Aishwarya Rai: ಸಲ್ಮಾನ್ ಖಾನ್ ಜೊತೆಗಿನ ಪ್ರೀತಿಯ ದಿನಗಳು ಕೆಟ್ಟ ಕನಸಿದ್ದಂತೆ! ಐಶು-ಸಲ್ಲು ಬ್ರೇಕಪ್ ಗೆ ಕಾರಣವೇನು? ಅಷ್ಟಕ್ಕೂ ಐಶ್ವರ್ಯಾ ರೈ ಹೇಳಿದ್ದೇನು?

Aishwarya Rai :90ರ ದಶದಲ್ಲಿ ಬಾಲಿವುಡ್(Bollywood) ಅಡ್ಡದಲ್ಲಿ ಭಾರೀ ಸದ್ಧು ಮಾಡಿದ್ದ ಪ್ರೇಮಿಗಳ ಜೋಡಿ ಅಂದ್ರೆ ಅದು ಸಲ್ಮಾನ್‌ ಖಾನ್‌(Salman Khan) ಮತ್ತು ಐಶ್ವರ್ಯಾ ರೈ(Aishwarya Rai)ಅವರದ್ದು. ಹೌದು, ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತೆಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಅದೇ ಸಮಯದಲ್ಲಿ ಅವರ ಸಂಬಂಧ ಬ್ರೇಕಪ್‌ ಆಗಿ, ಹೆಚ್ಚು ಚರ್ಚೆಯಾಗಿತ್ತು. ಆದರೆ ಅಂದು ಮುಗಿದ ಈ ವಿಚಾರ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಅಂತೆಯೇ ಇದೀಗ ಮತ್ತೊಮ್ಮೆ ಸಲ್ಮಾನ್ ಜೊತೆಗಿನ ಬ್ರೇಕಪ್ ಕಥೆಯನ್ನು ಸ್ವತಃ ಐಶ್ವರ್ಯಾ ರೈ ಹೇಳಿದ್ದು ಈ ವಿಷಯ ಮತ್ತೆ ಜೀವಪಡೆದಂತಾಗಿದೆ.

ಹೌದು, 1999ರಲ್ಲಿ ತೆರೆಕಂಡ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಚಿತ್ರದಲ್ಲಿ ಮೊದಲ ಬಾರಿಗೆ ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ ಜೊತೆಯಾಗಿ ನಟಿಸಿದರು. ಬಣ್ಣದ ಲೋಕದಲ್ಲಿ ಐಶ್‌ ಆಗತಾನೇ ಪಯಣ ಆರಂಭಿಸಿದ್ದರು. ಅಷ್ಟರಲ್ಲಾಗಲೇ ಸಲ್ಮಾನ್‌ ಚಿತ್ರರಂಗಕ್ಕೆ ಕಾಲಿಟ್ಟ 10 ವರ್ಷ ಕಳೆದಿತ್ತು. ಅವರಿಗೆ ಸ್ಟಾರ್‌ ಪಟ್ಟವೂ ಸಿಕ್ಕಿತ್ತು. ಇಬ್ಬರ ನಡುವೆ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಶೂಟಿಂಗ್‌ ಸಮಯದಲ್ಲೇ ಆಪ್ತತೆ ಬೆಳೆಯಿತು. ಆದರೆ ನಂತರ ಅದು ಕಳಚಿಕೊಂಡಿತು. ವಿಷಯವೂ ಮರೆತಂತಾಗಿತ್ತು. ಆದರೀಗ ಸಲ್ಮಾನ್ ಜೊತೆಗಿನ ಬ್ರೇಕಪ್ ಬಗ್ಗೆ ಐಶ್ವರ್ಯಾ ರೈ ನೀಡಿರುವ ಹೇಳಿಕೆ ಮತ್ತೆ ವೈರಲ್ ಆಗುತ್ತಿದೆ.

ಅಂದಹಾಗೆ 2001ರಲ್ಲಿ ಬ್ರೇಕಪ್ ಆದ ನಂತರ, 2002 ರಲ್ಲಿ, ಐಶ್ವರ್ಯಾ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು. ಆದರೆ ಅವರ ಮಾತುಗಳು ತುಂಬಾನೇ ಆಘಾತಕಾರಿಯಾಗಿತ್ತು. ‘ನನ್ನ ಯೋಗಕ್ಷೇಮ, ನನ್ನ ವಿವೇಕ, ನನ್ನ ಘನತೆ ಮತ್ತು ನನ್ನ ಕುಟುಂಬದ ಘನತೆಯನ್ನು ಪರಿಗಣಿಸಿ, ಇದು ಸಾಕೆನಿಸುತ್ತಿದೆ. ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿಲ್ಲ. ಸಲ್ಮಾನ್ ಖಾನ್ ಅವರೊಂದಿಗಿನ ಅಧ್ಯಾಯ ನನಗೆ ದುಃಸ್ವಪ್ನವಾಗಿತ್ತು ಮತ್ತು ಅದು ಮುಗಿದಿದೆ . ನಾನು ದೇವರಿಗೆ ಕೃತಜ್ಞನಾಗಿದ್ದೇನೆ’ ಎಂದು ಐಶ್ವರ್ಯಾ ಹೇಳಿದ್ದರು.

ಅಲ್ಲದೆ ಇದರೊಂದಿಗೆ ‘ನಾನು ಸಲ್ಮಾನ್ ಖಾನ್ ಅವರ ಮದ್ಯದ ಚಟ, ಅವರ ನಿಂದನೆಯಿಂದ ಬೇಸತ್ತಿದ್ದೇನೆ. ಇದರ ಹೊರತಾಗಿಯೂ, ನಾನು ಅವನ ಬೆಂಬಲಕ್ಕೆ ನಿಂತಿದ್ದೆ. ಪ್ರತಿಯಾಗಿ ನನಗೆ ಸಿಕ್ಕಿದ್ದು ಅವನ ನಿಂದನೆ, ದ್ರೋಹ ಮತ್ತು ಅವಮಾನ. ನಾನು ಅವನ ಮತ್ತು ಅವನ ತಪ್ಪುಗಳ ಬಗ್ಗೆ ಮೌನವಾಗಿದ್ದರೂ, ಅವರ ಕುಟುಂಬ ಮತ್ತು ಸ್ನೇಹಿತರು ಬೇಜವಾಬ್ದಾರಿ ವದಂತಿಗಳನ್ನು ಹರಡುವ ಮೂಲಕ ನನ್ನ ಮತ್ತು ನನ್ನ ಕುಟುಂಬದ ಗೌರವ, ಘನತೆಗೆ
ಪದೇ ಪದೇ ದಾಳಿ ಮಾಡಿದ್ದಾರೆ’ ಎಂದಿದ್ದರು.

ಹೀಗಾಗಿಯೇ ಪ್ರತಿಯೊಬ್ಬ ಸ್ವಾಭಿಮಾನಿ ಮಹಿಳೆಯಂತೆ ನಾನು ಕೂಡ ಎರಡು ವರ್ಷಗಳ ಹಿಂದೆಯೇ ಈ ಸಂಬಂಧವನ್ನು ಮುಗಿಸಿದೆ. ಆದರೆ ನನ್ನ ಮೌನವನ್ನು ಎಲ್ಲರೂ ತಪ್ಪಾಗಿ ಭಾವಿಸಿ, ಅನೇಕ ನಟರೊಂದಿಗೆ ನಾನು ಕೆಲಸಾಡುವುದನ್ನು, ಅವರೊಂದಿಗಿದ್ಧ ಉತ್ತಮ ಸಂಬಂಧದ ಬಗ್ಗೆ ನನ್ನ ವಿರುದ್ಧ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿದ್ದರು ಎಂದು ಐಶ್ವರ್ಯಾ ಹೇಳಿದ್ದರು.

ಹಮ್‌ ದಿಲ್‌ ದೇ ಚುಕೆ ಸನಮ್‌’ ಸಿನಿಮಾದ ನಂತರ ಐಶ್ವರ್ಯಾ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾ ಹೋದರು. ಹಲವು ಸ್ಟಾರ್‌ ನಟರ ಜೊತೆಗೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಸಿನಿಮಾಗಳೂ ಸೂಪರ್‌ ಹಿಟ್‌ ಆಗತೊಡಗಿದವು. ಆದರೆ ಸಲ್ಮಾನ್‌ ಖಾನ್‌ಗೆ ಐಶ್ವರ್ಯಾ ಮೇಲೆ ಅನುಮಾನ ಇತ್ತು ಎನ್ನಲಾಗಿದೆ. ಅಭಿಷೇಕ್‌ ಬಚ್ಚನ್‌, ಶಾರುಖ್‌ ಖಾನ್‌ ಮುಂತಾದವರ ಜೊತೆಗೆ ಅವರು ಅಫೇರ್‌ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಸಲ್ಲುಗೆ ಸಂಶಯ ಇತ್ತಂತೆ. ಇದು ಕೂಡ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣ ಆಗಿತ್ತು. ಈ ಗುಣ ಐಶ್‌ಗೆ ಇಷ್ಟ ಆಗಿರಲಿಲ್ಲ. ಇಬ್ಬರ ಬ್ರೇಕಪ್‌ಗೆ ಇದೂ ಕೂಡ ಪ್ರಮುಖ ಕಾರಣ ಎನ್ನಲಾಗಿದೆ.

ಅಂದಹಾಗೆ ಆ ಸಮಯದಲ್ಲಿ ಶಾರುಖ್ ಖಾನ್(Shah Rukh Khan) ಅಭಿನಯದ ‘ಚಲ್ತೇ ಚಲ್ತೆ’ ಚಿತ್ರದಲ್ಲಿ ಐಶ್ವರ್ಯ ನಟಿಸಬೇಕಿತ್ತು. ಆದರೆ ಈ ಸಲ್ಮಾನ್ ಖಾನ್ ಕಾರಣದಿಂದ ಐಶ್ವರ್ಯಾ ಅವರನ್ನು ಕೈ ಬಿಡಲಾಯಿತು. ಚಿತ್ರದ ನಿರ್ಮಾಪಕರು ಅವರ ಬದಲಿಗೆ ರಾಣಿ ಮುಖರ್ಜಿ ಅವರನ್ನು ನೇಮಿಸಿದರು. ಅಲ್ಲದೆ ಇದರಿಂದ ಕೆರಳಿದ ಸಲ್ಲು, ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ಸಲ್ಮಾನ್ ಖಾನ್ ಸೆಟ್ ಗೆ ಬಂದು ಜೋರಾಗಿ ಕೂಗಾಡಿ, ರಂಪ ಮಾಡಿದ್ದರು ಎನ್ನಲಾಗಿತ್ತು. ಇದರೊಂದಿಗೆ ಚಿತ್ರದ ಸೆಟ್‌ನಲ್ಲಿ ಶಾರುಖ್ ಖಾನ್ ಜೊತೆ ಸಲ್ಮಾನ್ ಖಾನ್ ಜಗಳವಾಡಿದ್ದರಂತೆ.

ಸಲ್ಮಾನ್ ಖಾನ್ ಜೊತೆಗಿನ ಬ್ರೇಕ್ಅಪ್ ವಿಷಯವೆಲ್ಲಾ ತಣ್ಣಗಾದ ನಂತರ, ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ರೈ ಅವರ ನಿಕಟತೆ ಹೆಚ್ಚಾಯಿತು. ‘ಕ್ಯೋಂ ಹೋ ಗಯಾ ನಾ’ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಹತ್ತಿರ ಆದರು. ಆದರೆ ಇದರಿಂದ ಕೆರಳಿದ ಸಲ್ಮಾನ್, ಸಿಟ್ಟಿಗೆದ್ದು ವಿವೇಕ್ ಅವರನ್ನು ನಿಂದಿಸಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದರು. ವಿವೇಕ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಬಹಿರಂಗಪಡಿಸಿದ್ದರು. ಆದರೆ, ಈ ಪತ್ರಿಕಾಗೋಷ್ಠಿಗಾಗಿ ವಿವೇಕ್ ಭಾರಿ ಬೆಲೆ ತೆರಬೇಕಾಯಿತು. ಈ ಘಟನೆಯ ನಂತರ ಅವರು ಬಾಲಿವುಡ್‌ನಲ್ಲಿ ಕೆಲಸ ಮಾಡುವುದನ್ನೇ ನಿಲ್ಲಿಸಬೇಕಾಯಿತು.

ಇದನ್ನೂ ಓದಿ: Palm Itching : ಅಂಗೈ ತುರಿಸಿದರೆ ದುಡ್ಡು ಸಿಗುತ್ತದಂತೆ! ಜ್ಯೋತಿಷ್ಯ ಏನು ಹೇಳುತ್ತೆ!

Leave A Reply

Your email address will not be published.