನ್ನೂ (BMW Bike) ತಯಾರಿಸುತ್ತದೆ. ಈ ಕಂಪನಿ ತಯಾರಿಸಿರುವ ಆರ್ 18 ಟ್ರಾನ್ಸ್ಕಾಂಟಿನೆಂಟ್ ಬೈಕ್ ನ ಬೆಲೆ 35 ಲಕ್ಷ ರೂಪಾಯಿ. ಇದು ಭಾರತದಲ್ಲೂ ಬಿಡುಗಡೆಯಾಗಿದೆ. ಈ ಬೈಕ್ ನ ಎಕ್ಸ್ಶೋ ರೂಮ್ ಬೆಲೆ 31.50 ಲಕ್ಷ ರೂಪಾಯಿ ಆಗಿದ್ದು, ತೆರಿಗೆ ಹಾಗೂ ಇನ್ಸ್ಯುರೆನ್ಸ್ ಸೇರಿ 35 ಲಕ್ಷ ರೂಪಾಯಿಗಿಂತ ಹೆಚ್ಚಿದೆ.
ಬಿಎಂಡಬ್ಲ್ಯು ಆರ್18 ನಲ್ಲಿ ರೇನ್, ರೋಲ್ ಆಯಂಡ್ ರಾಕ್ ಎಂಬ ಮೂರು ರೈಡಿಂಗ್ ಮೋಡ್ಗಳಿವೆ. ರೋಲ್ ಮೋಡ್ನಲ್ಲಿ ಸೆಫ್ಟಿ ಫೀಚರ್ಗಳು ಹೆಚ್ಚು ಕಾರ್ಯನಿರ್ವಹಿಸುತ್ತದೆ. ರಾಕ್ ಮೋಡ್ನಲ್ಲಿ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯಿದೆ. ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಡೈನಾಮಿಕ್ ಎಂಜಿನ್ ಬ್ರೇಕ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕೀ ಲೆಸ್ ರೈಡ್ ಮತ್ತಿತರ ಫೀಚರ್ಗಳಿವೆ. ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಇದೆ.
ಬಿಎಂಡಬ್ಲ್ಯು ಆರ್18 ಟ್ರಾನ್ಕಾಂಟಿನೆಂಟನ್ 1802 ಸಿಸಿಯ (BMW R 18 Transcontinental) ಎಂಜಿನ್ನಲ್ಲಿ ಎರಡು ಸಿಲಿಂಡರ್ಗಳಿವೆ ಹಾಗೂ ಏರ್ಕೂಲ್ಡ್ ತಾಂತ್ರಿಕತೆ ಹೊಂದಿದೆ. ಇದು 427 ಕೆ.ಜಿ ಭಾರವಿದ್ದು, 24 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ನೀಡಲಾಗಿದೆ. ನಾಲ್ಕು ಲೀಟರ್ ಪೆಟ್ರೊಲ್ನ ರಿಸರ್ವ್ ಕೆಪಾಸಿಟಿಯೂ ಇದೆ. ಇದು 4750 ಆರ್ಪಿಎಮ್ನಲ್ಲಿ 89 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. 2000ರಿಂದ 4000 ಆರ್ಪಿಎಮ್ ಒಳಗೆ 150 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು ಆರು ಸ್ಪೀಡ್ನ ಗೇರ್ಬಾಕ್ಸ್ ಇದು ಹೊಂದಿದ್ದು, ಆಯಂಟಿ ಹೋಪಿಂಗ್ ಕ್ಲಚ್ ಕೂಡ ಇದೆ. ಹೆಚ್ಚುವರಿಯಾಗಿ ರಿವರ್ಸ್ ಗೇರ್ ಆಯ್ಕೆಯನ್ನೂ ನೀಡಲಾಗಿದೆ.
ಬಿಎಂಡಬ್ಲ್ಯು ಬೈಕ್ಗಳು ಕಾರುಗಳಂತೆಯೇ ದುಬಾರಿ. ಈ ಬೈಕ್ಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ಅತ್ಯಂತ ದಕ್ಷ ಸುರಕ್ಷತಾ ಫೀಚರ್ಗಳನ್ನು ಒಳಗೊಂಡಿದೆ. ವಿದೇಶದಲ್ಲಿಯೇ ತಯಾರಾಗಿ ಬಂದು ಭಾರತದಲ್ಲಿ ಮಾರಾಟವಾಗುವ ಬೈಕ್ಗಳಿಗೆ ಅದರ ಮೂಲ ಬೆಲೆಯಷ್ಟೇ ತೆರಿಗೆಯನ್ನೂ ಕಟ್ಟಬೇಕಾಗುತ್ತದೆ. ಹೀಗಾಗಿ ಈ ಬೈಕ್ ನ ಬೆಲೆ ದುಬಾರಿಯಾಗಿದೆ.